ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಹೀರೋ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಕಂಪನಿಯಾದ ಇಬೈಕ್ ಗೋ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವದಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಇಬೈಕ್ ಗೋ ಕಂಪನಿಗೆ 1,000 ಎಲೆಕ್ಟ್ರಿಕ್ ಬೈಕುಗಳನ್ನು ನೀಡಲಿದೆ. ಅವುಗಳನ್ನು ಇಬೈಕ್ ಗೋ ತನ್ನ ಸೇವೆಯಲ್ಲಿ ಬಳಸಿಕೊಳ್ಳಲಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಎಕನಾಮಿಕ್ ಟೈಮ್ಸ್ ಆಟೋ ವರದಿಯ ಪ್ರಕಾರ, ಹೀರೋ ಎಲೆಕ್ಟ್ರಿಕ್ ಈಗಾಗಲೇ 120 ಎಲೆಕ್ಟ್ರಿಕ್ ಬೈಕುಗಳನ್ನು ಇಬೈಕ್ ಗೋ ಕಂಪನಿಗೆ ವಿತರಿಸಿದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಸ್ಕೂಟರ್‌ಗಳನ್ನು ದೇಶದ ಹಲವು ನಗರಗಳಲ್ಲಿ ಮೊಬಿಲಿಟಿ ಸೇವೆಯನ್ನು ನೀಡುತ್ತಿರುವ ಕಂಪನಿಗಳಿಗೆ ಒದಗಿಸುತ್ತಿದೆ. ಈ ಸೇವೆಯನ್ನು ನೀಡುತ್ತಿರುವ ಹಲವು ಕಂಪನಿಗಳು ಪೆಟ್ರೋಲ್ ಸ್ಕೂಟರ್‌ಗಳ ಬದಲು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಳಸುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಇದರ ಜೊತೆಗೆ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸುತ್ತಿವೆ. ಮೊಬಿಲಿಟಿ ಕ್ಷೇತ್ರದಲ್ಲಿ ಈಗ ಬದಲಾವಣೆಯ ಅಗತ್ಯವಿದೆ ಎಂದು ಇಬೈಕ್ ಗೋ ಕಂಪನಿಯ ಸಂಸ್ಥಾಪಕರಾದ ಇರ್ಫಾನ್ ಖಾನ್ ಹೇಳಿದ್ದಾರೆ. ಪೆಟ್ರೋಲ್ ಸ್ಕೂಟರ್'ಗಳ ಬದಲು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಬಳಸುವುದರಿಂದ ಕಂಪನಿಗಳು ಸಾಕಷ್ಟು ಹಣವನ್ನು ಉಳಿಸುವುದರ ಜೊತೆಗೆ ಹೆಚ್ಕು ಲಾಭವನ್ನು ಗಳಿಸಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಇಬೈಕ್ ಗೋಕಂಪನಿಯನ್ನು 2017ರಲ್ಲಿ ಅಮೃತಸರದಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಬೆಂಗಳೂರು, ದೆಹಲಿ, ಮುಂಬೈ, ಅಮೃತಸರ ಹಾಗೂ ಜೈಪುರಗಳಲ್ಲಿ ಬೈಕ್ ಬುಕ್ಕಿಂಗ್ ಸೇವೆಗಳನ್ನು ನೀಡುತ್ತದೆ. 640 ಗ್ರಾಹಕರೊಂದಿಗೆ ಆರಂಭವಾದ ಕಂಪನಿಯು ಈಗ 18,000 ಸಕ್ರಿಯ ಗ್ರಾಹಕರನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಇಬೈಕ್ ಗೋ ಕಂಪನಿಯು ದೇಶದ ಐದು ನಗರಗಳಲ್ಲಿ 3,000 ಫಾಸ್ಟ್ ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈ ಚಾರ್ಜಿಂಗ್ ಸ್ಟೇಷನ್'ಗಳಲ್ಲಿ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಕಂಪನಿಯು 2021ರ ಅಂತ್ಯದ ವೇಳೆಗೆ ಬೆಂಗಳೂರು, ದೆಹಲಿ / ಎನ್‌ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್'ಗಳನ್ನು