ಹೆಚ್ಚು ಮೈಲೇಜ್ ನೀಡುವ ಬಿಎಸ್ 6 ಬೈಕ್‍ಗಳಿವು
ಬಿಎಸ್ 6 ಮಾಲಿನ್ಯ ನಿಯಮವು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಬೈಕ್, ಸ್ಕೂಟರ್ ಹಾಗೂ ಕಾರುಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸುತ್ತಿವೆ.

ಹೊಸ ಬಿಎಸ್ 6 ಎಂಜಿನ್ ಹೊಂದಿರುವ ವಾಹನಗಳು ಬಿಎಸ್ 4 ಎಂಜಿನ್ ಹೊಂದಿರುವ ವಾಹನಗಳಿಗಿಂತ ಕಡಿಮೆ ಪ್ರಮಾಣದ ಮಾಲಿನ್ಯವನ್ನುಂಟು ಮಾಡುವುದರ ಜೊತೆಗೆ ಹೆಚ್ಚು ಮೈಲೇಜ್ ನೀಡುತ್ತವೆ. ಹೆಚ್ಚು ಮೈಲೇಜ್ ನೀಡುವ ಬಿಎಸ್ 6 ಎಂಜಿನ್ ಹೊಂದಿರುವ 5 ಬೈಕ್‍ಗಳ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

1. ಬಜಾಜ್ ಸಿಟಿ 110
ಬಜಾಜ್ ಸಿಟಿ 110 ಬೈಕ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸಲಾಗಿದೆ. ಹೊಸ ಸಿಟಿ 110 ಬೈಕಿನಲ್ಲಿ ವಿನ್ಯಾಸವನ್ನು ಸೇರಿದಂತೆ ಹಲವು ರೀತಿಯಲ್ಲಿ ಅಪ್‍ಡೇಟ್ ಮಾಡಲಾಗಿದೆ. ಬಜಾಜ್ ಕಂಪನಿಯು ಹೇಳುವಂತೆ ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್‍ಗೆ 104 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.39,994ಗಳಾಗಿದೆ.

2. ಟಿವಿಎಸ್ ಸ್ಪೋರ್ಟ್
ಟಿವಿಎಸ್ ಸ್ಪೋರ್ಟ್ 99.7 ಸಿಸಿಯ ಬಿಎಸ್ 6 ಎಂಜಿನ್ ಹೊಂದಿದೆ. ಈ ಎಂಜಿನ್ 7.8 ಬಿಹೆಚ್‍ಪಿ ಪವರ್ ಹಾಗೂ 7.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್‍ಗೆ 95 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.44,340ಗಳಾಗಿದೆ.

3. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್
ಟಿವಿಎಸ್ ಕಂಪನಿಯು ತನ್ನ ಸ್ಟಾರ್ ಸಿಟಿ ಪ್ಲಸ್ ಬೈಕ್ ಅನ್ನು ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಡಿಸೈನ್ ಹಾಗೂ ಫೀಚರ್‍ಗಳನ್ನು ಅಪ್‍ಡೇಟ್ ಮಾಡಲಾಗಿದೆ. ಈ ಬೈಕಿನಲ್ಲಿರುವ 109.7 ಸಿಸಿಯ ಎಂಜಿನ್ 8.1 ಬಿಹೆಚ್‍ಪಿ ಪವರ್ ಹಾಗೂ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 86 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.62,034ಗಳಾಗಿದೆ.

4. ಹೀರೋ ಗ್ಲಾಮರ್ 125
ಹೀರೊ ಕಂಪನಿಯು ಇತ್ತೀಚಿಗೆ ಹೀರೋ ಗ್ಲಾಮರ್ ಬೈಕ್ ಅನ್ನು ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನಲ್ಲಿರುವ 125 ಸಿಸಿಯ ಎಂಜಿನ್ 11 ಬಿಹೆಚ್‍ಪಿ ಪವರ್ ಹಾಗೂ 10.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 85 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.68,900ಗಳಾಗಿದೆ.

5.ಬಜಾಜ್ ಪ್ಲಾಟಿನಾ 110 ಹೆಚ್-ಗೇರ್
ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕ್ ಅನ್ನು ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ಮಾದರಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕಿನಲ್ಲಿರುವ 110 ಸಿಸಿಯ ಎಂಜಿನ್ 9.81 ಎನ್‍ಎಂ ಟಾರ್ಕ್ ಹಾಗೂ 8.6 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 84 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.53,875ಗಳಾಗಿದೆ.


Click it and Unblock the Notifications