ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ಕೋವಿಡ್ 19 ಕಾರಣದಿಂದಾಗಿ, ಜನರು ಮೊದಲಿನಂತೆ ಮನೆಯಿಂದ ಹೊರಬರುತ್ತಿಲ್ಲ. ಕರೋನಾ ವೈರಸ್‌ನಿಂದಾಗಿ ಹೊಸ ಹೊಸ ಉದ್ಯಮಗಳು ತಲೆ ಎತ್ತುತ್ತಿವೆ. ಜನರು ಬೈಕ್ ಸರ್ವೀಸ್ ಮಾಡಿಸಲು ಸಹ ಹಿಂದೆ ಮುಂದೆ ನೋಡುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ಕ್ರೆಡ್‌ಆರ್ ಹೆಸರಿನ ದ್ವಿಚಕ್ರ ವಾಹನ ಕಂಪನಿಯು ಬೈಕ್ ಸರ್ವೀಸ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಕ್ರೆಡ್‌ಆರ್ ಕಂಪನಿಯು ಕ್ರೆಡ್‌ಆರ್ ಕೇರ್ ಎಂಬ ಡೋರ್ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಕಂಪನಿಯು ಈ ಸೌಲಭ್ಯವನ್ನು ಬೆಂಗಳೂರು, ದೆಹಲಿ ಎನ್‌ಸಿಆರ್, ಜೈಪುರ ಹಾಗೂ ಪುಣೆ ನಗರಗಳಲ್ಲಿ ಆರಂಭಿಸಿದೆ.

ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ಕ್ರೆಡ್‌ಆರ್ ಕೇರ್‌ನಿಂದಾಗಿ ಗ್ರಾಹಕರು ತಮ್ಮ ಮನೆ ಅಥವಾ ಕಚೇರಿಯಿಂದ ದ್ವಿಚಕ್ರ ವಾಹನ ಸರ್ವೀಸ್ ಪ್ಯಾಕೇಜ್ ಅನ್ನು ಬುಕ್ಕಿಂಗ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇದು ಬೈಕ್‌ನ ಮಾದರಿಯನ್ನು ಅವಲಂಬಿಸಿರುತ್ತದೆ. ಗ್ರಾಹಕರು ತಮಗೆ ಬೇಕಾದ ದಿನ ಹಾಗೂ ಸಮಯದಂದು ಈ ಡೋರ್ ಡೆಲಿವರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ಈ ಸೇವೆ ನೀಡಲು ಕಂಪನಿಯು ಸ್ಯಾನಿಟೈಜೆಷನ್ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸುವ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದರ ಜೊತೆಗೆ ಬಿಡಿಭಾಗ, ಪರಿಕರ ಹಾಗೂ ಬೆಲೆ ಇತ್ಯಾದಿಗಳ ಬಗ್ಗೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಿದೆ.

ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ದೇಶಾದ್ಯಂತ ಕರೋನಾ ಸೋಂಕಿನಿಂದಾಗಿ, ವಾಹನಗಳಿಗೆ ಸ್ಯಾನಿಟೈಜೆಷನ್ ಮಾಡುವ ಬೇಡಿಕೆ ಹೆಚ್ಚುತ್ತಿದೆ. ಜೊತೆಗೆ ವಾಹನಗಳು ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಇರುವುದರಿಂದ ಸರ್ವೀಸ್ ಅಗತ್ಯವಾಗಿದೆ. ಈ ಕಾರಣಕ್ಕೆ ಅನೇಕ ಕಂಪನಿಗಳು ವಾಹನಗಳ ಸರ್ವೀಸ್ ಕ್ಷೇತ್ರಕ್ಕೆ ಕಾಲಿಡುತ್ತಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ದೇಶದ ಜನರು ಅನ್‌ಲಾಕ್ 1.0 ಅವಧಿಯಲ್ಲಿ ಸಾರ್ವಜನಿಕ ಸಾರಿಗೆಗಳ ಬದಲಿಗೆ ತಮ್ಮದೇ ಆದ ಬೈಕ್ ಹಾಗೂ ಕಾರುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಜೊತೆಗೆ ಬಾಡಿಗೆ ವಾಹನಗಳಿಗೂ ಸಹ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ.

ಕರೋನಾ ವೈರಸ್ ಎಫೆಕ್ಟ್: ಮನೆ ಬಾಗಿಲಲ್ಲೇ ಸರ್ವೀಸ್ ಆಗಲಿವೆ ದ್ವಿಚಕ್ರ ವಾಹನಗಳು

ಬಹುತೇಕ ಎಲ್ಲಾ ದ್ವಿಚಕ್ರ ವಾಹನ ಕಂಪನಿಗಳು ತಮ್ಮ ಶೋರೂಂಗಳನ್ನು ತೆರೆದಿದ್ದು, ಸರ್ವೀಸ್ ಸೆಂಟರ್‌ಗಳನ್ನು ಸಹ ಪುನರಾರಂಭಿಸಿವೆ. ಗ್ರಾಹಕರು ತಮ್ಮ ವಾಹನಗಳನ್ನು ಸರ್ವಿಸ್ಮಾಡಿಸಲು ಮುಂದಾಗುತ್ತಿದ್ದಾರೆ. ಇದರಿಂದ ಹಲವು ದಿನಗಳಿಂದ ಮನೆಯಲ್ಲಿಯೇ ಇದ್ದ ವಾಹನಗಳನ್ನು ಉತ್ತಮ ಸ್ಥಿತಿಯಲ್ಲಿಡಬಹುದು.

Most Read Articles

Kannada
English summary
CredR launches doorstep bike services across four cities in India. Read in Kannada.
Story first published: Wednesday, June 10, 2020, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X