ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಚೀನಾ ಮೂಲದ ದ್ವಿಚಕ್ರ ವಾಹನ ಕಂಪನಿಯಾದ ಸಿ‍ಎಫ್‍‍ಮೋಟೊ ತನ್ನ ಬಹುನೀರಿಕ್ಷಿತ ಹೊಸ 250ಎಸ್‍ಆರ್ ಫೇರ್ಡ್ ಸ್ಪೋರ್ಟ್ಸ್ ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಸಿ‍ಎಫ್‍‍ಮೋಟೊ ಕಂಪನಿಯು ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಸಿಎಫ್‍‍ಮೋಟೊ ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಜಿಕ್ಸರ್ ಎಸ್‍ಎಫ್ ಬೈಕಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ. ಸಿಎಫ್‌ಮೋಟೊ 250 ಎಸ್‌ಆರ್ ಸಂಪೂರ್ಣ ಫೇರ್ಡ್ ಕ್ವಾರ್ಟರ್-ಲೀಟರ್ ಬೈಕ್ ಆಗಿರುತ್ತದೆ. ಕ್ವಾರ್ಟರ್-ಲೀಟರ್ ಸೆಗ್‍‍ಮೆಂಟ್‍‍ನಲ್ಲಿ ದೇಶದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ ಸಿಎಫ್‌ಮೋಟೊ 250ಎಸ್‌ಆರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಸಿಎಫ್‌ಮೊಟೊ ಇಂಡಿಯಾ ಕಂಪನಿಯು 300 ಎನ್‍‍ಕೆ, 650 ಎನ್‍ಕೆ, 650 ಎಂಟಿ ಮತ್ತು 650 ಜಿಟಿ ಎಂಬ ನಾಲ್ಕು ಮಾದರಿಗಳನ್ನು ಮಾರಾಟ ಮಾಡಲಾಗುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಹೊಸ ಸಿ‍ಎಫ್ ಮೋಟೊ 250ಎಸ್‍ಎರ್ ಬೈಕಿನ ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಬೈಕ್‍‍ನ ಸವಾರನಿಗೆ ಕಾಂಫರ್ಟ್ ನೀಡಲು ಸ್ಪ್ಲಿಟ್ ಸೀಟ್ ಮತ್ತು ಕಡಿಮೆ ಸೆಟ್ ಹ್ಯಾಂಡಲ್ ಬಾರ್‍‍ಗಳನ್ನು ಸಹ ಹೊಂದಿದೆ. ಇದಲ್ಲದೆ, ಬೈಕು ಕಾಂಪ್ಯಾಕ್ಟ್ ವ್ಹೀಲ್ ಬೇಸ್ ಅನ್ನು ಹೊಂದಿದ್ದು, ಅದು ತಿರುವುಗಳು ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಸಿಎಫ್‌ಮೋಟೊ 250ಎಸ್‌ಆರ್‌ ಬೈಕಿನಲ್ಲಿ ಟಿಎಫ್‌ಟಿ ಬಣ್ಣದ ಡಿಸ್‍‍ಪ್ಲೇ ಒಳಗೊಂಡಿರುತ್ತದೆ, ಅದನ್ನು 300 ಎನ್‌ಕೆ ಮಾದರಿಯಿಂದ ಎರವಲು ಪಡೆಯಲಾಗಿದೆ. ಈ ಡಿಸ್‍‍ಪ್ಲೇಯು ಸವಾರನಿಗೆ ವೇಗದ ಬಗ್ಗೆ, ಟ್ರಿಪ್ ಮೀಟರ್, ಗೇರ್ ಪೊಸಿಷನ್-ಇಂಡಿಕೇಟರ್, ಟ್ಯಾಕೋಮೀಟರ್, ಫ್ಯೋಲ್ ಗೇಜ್ ಸಮಯ ಇತ್ಯಾದಿ ವಿವರಗಳನ್ನು ನೀಡುತ್ತವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ವಿಶೇಷ ವೆಂದರೆ ಈ ಬೈಕಿನಲ್ಲಿ ಸ್ಪೋರ್ಟ್ ಮತ್ತು ರೈನ್ ಎಂಬ ಎರಡು ರೈಡಿಂಗ್ ಮೂಡ್‍ಗಳನ್ನು ಹೊಂದಿದೆ. ಈ ಯಾವುದೇ ಮೋಡ್‍‍ಗಳನ್ನು ಆಯ್ಕೆ ಮಾಡುವ ಮೂಲಕ 250 ಎಸ್‌ಆರ್‌ನ ಥ್ರೊಟಲ್ ಪ್ರತಿಕ್ರಿಯೆ ಬದಲಾಗುತ್ತದೆ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಗ್ರಾಪೀಕ್ಸ್ ವಿನ್ಯಾಸವೂ ಬದಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಸಿಎಫ್‌ಮೊಟೊ 250ಎಸ್‌ಆರ್ ಬೈಕಿನಲ್ಲಿ 249.2 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 26 ಬಿಹೆಚ್‌ಪಿ ಪವರ್ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಈ ಹೊಸ ಬೈಕಿನಲ್ಲಿ ಅಪ್‍‍ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್. ಎರಡೂ ಕಡೆಯಲ್ಲೂ ಡಿಸ್ಕ್ ಬ್ರೇಕ್ ಮೂಲಕ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ಈ ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೋಟೊ 250ಎಸ್‌ಆರ್ ಬೈಕ್

ಸಿಎಫ್‌ಮೋಟೊ 250ಎಸ್‌ಆರ್ ಬೈಕಿನ ಬೆಲೆಯು ರೂ.1.75 ರಿಂದ ರೂ.2 ಲಕ್ಷ ಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಸಿಎಫ್‌‍ಮೋಟೊ 250ಎಸ್‌ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ ಜಿಕ್ಸರ್ ಎಸ್‌ಎಫ್ 250, ಹೋಂಡಾ ಸಿಬಿಆರ್ 250 ಆರ್, ಮತ್ತು ಕೆಟಿಎಂ ಆರ್‌ಸಿ 200 ಬೈಕ್‍‍ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, March 2, 2020, 12:32 [IST]
English summary
CFMoto 250SR unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+