ಬಿಡುಗಡೆಯಾಯ್ತು ಹೊಸ ಸಿಎಫ್‍ಮೋಟೊ 250ಎಸ್ಆರ್ ಬೈಕ್
ಚೀನಾ ಮೂಲದ ದ್ವಿಚಕ್ರ ವಾಹನ ಕಂಪನಿಯಾದ ಸಿಎಫ್‍ಮೋಟೊ ತನ್ನ ಬಹುನೀರಿಕ್ಷಿತ ಹೊಸ 250ಎಸ್‍ಆರ್ ಬೈಕ್ ಅನ್ನು ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಸಿಎಫ್‌ಮೋಟೊ 250 ಎಸ್‌ಆರ್ ಸಂಪೂರ್ಣ ಫೇರ್ಡ್ ಕ್ವಾರ್ಟರ್-ಲೀಟರ್ ಬೈಕ್ ಆಗಿದೆ.

ಈ ಹೊಸ ಸಿಎಫ್‍ಮೋಟೊ 250ಎಸ್ಆರ್ ಬೈಕ್ ಈಗಾಗಲೇ ಆಗ್ನೇಯ ಏಷ್ಯಾದ ದೇಶದಲ್ಲಿ ಮಾರಾಟವಾಗುತ್ತಿದೆ. ಸಿಎಫ್‍ಮೋಟೊ ಹೊಸ 250ಎಸ್‍ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಿದರೆ ಜಿಕ್ಸರ್ ಎಸ್‍ಎಫ್ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಕ್ವಾರ್ಟರ್-ಲೀಟರ್ ಸೆಗ್‍ಮೆಂಟ್‍ನಲ್ಲಿ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಆದರೆ ಸಿಎಫ್‌ಮೋಟೊ ಕಂಪನಿಯು 250ಎಸ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದು ಇನ್ನು ಖಚಿತವಾಗಿಲ್ಲ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಸಿಎಫ್‌ಮೊಟೊ ಇಂಡಿಯಾ ಕಂಪನಿಯು 300 ಎನ್‍ಕೆ, 650 ಎನ್‍ಕೆ, 650 ಎಂಟಿ ಮತ್ತು 650 ಜಿಟಿ ಎಂಬ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿವೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೊಸ ಸಿಎಫ್ ಮೋಟೊ 250ಎಸ್‍ಎರ್ ಬೈಕಿನ ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಬೈಕ್‍ನ ಸವಾರನಿಗೆ ಕಾಂಫರ್ಟ್ ನೀಡಲು ಸ್ಪ್ಲಿಟ್ ಸೀಟ್ ಮತ್ತು ಕಡಿಮೆ ಸೆಟ್ ಹ್ಯಾಂಡಲ್ ಬಾರ್‍ಗಳನ್ನು ಸಹ ಹೊಂದಿದೆ. ಇದಲ್ಲದೆ, ಬೈಕು ಕಾಂಪ್ಯಾಕ್ಟ್ ವ್ಹೀಲ್ ಬೇಸ್ ಅನ್ನು ಹೊಂದಿದ್ದು, ಅದು ತಿರುವುಗಳು ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತದೆ.

ಸಿಎಫ್ಮೋಟೊ 250ಎಸ್‌ಆರ್ ಬೈಕಿನಲ್ಲಿ ಟಿಎಫ್‌ಟಿ ಬಣ್ಣದ ಡಿಸ್‍ಪ್ಲೇ ಒಳಗೊಂಡಿರುತ್ತದೆ, ಅದನ್ನು 300 ಎನ್‌ಕೆ ಮಾದರಿಯಿಂದ ಎರವಲು ಪಡೆಯಲಾಗಿದೆ. ಈ ಡಿಸ್‍ಪ್ಲೇಯು ಸವಾರನಿಗೆ ವೇಗದ ಬಗ್ಗೆ, ಟ್ರಿಪ್ ಮೀಟರ್, ಗೇರ್ ಪೊಸಿಷನ್-ಇಂಡಿಕೇಟರ್, ಟ್ಯಾಕೋಮೀಟರ್, ಫ್ಯೋಲ್ ಗೇಜ್ ಸಮಯ ಇತ್ಯಾದಿ ವಿವರಗಳನ್ನು ನೀಡುತ್ತವೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ವಿಶೇಷ ವೆಂದರೆ ಈ ಬೈಕಿನಲ್ಲಿ ಸ್ಪೋರ್ಟ್ ಮತ್ತು ರೈನ್ ಎಂಬ ಎರಡು ರೈಡಿಂಗ್ ಮೂಡ್‍ಗಳನ್ನು ಹೊಂದಿದೆ. ಈ ಯಾವುದೇ ಮೋಡ್‍ಗಳನ್ನು ಆಯ್ಕೆ ಮಾಡುವ ಮೂಲಕ 250 ಎಸ್‌ಆರ್‌ನ ಥ್ರೊಟಲ್ ಪ್ರತಿಕ್ರಿಯೆ ಬದಲಾಗುತ್ತದೆ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಗ್ರಾಪೀಕ್ಸ್ ವಿನ್ಯಾಸವೂ ಬದಲಾಗುತ್ತದೆ.

ಸಿಎಫ್‌ಮೊಟೊ 250ಎಸ್‌ಆರ್ ಬೈಕಿನಲ್ಲಿ 249.2 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 26 ಬಿಹೆಚ್‌ಪಿ ಪವರ್ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಈ ಹೊಸ ಬೈಕಿನಲ್ಲಿ ಅಪ್‍ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಎರಡೂ ಕಡೆಯಲ್ಲೂ ಡಿಸ್ಕ್ ಬ್ರೇಕ್ ಮೂಲಕ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ಈ ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿರುತ್ತದೆ.

ಇನ್ನು ಸಿಎಫ್‌ಮೋಟೊ 250ಎಸ್ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಸುಜುಕಿ ಜಿಕ್ಸರ್ ಎಸ್‌ಎಫ್ 250, ಹೋಂಡಾ ಸಿಬಿಆರ್ 250 ಆರ್, ಮತ್ತು ಕೆಟಿಎಂ ಆರ್‌ಸಿ 200 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








