Just In
Don't Miss!
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
350 ಸಿಸಿ ಬೈಕ್ ಉತ್ಪಾದಿಸಲು ಮುಂದಾದ ಹಾರ್ಲೆ ಡೇವಿಡ್ಸನ್
ಅಮೆರಿಕದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಹೊಸ 350 ಸಿಸಿ ಸಾಮರ್ಥ್ಯದ ಬೈಕನ್ನು ಉತ್ಪಾದನೆ ಮಾಡಲು ಸಜ್ಜಾಗುತ್ತಿದೆ. ಇದಕ್ಕಾಗಿ ಚೀನಾ ಮೂಲದ ಕಿಯಾಂಜಿಯಾಂಗ್ ಮೋಟಾರ್‌ಸೈಕಲ್ ಅಥವಾ ಕ್ಯೂಜೆ ಮೋಟಾರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.

ಹಾರ್ಲೆ ಡೇವಿಡ್ಸನ್ ಹೊಸ ಬೈಕಿನ ಉತ್ಪಾದಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಆದರೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರ್ಲೆ ಡೇವಿಡ್ಸನ್ ಟ್ವಿನ್ ಎಂಜಿನ್ ಮತ್ತು ಎಕಾಸ್ಟ್ ಅನ್ನು ಹೊಂದಿರುತ್ತದೆ. ಹಾರ್ಲೆ ಡೇವಿಡ್ಸನ್ ಉತ್ಪಾದಿಸುವ ಹೊಸ ಬೈಕಿನಲ್ಲಿ ಫ್ರೇಮ್, ಸ್ವಿಂಗಾರ್ಮ್, ಡಿಸ್ಕ್ ಬ್ರೇಕ್ ರೋಟಾರ್‌ಗಳನ್ನು ಮತ್ತು ಬೆನೆಲ್ಲಿ ಟಿಎನ್‌ಟಿ 300 ಮಾದರಿಯಲ್ಲಿರುವಂತಹ ಸಸ್ಪೆಂಕ್ಷನ್ ಅನ್ನು ಹೊಂದಿರುತ್ತದೆ. ಈ ಬೈಕಿನಲ್ಲಿ ನವೀಕರಿಸಿದ ಎಂಜಿನ್ ಅನ್ನು ಹೊಂದಿರುತ್ತದೆ.

ಹೊಸ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ 353 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಬಹುದು. ಕ್ಯೂಜೆ 350 ಮಾದರಿಯಂತೆ ಈ ಎಂಜಿನ್ 35.5 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಬಹುದು.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಹಾರ್ಲೆ ಡೇವಿಡ್ಸನ್ ತಾಂತ್ರಿಕ ಅಂಶಗಳು ಚೀನಾ ಮೂಲದ ಕ್ಯೂಜಿ ಬೈಕಿನ ಮಾದರಿಯಂತಿರಬಹುದು. ಆದರೆ ಹೊಸ ಬೈಕಿನ ವಿನ್ಯಾಸವನ್ನು ಫ್ಲಾಟ್ ಟ್ರ್ಯಾಕ್ ಶೈಲಿಯ ಮಾದರಿಗಳಿಂದ ಎರವಲು ಪಡೆಯಬಹುದು,

ಹಾರ್ಲೆ ಡೇವಿಡ್ಸನ್ ಉತ್ಪಾದನೆ ಮಾಡುವ 350 ಸಿಸಿ ಸಾಮರ್ಥ್ಯದ ಬೈಕನ್ನು ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3 ರಿಂದ ರೂ.3.5 ಲಕ್ಷಗಳಿರಬಹುದು ಎಂದು ನಿರೀಕ್ಷಿಸುತೇವೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹಾರ್ಲೆ ಡೇವಿಡ್ಸನ್ ಕಂಪನಿಯು ಹೊಸ 1200 ಕಸ್ಟಮ್ ಬೈಕಿನ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿತ್ತು. ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.77 ಲಕ್ಷಗಳಿಗೆ ಬಿಡುಗಡೆಗೊಳಿಸಿದ್ದರು. ಆದರೆ ಇದೀಗ ಕಂಪನಿಯು ರೂ.12,000 ರವರೆಗೆ ಹೆಚ್ಚಿಸಿದೆ.

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ರೆಟ್ರೊ ಲುಕಿಂಗ್ ಹೆಡ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಕೇಟರ್‍ಗಳನ್ನು ಹೊಂದಿವೆ. ಈ ಬೈಕಿನ ಎಂಜಿನ್ ನಲ್ಲಿ ಡಯಾಗ್ನೋಸ್ಟಿಕ್ಸ್ ಮತ್ತು ಈ ಬೈಕಿನಲ್ಲಿ ಇಂಧನ ಕಡಿಮೆಯಾದಾಗ ಎಚ್ಚರಿಸುವ ಪಾರ್ಟ್ ಡಿಜೆಟಲ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕಿನಲ್ಲಿ 1200 ಸಿಸಿ, ಏರ್-ಕೂಲ್ಡ್ ಎವಲ್ಯೂಷನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 97 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹಾರ್ಲೆ ಡೇವಿಡ್ಸನ್ ಹೊಸ 350 ಸಿಸಿ ಸಾಮರ್ಥ್ಯದ ಬೈಕನ್ನು ಉತ್ಪಾದಿಸುವುದರ ಬಗ್ಗೆ ಖಚಿತವಾಗಿಲ್ಲ. ಆದರೆ ಹಾರ್ಲೆ ಡೇವಿಡ್ಸನ್ ಕಂಪನಿಯು ಕಡಿಮೆ ಸಿಸಿ ಬೈಕನ್ನು ಉತ್ಪಾದಿಸುವುದರ ಬಗ್ಗೆ ಹಲವು ಕುತೂಹಲಗಳನ್ನು ಸೃಷ್ಟಿಸಿದೆ.