ಆರಂಭಿಸಲು ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ 15,000ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಎಲ್ಲಾ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಕ್ಯೂಆರ್ ಕೋಡ್‌ ಮೂಲಕ ಕ್ಯಾಶ್ ಲೆಸ್ ಪೇಮೆಂಟ್ ಗಳೊಂದಿಗೆ ಚಾರ್ಜಿಂಗ್ ಮಾಡುವ ಹಾಗೂ ಪಾರ್ಕಿಂಗ್ ಮಾಡುವ ಆಯ್ಕೆಯನ್ನು ನೀಡಲಾಗುವುದು. ಕಂಪನಿಯು ಬಿಡುಗಡೆಗೊಳಿಸಲಿರುವ ಮೊಬೈಲ್ ಅಪ್ಲಿಕೇಶನ್‌ ಮೂಲಕ ಹತ್ತಿರದಲ್ಲಿರುವ ಚಾರ್ಜಿಂಗ್ ಸ್ಟೇಷನ್‌ಗಳನ್ನು ತಲುಪಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಕೆಲ ತಿಂಗಳುಗಳ ಹಿಂದೆ ಇಬೈಕ್ ಗೋ ಕಂಪನಿಯು ಚಂದಾದಾರಿಕೆ ಆಧಾರಿತ ಎನ್ವಿಯರ್ಸ್ ಇ-ಸೈಕಲ್ ಅನ್ನು ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಡೆಲಿವರಿ ಉದ್ದೇಶಗಳಿಗಾಗಿ ಬಿಡುಗಡೆಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ದಿನದ ಅಥವಾ ಮಾಸಿಕ ಚಂದಾದಾರಿಕೆ ಆಧಾರದ ಮೇಲೆ ಬುಕ್ಕಿಂಗ್ ಮಾಡಬಹುದು.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಈ ಎಲೆಕ್ಟ್ರಿಕ್ ಸೈಕಲ್ ಬಾಡಿಗೆಯನ್ನು ದಿನಕ್ಕೆ ರೂ.80ಗಳೆಂದು ನಿಗದಿಪಡಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಸೈಕಲ್ 60-70 ಕಿ.ಮೀಗಳವರೆಗೆ ಚಲಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಈ ಎಲೆಕ್ಟ್ರಿಕ್ ಸೈಕಲ್ ಒಂದು ಬಾರಿಗೆ 200 ಕೆ.ಜಿ ತೂಕವನ್ನು ಸಾಗಿಸಬಲ್ಲದು. ಇದರಿಂದ ವಿವಿಧ ಸಾಮಗ್ರಿಗಳನ್ನು ಡೆಲಿವರಿ ಮಾಡುವವರಿಗೆ ಅನುಕೂಲವಾಗಲಿದೆ. ಕೈಗೆಟುಕುವ ಬೆಲೆಯ ಚಂದಾದಾರಿಕೆಯನ್ನು ಹೊಂದಿರುವ ಕಾರಣಕ್ಕೆ ಹಾಗೂ ನಿರ್ವಹಣೆ ಇಲ್ಲದ ಕಾರಣ ಈ ಸೈಕಲ್'ನ ಬಳಕೆ ಸುಲಭವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲಿದೆ ಈ ಕಂಪನಿಗಳ ಸಹಭಾಗಿತ್ವ

ಈ ಎಲೆಕ್ಟ್ರಿಕ್ ಸೈಕಲ್ ಬ್ಯಾಟರಿಗಳಿಂದ ನಿಯಂತ್ರಿಸಲ್ಪಡುವುದರಿಂದ ಇಂಧನ ವೆಚ್ಚದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸದ್ಯಕ್ಕೆ ಇಬೈಕ್ ಗೋ ಸೈಕಲ್'ಗಳನ್ನು ಸ್ವಿಗ್ಗಿ, ಜೊಮಾಟೊ, ಬಿಗ್‌ಬಾಸ್ಕೆಟ್, ಮುಂತಾದ ಕಂಪನಿಗಳ ಡೆಲಿವರಿ ಏಜೆಂಟರು ಬಳಸುತ್ತಿದ್ದಾರೆ.

Most Read Articles

Kannada
English summary
Hero Electric company partnership with e bike go for e bike delivery. Read in Kannada.
Story first published: Tuesday, December 29, 2020, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X