ಸೈಕಲ್ ಪ್ರಯಾಣಕ್ಕೆ ಆದ್ಯತೆ ನೀಡಲು ಸೂಚಿಸಿದ ಕೇಂದ್ರ ಸರ್ಕಾರ
ರಾಜ್ಯಗಳಲ್ಲಿ ಮೋಟಾರು ವಾಹನಗಳಿಲ್ಲದ ಸಂಚಾರ ವ್ಯವಸ್ಥೆಯನ್ನು ಒದಗಿಸುವಂತೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದಾಗಿ ಜನರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಇಲಾಖೆಯು ವರದಿ ಮಾಡಿದೆ.

ಇದೇ ವೇಳೆ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಜನರು ಸೋಂಕು ಹರಡುವುದನ್ನು ತಪ್ಪಿಸಲು ಸೈಕಲ್ ಬಳಸಬೇಕು. ಸೈಕಲ್ ಮೂಲಕ ಪ್ರಯಾಣಿಸಿದರೆ ಜನ ದಟ್ಟಣೆಯನ್ನು ತಪ್ಪಿಸಬಹುದು. ಇದು ಸೋಂಕು ಹರಡುವ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಇಲಾಖೆಯು ಹೇಳಿದೆ. ಇದರ ಜೊತೆಗೆ ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸುವಂತೆ ಇಲಾಖೆಯು ಹೇಳಿದೆ.

ಹಲವಾರು ದೇಶಗಳು ಸೈಕಲ್ ಪ್ರಯಾಣಕ್ಕೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಂಡಿವೆ. ನ್ಯೂಯಾರ್ಕ್ ನಗರದಲ್ಲಿ ಸೈಕಲ್‌ಗಳಿಗಾಗಿಯೇ 50 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗಿದ್ದರೆ, ಆಕ್ಲೆಂಡ್‌ನಲ್ಲಿ ಸೈಕ್ಲಿಸ್ಟ್‌ಗಳಿಗಾಗಿ 10%ನಷ್ಟು ರಸ್ತೆಗಳನ್ನು ಕಾಯ್ದಿರಿಸಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕೊಲಂಬಿಯಾದ ಬಾಗೋಟಾ ನಗರದಲ್ಲಿ 78 ಕಿ.ಮೀ ಉದ್ದದ ಸೈಕ್ಲಿಂಗ್ ಟ್ರ್ಯಾಕ್ ಅನ್ನು ನಿರ್ಮಿಸಲಾಗಿದೆ. ರಾಜ್ಯ ಹಾಗೂ ಮೆಟ್ರೋ ರೈಲು ಕಂಪನಿಗಳಿಗೆ ಸೈಕಲ್ ಹಳಿಗಳನ್ನು ನಿರ್ಮಿಸುವಂತೆ ಸೂಚನೆ ನೀಡಲಾಗಿದೆ.

ಬಹುತೇಕ ನಗರಗಳ ಜನರು ಕೆಲಸಕ್ಕೆ ಹೋಗಲು ಬಸ್ ಅಥವಾ ಮೆಟ್ರೋಗಳನ್ನು ಬಳಸುತ್ತಾರೆ. ನಗರದ 5-6 ಕಿ.ಮೀ ವ್ಯಾಪ್ತಿಯಲ್ಲಿ ಸೈಕಲ್ ಮೂಲಕ ಪ್ರಯಾಣಿಸಿದರೆ, ಪರಿಸರವನ್ನು ಸ್ವಚ್ವವಾಗಿರಿಸುವುದರ ಜೊತೆಗೆ, ಕರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಬಹುದು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ನಗರಗಳಲ್ಲಿ 5-6 ಕಿ.ಮೀ ಪ್ರಯಾಣಿಸಲು ಸೈಕಲ್‌ಗಳು ಸ್ಕೂಟರ್, ಬೈಕ್‌ಗಳಿಗಿಂತ ಉತ್ತಮ ಆಯ್ಕೆಯಾಗಿರುತ್ತವೆ. ಸೋಂಕು ಹರಡುವುದನ್ನು ತಡೆಗಟ್ಟಲು ಪೇಟಿಎಂ, ಗೂಗಲ್ ಪೇ, ಭೀಮ್ ಯುಪಿಐ, ಫೋನ್ ಪೇ ಮುಂತಾದ ಡಿಜಿಟಲ್ ಪಾವತಿಗಳನ್ನು ಬಳಸುವಂತೆ ಇಲಾಖೆಯು ಸೂಚಿಸಿದೆ.

ದೇಶಾದ್ಯಂತ ಕಾಮನ್ ಮೊಬಿಲಿಟಿ ಕಾರ್ಡ್ ಜಾರಿಗೆ ತರುವಂತೆ ಇಲಾಖೆಯು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ. ಕಾಮನ್ ಮೊಬಿಲಿಟಿ ಕಾರ್ಡ್ ಸಹಾಯದಿಂದ, ಮೆಟ್ರೊ, ಬಸ್ ಹಾಗೂ ಲೋಕಲ್ ಟ್ರೇನ್‌ಗಳಲ್ಲಿ ಒಂದೇ ಕಾರ್ಡ್‌ನೊಂದಿಗೆ ಪಾವತಿ ಮಾಡಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಅಂತ್ಯಗೊಂಡ ನಂತರ, ಬಹುತೇಕ ರಾಜ್ಯಗಳಲ್ಲಿ ಬಸ್ ಸೇವೆಗಳನ್ನು ಆರಂಭಿಸಲಾಗಿದೆ. ಸದ್ಯಕ್ಕೆ ಎಲ್ಲಾ ಬಸ್‌ಗಳಲ್ಲಿಯೂ 30-40%ನಷ್ಟು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡುವಂತೆ ಸೂಚನೆ ನೀಡಲಾಗಿದೆ.


Click it and Unblock the Notifications