ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗೆ ಇಬ್ಬರ ಹೆಸರು ಶಿಫಾರಸ್ಸು ಮಾಡಿದ ಮೋಟಾರ್‌ಸ್ಪೋರ್ಟ್ ಫೆಡರೇಷನ್
ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ ಕ್ಲಬ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) 2020ರ ಅರ್ಜುನ ಪ್ರಶಸ್ತಿಗಾಗಿ ಮೋಟೋಸ್ಪೋರ್ಟ್ ಕ್ರೀಡಾಪಟುಗಳಾದ ಸಿ.ಎಸ್.ಸಂತೋಷ್ ಹಾಗೂ ಐಶ್ವರ್ಯಾ ಪಿಸ್ಸೆ ಅವರ ಹೆಸರನ್ನು ಶಿಫಾರಸ್ಸು ಮಾಡಿದೆ. ಅರ್ಜುನ ಪ್ರಶಸ್ತಿ ದೇಶದ ಕ್ರೀಡೆಗಳಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ಸಂತೋಷ್ ಹಾಗೂ ಐಶ್ವರ್ಯಾ ಪಿಸ್ಸೆ ವಿಶ್ವ ಮೋಟೋಸ್ಪೋರ್ಟ್ ಹಾಗೂ ರ‍್ಯಾಲಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಸಿಎಸ್ ಸಂತೋಷ್ ಹೀರೋ ಮೋಟೋಸ್ಪೋರ್ಟ್ಸ್ ಟೀಂನ ಭಾಗವಾಗಿದ್ದು, 2013ರಿಂದ ಹಲವಾರು ಭಾರತೀಯ ಹಾಗೂ ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಡಾಕರ್ ರ‍್ಯಾಲಿಯಲ್ಲಿಯೂ ಭಾಗವಹಿಸುತ್ತಿದ್ದಾರೆ. ಐಶ್ವರ್ಯಾ ಪಿಸ್ಸೆ ಟಿವಿಎಸ್ ರೇಸಿಂಗ್‌ನ ಭಾಗವಾಗಿದ್ದು, 2018ರಿಂದ ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಹಿಳಾ ಜೂನಿಯರ್ ವಿಭಾಗದಲ್ಲಿ 2019ರ ಎಫ್ಐಎಂ ಬಜಾಸ್ ವಿಶ್ವಕಪ್ ಗೆದ್ದಿರುವ ಅವರು, ಮೋಟೋಸ್ಪೋರ್ಟ್‌ನಲ್ಲಿ ವಿಶ್ವ ಪ್ರಶಸ್ತಿಯನ್ನು ಗೆದ್ದ ಏಕೈಕ ಭಾರತೀಯರಾಗಿದ್ದಾರೆ.

ಇದರ ಜೊತೆಗೆ ಎಫ್‌ಎಂಎಸ್‌ಸಿಐ ಮಾಜಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ವಿಜೇತರಾಡ ಅಕ್ಬರ್ ಅಬ್ರಹಾಂ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ದೇಶೀಯ ರೇಸಿಂಗ್‌ನಲ್ಲಿ ಅದ್ಭುತ ವೃತ್ತಿಜೀವನವನ್ನು ಹೊಂದಿರುವ ಅಬ್ರಹಾಂರವರು ಸದ್ಯಕ್ಕೆ ರೇಸಿಂಗ್ ತರಬೇತುದಾರರಾಗಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಎಫ್‌ಎಂಎಸ್‌ಸಿಐನ ಮಾಜಿ ಅಧ್ಯಕ್ಷರಾದ ಅಬ್ರಹಾಂ ಯುವ ಚಾಲಕರಿಗಾಗಿ ಕಾರ್ಟಿಂಗ್ ತರಬೇತಿಯನ್ನು ನೀಡುತ್ತಿದ್ದಾರೆ. ಅವರು ಯುವ ಚಾಲಕರಿಗೆ ಮೊಟೊಸ್ಪೋರ್ಟ್‌ನಲ್ಲಿ ಆರಂಭಿಕ ಹಂತದ ತರಬೇತಿ ನೀಡುತ್ತಾರೆ. ತಮ್ಮ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದಕ್ಕೆ ಐಶ್ವರ್ಯಾ ಪಿಸ್ಸೆರವರು ಉತ್ಸುಕಳಾಗಿರುವುದಾಗಿ ತಿಳಿಸಿದರು.

ಈ ಪ್ರತಿಷ್ಠಿತ ಪ್ರಶಸ್ತಿಯು ಯಾವುದೇ ಕ್ರೀಡಾಪಟುವಿಗೆ ಗೌರವದ ಸಂಗತಿಯಾಗಿದೆ ಎಂದು ಹೇಳಿದರು. ತಮಗೆ ಬೆಂಬಲ ನೀಡಿದ ಎಫ್ಎಂಎಸ್‌ಸಿಐ ಹಾಗೂ ಟಿವಿಎಸ್ ರೇಸಿಂಗ್ ಟೀಂಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಮೋಟೋಸ್ಪೋರ್ಟ್ ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದಕ್ಕೆ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಯುವ ವ್ಯವಹಾರ ಹಾಗೂ ಕ್ರೀಡಾ ಇಲಾಖೆಯ ನಿಯಮಗಳ ಪ್ರಕಾರ ಫೆಡರೇಶನ್ ಅರ್ಜುನ ಪ್ರಶಸ್ತಿಗೆ ಗರಿಷ್ಠ ಮೂರು ಹೆಸರುಗಳನ್ನು ನಾಮನಿರ್ದೇಶನ ಮಾಡಬಹುದು. ಈ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹರಾಗಲು, ಕ್ರೀಡಾಪಟುಗಳು ಕಳೆದ ನಾಲ್ಕು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

ಕೇಂದ್ರ ಸರ್ಕಾರವು 2015ರಲ್ಲಿ ಮೋಟೋಸ್ಪೋರ್ಟ್ ಅನ್ನು ಅಧಿಕೃತವಾಗಿ ಕ್ರೀಡೆಯೆಂದು ಗುರುತಿಸಿತು. ಜನಪ್ರಿಯ ರ‍್ಯಾಲಿ ಚಾಲಕ ಹಾಗೂ ಹಲವು ಎಪಿಆರ್‌ಸಿ ಪ್ರಶಸ್ತಿಗಳನ್ನು ಗೆದ್ದಿರುವ ಗೌರವ್ ಗಿಲ್‌ರವರು ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮೋಟೋಸ್ಪೋರ್ಟ್ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.


Click it and Unblock the Notifications








