ಹೀರೋ ಫ್ಲ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್
ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಸಂಸ್ಥೆಯು ತನ್ನ ಜನಪ್ರಿಯ ಫ್ಲ್ಯಾಶ್ ಇವಿ ಸ್ಕೂಟರ್ ಆವೃತ್ತಿ ಖರೀದಿಗೆ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಸೀಮಿತ ಅವಧಿಯೊಳಗೆ ಫ್ಲ್ಯಾಶ್ ಇವಿ ಸ್ಕೂಟರ್ ಖರೀದಿ ಮಾಡುವ ಗ್ರಾಹಕರು ರೂ.10,500 ತನಕ ಉಳಿತಾಯ ಮಾಡಬಹುದಾಗಿದೆ.

ಫ್ಲ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಹೀರೋ ಸಂಸ್ಥೆಯು ರೂ.7,088 ಡಿಸ್ಕೌಂಟ್ ನೀಡುತ್ತಿದ್ದು, ಪೇಟಿಎಂ ಮೂಲಕ ಹಣ ಪಾವತಿ ಮಾಡಿದ್ದಲ್ಲಿ ರೂ.10,500 ತನಕ ಉಳಿತಾಯ ಮಾಡಬಹುದಾಗಿದೆ. ಫ್ಲ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಲೀಡ್ ಆ್ಯಸಿಡ್ ಮತ್ತು ಲೀಥಿಯಂ ಅಯಾನ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಸ್ಕೌಂಟ್ ನಂತರ ಹೊಸ ಸ್ಕೂಟರ್ ಬೆಲೆಯು ರೂ.29,990 ಆರಂಭವಾಗುತ್ತದೆ.

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಫ್ಲ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಖರೀದಿಗೆ ಅತ್ಯುತ್ತಮವಾಗಿದ್ದು, ಪರಿಸರ ಸ್ನೇಹಿ ವಾಹನ ಖರೀದಿಗೆ ಬಯಸುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆ ಎನ್ನಬಹುದು.

ಫ್ಲ್ಯಾಶ್ ಸ್ಕೂಟರ್ ಮಾದರಿಯು ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 50 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ಮೈಲೇಜ್ ಮತ್ತು ಟಾಪ್ ಸ್ಪೀಡ್ ತುಸು ಕಡಿಮೆ ಎನ್ನಿಸಿದರು ಸಹ ಇದು ನಗರಪ್ರದೇಶಗಳಲ್ಲಿನ ಸಂಚಾರಕ್ಕೆ ಸಾಕಷ್ಟು ಅನುಕೂಲಕವಾಗಿದ್ದು, ಸ್ಕೂಟರ್‌ನಲ್ಲಿರುವ ಕಂಫರ್ಟ್ ಸೀಟ್, ರೀಜನರೇಟಿವ್ ಬ್ರೇಕಿಂಗ್, ಎಲ್ಇಡಿ ಹೆಡ್‌ಲೈಟ್ಸ್ ಸೌಲಭ್ಯವು ಗ್ರಾಹಕರ ಗಮನಸೆಳೆಯುತ್ತದೆ. ಜೊತೆಗೆ ಹೊಸ ಸ್ಕೂಟರ್ ಸಾಕಷ್ಟು ಹಗುರವಾಗಿದ್ದು, 69 ಕೆ.ಜಿ ತೂಕ ಹೊಂದಿರುವ ಫ್ಲ್ಯಾಶ್ ಸ್ಕೂಟರ್‌ನಲ್ಲಿ ಪೂರ್ಣ ಪ್ರಮಾಣದ ಚಾರ್ಜ್‌ಗೆ ಕನಿಷ್ಠ 4 ಗಂಟೆ ತಗೆದುಕೊಳ್ಳುತ್ತದೆ.

ಹಾಗೆಯೇ ಸವಾರರ ಸುರಕ್ಷತೆಗಾಗಿ ಹೊಸ ಸ್ಕೂಟರ್‌ನಲ್ಲಿ ಹಲವು ಫೀಚರ್ಸ್‌ಗಳಿದ್ದು, ಫ್ರಂಟ್ ಟೆಲಿಸ್ಕೊಪಿಕ್ ಫೋರ್ಕ್, ಎರಡು ಬದಿಯ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಸೌಲಭ್ಯಗಳನ್ನು ಸ್ಕೂಟರ್ ಬೆಲೆಗೆ ತಕ್ಕಂತೆ ನೀಡಲಾಗಿದೆ.

ಇನ್ನು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಸತತ 12 ವರ್ಷಗಳನ್ನು ಪೂರೈಸಿರುವ ಹೀರೋ ಸಂಸ್ಥೆಯು ಭಾರತದಲ್ಲಿ ಇದುವರೆಗೆ 3 ಲಕ್ಷ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಮಾರಾಟ ಮಾಡಿದ್ದು, ಕಳೆದ ಎರಡು ವರ್ಷಗಳಿಂದಿಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಹೆಚ್ಚಿನ ಗಮನಹರಿಸಿದೆ.

ಪಂಜಾಬ್‌ನ ಲೂಧಿಯಾನ್‌ನಲ್ಲಿ ವಾರ್ಷಿಕವಾಗಿ 1 ಲಕ್ಷ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ಹೊಂದಿರುವ ಹೀರೋ ಸಂಸ್ಥೆಯು ಫ್ಲ್ಯಾಶ್ ಸೇರಿದಂತೆ ಫೋಟಾನ್, ಆಪ್ಟಿಮಾ ಮತ್ತು ಡಾಶ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ದೇಶಾದ್ಯಂತ 615 ಟಚ್ ಪಾಯಿಂಟ್‌ಗಳ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಜಾಲವನ್ನು ಹೊಂದಿರುವ ಹೀರೋ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಟಚ್ ಪಾಯಿಂಟ್‌ಗಳನ್ನು ತೆರೆಯುವ ಯೋಜನೆಯಲ್ಲಿದ್ದು, ಉತ್ಪಾದನಾ ಘಟಕದ ಉನ್ನತೀಕರಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಮೈಲೇಜ್ ಹೊಂದಿದ್ದು, ಮುಂಬರುವ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸುತ್ತಿದೆ.


Click it and Unblock the Notifications








