ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಇದೇ ಮೊದಲ ಬಾರಿಗೆ ಜಗತ್ಪ್ರಸಿದ್ಧ ಡಕಾರ್ ರ್‍ಯಾಲಿಯು ಸೌದಿ ಅರೇಬಿಯಾದಲ್ಲಿ ನಡೆಯುತ್ತಿದೆ. ಈ ರ್‍ಯಾಲಿಯ ಎರಡನೇ ಸುತ್ತಿನಲ್ಲಿ ಹೀರೋ ಟೀಂನ ಪಾವ್ಲೊ ಕಾನ್‍‍ಕ್ಲೆಸ್‍‍ರವರು ಟಾಪ್ 15ರೊಳಗೆ ಸ್ಥಾನ ಪಡೆದಿದ್ದಾರೆ.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಡಕಾರ್ ರ್‍ಯಾಲಿಯು ಒಟ್ಟು 12 ಸುತ್ತುಗಳನ್ನು ಹೊಂದಿರಲಿದೆ. ಈ ರ್‍ಯಾಲಿಯು ಒರಟಾದ ರಸ್ತೆ, ಒರಟಾದ ಮರುಭೂಮಿ ಹಾಗೂ ಪರ್ವತಗಳ ಮೂಲಕ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಡಕಾರ್ ರ್‍ಯಾಲಿಯು ನಿನ್ನೆಯಿಂದ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆರಂಭವಾಗಿದೆ.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಮೊದಲ ಸುತ್ತಿನಲ್ಲಿ ಭಾರತದ ಹೀರೋ ಮೋಟಾರ್ ಸ್ಪೋರ್ಟ್ಸ್ ಹಾಗೂ ಟಿವಿ‍ಎಸ್ ರೇಸಿಂಗ್ ತಂಡಗಳು ಹೆಚ್ಚು ಗಮನ ಸೆಳೆದವು. ಇದಾದ ನಂತರ ಎರಡನೇ ಸುತ್ತಿನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಎರಡನೇ ಸುತ್ತಿನಲ್ಲಿ ಅಲ್ ವಾಜ್‍‍ನಿಂದ ನೈಮಾವರೆಗೂ 367 ಕಿ.ಮೀಗಳ ದೂರವನ್ನು ಕ್ರಮಿಸಬೇಕಾಗಿತ್ತು.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಸೂಪರ್ ಮ್ಯಾರಥಾನ್ ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಮೊದಲ ಸುತ್ತಿನ ನಿಜವಾದ ಹೀರೋ ಆದ ಕಾನ್‍‍ಕ್ಲೆಸ್‍ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆಯಲು ಯಶಸ್ವಿಯಾದರು.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಅವರು ಬೈಕ್ ವಿಭಾಗದಲ್ಲಿ 12ನೇ ಸ್ಥಾನವನ್ನು ಪಡೆದರೆ, ಒಟ್ಟಾರೆಯಾಗಿ ಎರಡನೇ ಸುತ್ತಿನಲ್ಲಿ 14ನೇ ಸ್ಥಾನವನ್ನು ಪಡೆದರು. ಎರಡನೇ ಸುತ್ತಿನ ನಂತರ ಮಾತನಾಡಿದ ಕಾನ್‍‍ಕ್ಲೆಸ್‍‍ರವರು ಎರಡನೇ ಸುತ್ತನ್ನು ಆರಾಮದಾಯಕವಾಗಿ ಮುಗಿಸಿದ್ದೇವೆ. ಬೈಕಿನಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲವೆಂದು ಹೇಳಿದರು.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಹೀರೋ ತಂಡದ ಸೆಬಾಸ್ಟಿಯನ್ ಬಹ್ಲರ್‍‍ರವರು 21ನೇ ಸ್ಥಾನದಲ್ಲಿ ಮುಗಿಸಿದರೆ, ಹೀರೋ ತಂಡದ ಮತ್ತೊಬ್ಬ ಸ್ಪರ್ಧಿಯಾದ ಸಿ ಎಸ್ ಸಂತೋಷ್‍‍ರವರು 54ನೇ ಸ್ಥಾನದಲ್ಲಿ ಮುಗಿಸಿದರು. ಸಂತೋಷ್‍‍ರವರು ಒಟ್ಟಾರೆಯಾಗಿ 48ನೇ ಸ್ಥಾನದಲ್ಲಿದ್ದಾರೆ.