ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗಾಗಿ ರೆಫರಲ್ ಯೋಜನೆಗಳನ್ನು ಪರಿಚಯಿಸಿದೆ. ಕಂಪನಿಯು ಇತ್ತೀಚೆಗೆ ಬಿ ಎ ಬೈಕ್ ಬಡ್ಡಿ ಎಂಬ ರೆಫರಲ್ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಹೀರೋ ಎಲೆಕ್ಟ್ರಿಕ್‌ನ ಹೊಸ ಹಾಗೂ ಹಳೆಯ ಗ್ರಾಹಕರಿಗೆ ಎಲೆಕ್ಟ್ರಿಕ್ ಬೈಕ್‌ ಹಾಗೂ ಸ್ಕೂಟರ್‌ಗಳನ್ನು ಖರೀದಿಸುವಾಗ ರಿಯಾಯಿತಿ ಕೊಡುಗೆಗಳನ್ನು ನೀಡಲಾಗುವುದು.

ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಈ ಯೋಜನೆಯಡಿಯಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಹೊಸ ಗ್ರಾಹಕರಿಗೆ ರೂ.2,000 ನಗದು ರಿಯಾಯಿತಿ ನೀಡಲಾಗುವುದು. ಹೊಸ ಗ್ರಾಹಕರು ಹಳೆಯ ಗ್ರಾಹಕರ ಮೂಲಕ ಅಥವಾ ರೆಫರಲ್ ಮೂಲಕ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ, ಹೊಸ ಸ್ಕೂಟರ್‌ ಮೇಲೆ ರೂ.2,000 ರೂ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ.

ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಇದರಿಂದ ರೆಫರಲ್‌ ಮೂಲಕ ರೂ.4,000ಗಳನ್ನು ಉಳಿಸಬಹುದು. ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುವಾಗ ಪ್ರತಿ 50ನೇ ಗ್ರಾಹಕರಿಗೆ ಗ್ಲೈಡ್ ಇ-ಸ್ಕೂಟರ್ ಅನ್ನು ಉಚಿತ ಉಡುಗೊರೆಯಾಗಿ ನೀಡಲಾಗುವುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸಲು ಹಲವಾರು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು 2020ರ ಜೂನ್ 25ರಿಂದ ಜುಲೈ 15ರವರೆಗೆ ಖರೀದಿಸಲಾಗುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅನ್ವಯವಾಗಲಿವೆ. ಕಂಪನಿಯು ಈ ಯೋಜನೆಯಿಂದ ಗ್ಲೈಡ್ ಇ-ಸ್ಕೂಟರ್‌ಗಳನ್ನು ಹೊರಗಿಟ್ಟಿದೆ.

ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರು ಅವುಗಳ ಬಗ್ಗೆ ತೃಪ್ತರಾಗದಿದ್ದರೆ, ಮೂರು ದಿನಗಳಲ್ಲಿ ಸ್ಕೂಟರ್‌ಗಳನ್ನು ಹಿಂತಿರುಗಿಸಬಹುದು. ಇದರ ಜೊತೆಗೆ ಕಂಪನಿಯು ಸ್ಕೂಟರ್‌ಗಳಿಗೆ ಡೋರ್ ಡೆಲಿವರಿ ಸರ್ವೀಸ್‌ಗಳನ್ನು ನೀಡುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್, ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಪಂಜಾಬ್‌ನ ಲುಧಿಯಾನದಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಕಂಪನಿಯು ವರ್ಷಕ್ಕೆ 1,00,000 ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಯೋಜನೆ ಆರಂಭಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ದೇಶಾದ್ಯಂತ 600ಕ್ಕೂ ಹೆಚ್ಚು ಶೋ ರೂಂ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಹೊಂದಿದೆ. ಕಂಪನಿಯು ಕಳೆದ 12 ವರ್ಷಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸಿದೆ.

More from DriveSpark

Article Published On: Thursday, June 25, 2020, 19:24 [IST]
English summary
Hero Electric offers discounts upto 4000 through customer referral scheme. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+