ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಯಾವುದೇ ವಾಹನಗಳಾಗಲೀ ಅವುಗಳಿಗೆ ಚಲಿಸಲು ಮುಖ್ಯವಾಗಿ ಬೇಕಾಗಿರುವುದು ಟಯರ್‍‍ಗಳು. ಮೊದಲು ಟಯರ್‍‍ಗಳು ಟ್ಯೂಬ್‍‍ನೊಂದಿಗೆ ಬರುತ್ತಿದ್ದವು. ನಂತರದ ದಿನಗಳಲ್ಲಿ ಟ್ಯೂಬ್‍‍ಲೆಸ್ ಟಯರ್‍‍ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಟ್ಯೂಬ್‍‍ಲೆಸ್ ಟಯರ್‍‍ಗಳು ಕಾರ್, ಬೈಕ್ ಸೇರಿದಂತೆ ಎಲ್ಲಾ ವಾಹನಗಳಲ್ಲಿಯೂ ನೆಲೆಯೂರಿವೆ. ಇದುವರೆಗೂ ಒಂದೇ ಬಣ್ಣವನ್ನು ಹೊಂದಿರುತ್ತಿದ್ದ ಟಯರ್‍‍ಗಳು ಈಗ ಹಲವಾರು ಬಣ್ಣದೊಂದಿಗೆ ಬಿಡುಗಡೆಯಾಗಿವೆ. ಜನಪ್ರಿಯ ಟಯರ್ ಉತ್ಪಾದಕ ಕಂಪನಿಯಾದ ಸಿಯೆಟ್ ಈ ಟಯರ್‍‍ಗಳನ್ನು ಬಿಡುಗಡೆಗೊಳಿಸಿದೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್‍ ಕಂಪನಿಯ ಟಯರ್‍‍ಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಜನಪ್ರಿಯವಾಗಿರುವ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಿಯೆಟ್ ಕಂಪನಿಯು ಹಲವು ಬಣ್ಣಗಳಲ್ಲಿ ಟ್ಯೂಬ್‍‍ಲೆಸ್ ಟಯರ್‍‍ಗಳನ್ನು ಬಿಡುಗಡೆಗೊಳಿಸಿದೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್ ಈ ಟಯರ್‍‍ಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಿದ್ದು, ಕೆಲವು ದಿನಗಳವರೆಗೆ ಮಾತ್ರ ಇವುಗಳನ್ನು ಮಾರಾಟ ಮಾಡಲಿದೆ. ಆದರೆ ಎಂದಿನಿಂದ ಈ ಟಯರ್‍‍ಗಳನ್ನು ಮಾರಾಟ ಮಾಡಲಾಗುವುದು ಎಂದು ಕಂಪನಿಯು ತಿಳಿಸಿಲ್ಲ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಇದರ ಜೊತೆಗೆ ಈ ಬಣ್ಣದ ಟ್ಯೂಬ್‍‍ಲೆಸ್ ಟಯರ್‍‍ಗಳ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನೂ ಸಹ ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ ಈ ಬಣ್ಣದ ಟ್ಯೂಬ್‍‍ಲೆಸ್ ಟಯರ್‍‍ಗಳು ಆಟೋ ಮೊಬೈಲ್ ಪ್ರಿಯರ ಆಸಕ್ತಿಯನ್ನು ತಮ್ಮತ್ತ ಸೆಳೆದಿವೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಟಯರ್‍‍ಗಳು ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಕಪ್ಪು ಬಣ್ಣದ ಟಯರ್‍‍ಗಳು. ಆದರೆ ಸಿಯೆಟ್ ಕಂಪನಿಯು ಇದರ ಭಾವನೆಯನ್ನು ಬದಲಿಸಿದೆ. ಸಿಯೆಟ್ ಕಂಪನಿಯ ಬಣ್ಣದ ಟಯರ್‍‍ಗಳ ಸುದ್ದಿಯು ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಟಯರ್‍‍ಗಳನ್ನು ಬ್ಲೂ, ಆರೇಂಜ್ ಹಾಗೂ ಬ್ಲೂ ಆರೇಂಜ್ ಎಂಬ ಮೂರು ವಿಧದ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬಣ್ಣವನ್ನು ಟಯರಿನ ಪಾರ್ಶ್ವ ಭಾಗದಲ್ಲಿ ಕಾಣಬಹುದು. ಸಿಯೆಟ್ ಕಂಪನಿಯು ಈ ಬಣ್ಣವನ್ನು ಜೂಮ್ ರಾಡ್ ಟಯರ್‌ಗಳಲ್ಲಿ ಮಾತ್ರ ನೀಡಲಿದೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಎಲ್ಲಾ ಟಯರ್‌ಗಳನ್ನು ಸ್ಪೋರ್ಟ್ಸ್ ಬೈಕ್‌ಗಳಾದ ಯಮಹಾ ಎಫ್‌ಇಸಿ, ಯಮಹಾ ಫೇಜರ್, ಸುಜುಕಿ ಜಿಕ್ಸರ್ ಹಾಗೂ ಸುಜುಕಿ ಇಂಟ್ರೂಡರ್‌ಗಳಲ್ಲಿ ಬಳಸಲಾಗುತ್ತದೆ. ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾಗಿರುವ ಸಿಯೆಟ್ ಜೂಮ್ ರ್‍ಯಾಟ್ ಟಯರ್‌ಗಳು ಶೀಘ್ರದಲ್ಲಿಯೇ ನಿರ್ದಿಷ್ಟ ಸಿಯೆಟ್ ಟಯರ್ ಅಂಗಡಿಗಳಲ್ಲಿ ಮಾರಾಟವಾಗಲಿವೆ ಎಂದು ಸಿಯೆಟ್ ಕಂಪನಿ ತಿಳಿಸಿದೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಈ ಟಯರ್‌ಗಳು, ಇತರ ಸಿಯೆಟ್ ಟಯರ್‌ಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಬಾಳಿಕೆ ಬರುತ್ತವೆ. ಈ ಕಾರಣಕ್ಕೆ ಹೊಸ ಬಣ್ಣದ ಟಯರ್‍‍ಗಳು ಗ್ರಾಹಕರನ್ನು ಆಕರ್ಷಿಸುವುದರ ಜೊತೆಗೆ ಹೆಚ್ಚು ಬಾಳಿಕೆಯು ಬರುತ್ತವೆ.

ಬಣ್ಣದ ಟ್ಯೂಬ್‍‍ಲೆಸ್ ಟಯರ್ ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್ ಕಂಪನಿಯು ಉತ್ತಮ ಗುಣಮಟ್ಟದ ರಬ್ಬರ್‌ಗಳೊಂದಿಗೆ ಬಣ್ಣದ ಟಯರ್‍‍ಗಳನ್ನು ಅಭಿವೃದ್ಧಿಪಡಿಸಿದೆ. ಸಾಂಪ್ರದಾಯಿಕ ಮಾದರಿಯ ಟಯರ್‍‍ಗಳಲ್ಲಿ ಸಿಯೆಟ್ ಒಂದೇ ರೀತಿಯ ರಬ್ಬರ್ ಅನ್ನು ಬಳಸುತ್ತದೆ. ಈ ಟಯರ್‌ಗಳು ಹೆಚ್ಚು ಗ್ರಿಪ್, ಸ್ಮೂಥ್ ಆಗಿದ್ದು ಸುಲಭವಾಗಿ ಟ್ಯೂನ್ ಮಾಡಬಹುದಾಗಿದೆ.

Article Published On: Thursday, March 12, 2020, 10:39 [IST]
English summary
Ceat launches limited edition colorful tubeless tyres. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+