ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಹೀರೋ ಮೋಟೊಕಾರ್ಪ್ ಹೆಚ್‌ಎಫ್ ಡೀಲಕ್ಸ್ ಕಿಕ್ ಸ್ಟಾರ್ಟ್‌ನ ಬಿಎಸ್ 6 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೀರೋ ಹೆಚ್‌ಎಫ್ ಡೀಲಕ್ಸ್ ಕಿಕ್ ಸ್ಟಾರ್ಟ್ ಬಿಎಸ್ 6 ಬೆಲೆ ಎಕ್ಸ್ ಶೋರೂಂ ದರದಂತೆ ರೂ.46,800ಗಳಾಗಿದೆ.

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಹೀರೋ ಹೆಚ್‌ಎಫ್ ಡೀಲಕ್ಸ್ ಕಿಕ್ ಸ್ಟಾರ್ಟ್ ಬಿಎಸ್ 6 ಮಾದರಿಯನ್ನು ಸ್ಪೋಕ್ ವ್ಹೀಲ್ ಹಾಗೂ ಅಲಾಯ್ ವ್ಹೀಲ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಟಾಪ್ ಮಾದರಿಯ ಬೆಲೆ ರೂ.47,800ಗಳಾಗಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಈ ಬೈಕ್‌ನ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯನ್ನು ಜನವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು.

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಹೀರೋ ಹೆಚ್‌ಎಫ್ ಡೀಲಕ್ಸ್ ಎಲೆಕ್ಟ್ರಿಕ್ ಸ್ಟಾರ್ಟ್ ಬಿಎಸ್ 6 ಬೈಕಿನ ಬೆಲೆ ರೂ.56,675ಗಳಾಗಿದ್ದು, ಟಾಪ್ ಮಾದರಿಯ ಬೈಕಿಗಿಂತ ರೂ.8,875 ಹೆಚ್ಚು ಬೆಲೆಯನ್ನು ಹೊಂದಿದೆ. ಇದರಿಂದಾಗಿ ಎಲೆಕ್ಟ್ರಿಕ್ ಸ್ಟಾರ್ಟ್ ಬೈಕ್ ಈಗ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕಿನಲ್ಲಿ 100 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 7.94 ಬಿಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 8.05 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಈ ಎಂಜಿನ್‌ನಿಂದಾಗಿ, ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕ್ 9%ನಷ್ಟು ಹೆಚ್ಚು ಮೈಲೇಜ್ ನೀಡಲಿದೆ. ಜೊತೆಗೆ ಹೊಸ ಬೈಕಿನ ಪರ್ಫಾಮೆನ್ಸ್ ಸುಧಾರಿಸಿದೆ ಎಂದು ಹೇಳಲಾಗಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಈ ಬೈಕಿನಲ್ಲಿ ಐ3 ಎಸ್ ತಂತ್ರಜ್ಞಾನವನ್ನೂ ಅಳವಡಿಸಿದೆ. ಕಂಪನಿಯ ಐ 3 ಎಸ್ ಸಿಸ್ಟಂ ಅನ್ನು ಸಹ ಈ ಬೈಕಿನಲ್ಲಿ ಅಳವಡಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಈ ಎರಡೂ ಬೈಕ್‌ಗಳ ಬೆಲೆಯಲ್ಲಿ ರೂ.10,000ಗಳಷ್ಟು ವ್ಯತ್ಯಾಸವಿದೆ. ಪ್ಯಾಸೆಂಜರ್ ಸೆಗ್‌ಮೆಂಟಿನಲ್ಲಿ ಈ ಬೈಕ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ. ಹೆಚ್‌ಎಫ್ ಡೀಲಕ್ಸ್ ಬೈಕ್ ಕಳೆದ ವರ್ಷ ಹೆಚ್ಚು ಮಾರಾಟವಾದ ಬೈಕ್‌ಗಳಲ್ಲಿ ಒಂದಾಗಿದೆ.

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಗೊಂಡ ಜನಪ್ರಿಯ ಹೆಚ್‌ಎಫ್ ಡೀಲಕ್ಸ್ ಬೈಕ್

ಬಿಎಸ್ 6 ಎಂಜಿನ್‌ನಲ್ಲಿ ಬಿಡುಗಡೆಯಾಗಿರುವ ಹೀರೋ ಹೆಚ್‌ಎಫ್ ಡೀಲಕ್ಸ್‌ ಬೈಕ್ ಪ್ಯಾಸೆಂಜರ್ ಬೈಕ್ ಸೆಗ್‌ಮೆಂಟಿನಲ್ಲಿ ಬಜಾಜ್ ಸಿಟಿ 100 ಬೈಕಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Hero HF Deluxe BS6 Kick Start variant launched in India. Read in Kannada.
Story first published: Tuesday, June 2, 2020, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X