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಭಾರತದ ಮತ್ತೊಬ್ಬ ಸ್ಪರ್ಧಿಯಾದ ಟಿವಿ‍ಎಸ್ ತಂಡದ ಹರೀದ್ ನೋವಾರವರು ಮೊದಲನೇ ಸುತ್ತಿನಲ್ಲಿ 111ನೇ ಸ್ಥಾನವನ್ನು ಪಡೆದರು. ಕಣ್ಣಿನ ಗಾಯದ ನಡುವೆಯೂ ಎರಡನೇ ಸುತ್ತಿನಲ್ಲಿ ಭಾಗವಹಿಸಿದ ಅವರು 52ನೇ ಸ್ಥಾನವನ್ನು ಪಡೆದು, ಒಟ್ಟಾರೆಯಾಗಿ 65ನೇ ಸ್ಥಾನದಲ್ಲಿದ್ದಾರೆ.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಟಿವಿ‍ಎಸ್ ತಂಡದ ಇತರ ಸದಸ್ಯರಾದ ಲೊರೆಂಜೊ ಸಂಟಾಲಿನೊ 17ನೇ ಸ್ಥಾನವನ್ನು ಹಾಗೂ ಆಡ್ರಿಯನ್ ಮೆಟ್ಸ್ 18ನೇ ಸ್ಥಾನವನ್ನು ಪಡೆದರು. ಒಟ್ಟಾರೆ ರ್‍ಯಾಂಕಿಂಗ್‍ನಲ್ಲಿ ಮೆಟ್ಸ್ 16ನೇ ಸ್ಥಾನದಲ್ಲಿ ಹಾಗೂ ಸಂಟಾಲಿನೊ 22ನೇ ಸ್ಥಾನದಲ್ಲಿದ್ದಾರೆ.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಟಿವಿ‍ಎಸ್ ತಂಡದವರೇ ಆದ ಜಾನಿ ಅಬುರ್ಟ್‍‍ರವರು ಎರಡನೇ ಸುತ್ತಿನಲ್ಲಿ 22ನೇ ಸ್ಥಾನವನ್ನು ಪಡೆದು, ಒಟ್ಟಾರೆಯಾಗಿ 18ನೇ ಸ್ಥಾನದಲ್ಲಿದ್ದಾರೆ. ಸ್ಯಾಮ್ ಸುಂದರ್‍‍ಲ್ಯಾಂಡ್ ಬೈಕ್ ವಿಭಾಗದ ಎರಡನೇ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದರು.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಕಾರು ವಿಭಾಗದಲ್ಲಿ ಎರಡನೇ ಸುತ್ತಿನಲ್ಲಿ ಒರ್ಲಾಂಡೊ ಟೆರಾನೊವಾರವರು ಮೊದಲ ಸ್ಥಾನವನ್ನು ಪಡೆದರು. ಇದೇ ವೇಳೆ ಎರಡು ಬಾರಿಯ ಫಾರ್ಮುಲಾ ಒನ್ ಚಾಂಪಿಯನ್ ಫರ್ನಾಂಡೊ ಲೊರೆಂಜೊರವರು ಈ ರ್‍ಯಾಲಿಯಲ್ಲಿ ಹಿನ್ನಡೆಯನ್ನು ಅನುಭವಿಸಿದ್ದಾರೆ.

ಡಕಾರ್ ರ್‍ಯಾಲಿ ಎರಡನೇ ಸುತ್ತಿನಲ್ಲಿ ಟಾಪ್ 15ರೊಳಗೆ ಸ್ಥಾನ ಪಡೆದ ಹೀರೋ ಟೀಂ

ಕಾರುಗಳ ವಿಭಾಗದ ಎರಡನೇ ಸುತ್ತಿನಲ್ಲಿ ಫರ್ನಾಂಡೊ ಲೊರೆಂಜೊರವರು ಚಲಾಯಿಸುತ್ತಿದ್ದ ಕಾರಿನ ವ್ಹೀಲ್ ಮುರಿದ ಕಾರಣ ಎಮರ್ಜೆನ್ಸಿ ತಂಡವು ಸ್ಥಳಕ್ಕೆ ಧಾವಿಸಿತ್ತು. ಇದರಿಂದಾಗಿ ಅವರು ಹಿನ್ನಡೆಯನ್ನು ಅನುಭವಿಸಿದರು.

More from DriveSpark

Article Published On: Tuesday, January 7, 2020, 17:55 [IST]
English summary
Dakar Rally stage 2 Hero team holds on to top 15 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+