ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಹೀರೋ ಮೋಟೊಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್‍‍ನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.38,000ಗಳಾಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ರ‍್ಯಾಲಿ ಕಿಟ್‍‍ಗಾಗಿ ಹೊಸ ಎಕ್ಸ್‌ಪಲ್ಸ್ 200 ಬೈಕ್‍‍ಗಳಲ್ಲಿ ಆಯ್ಕೆ ಮಾಡಬಹುದು ಅಥವಾ ಈಗಾಗಲೇ ಖರೀದಿಸಿರುವ ಗ್ರಾಹಕರು ತಮ್ಮ ಬೈಕ್‍‍ಗಳಲ್ಲಿ ಮರುಹೊಂದಿಸಬಹುದಾಗಿದೆ. ರ‍್ಯಾಲಿ ಉತ್ಸಾಹಿಗಳನ್ನು ಸೆಳೆಯುವಂತೆ ಎಕ್ಸ್‌ಪಲ್ಸ್ 200ಗಾಗಿ ರ‍್ಯಾಲಿ ಕಿಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಎಕ್ಸ್‌ಪಲ್ಸ್ 200 ಬೈಕಿನ ಆಫ್ ರೋಡ್ ಸಾಮರ್ಥ್ಯವು ಸುಧಾರಿಸುತ್ತದೆ. ಹೀರೋ ಮೋಟೊಕಾರ್ಪ್ ಪ್ರಕಾರ ರ‍್ಯಾಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಇದು ಸೂಕ್ತವಾದ ಬೈಕ್ ಆಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಹೀರೋ ಮೋಟೊಸ್ಪೋರ್ಟ್ಸ್ ಟೀಮ್ ರ‍್ಯಾಲಿಯ ಅನುಭವ ಮತ್ತು ಸಲಹೆಯನ್ನು ಪಡೆದು ತಯಾರಕರು ಈ ಬೈಕ್ ರ‍್ಯಾಲಿ ಕಿಟ್ ಅನ್ನು ಅಭಿವೃದ್ದಿಪಡಿಸಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಮೆಚ್ಚುಗೆ ಗಳಿಸಿದ ತಂಡವಿದು.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಈ ತಂಡವು ವಿಶ್ವದ ಅತ್ಯಂತ ಕಠಿಣ ಮೋಟಾರ್‍‍ಸ್ಪೋರ್ಟ್ಸ್ ಸ್ಪರ್ಧೆಯಾದ ಡಾಕರ್ ರ‍್ಯಾಲಿಯಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರವಾದ ತಂಡವಾಗಿದೆ. ಇಷ್ಟು ಅನುಭವವನ್ನು ಹೊಂದಿರುವವರ ಸಲಹೆಯನ್ನು ಪಡೆದುಕೊಂಡು ತಯಾರಿಸಿದ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್‍ ಉತ್ತಮ ಗುಣಮಟ್ಟವನ್ನು ಹೊಂದಿರಬಹುದು ಎಂದು ನಿರೀಕ್ಷಿಸಬಹುದು. ರ‍್ಯಾಲಿ ಕಿಟ್ ಹಲವಾರು ಸುಧಾರಣೆಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಎಕ್ಸ್‌ಪಲ್ಸ್ 200 ಬೈಕು ಬ್ಯಾಟ್‍‍ನಿಂದ ಸ್ವಲ್ಪ ಎತ್ತರವಾಗಿಸಿದೆ. ಈಗ ಮುಂಭಾಗ ಮತ್ತು ಹಿಂಭಾಗದಲ್ಲಿ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸಿದೆ. ಇದೀಗ 275 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, ಸ್ಟಾಕ್ ಬೈಕ್‍‍ಗಿಂತ 55 ಎಂಎಂ ಹೆಚ್ಚಾಗಿದೆ. ಟೆಲಿಸ್ಕೋಪಿಕ್ ಫೋರ್ಕ್ ಅಪ್ ಫ್ರಂಟ್ ಈಗ ಧೂಳು‍ನಿಂದ ರಕ್ಷಣೆ ಪಡೆಯಲು ಬೂಟ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಈ ಬೈಕಿನಲ್ಲಿ ಮ್ಯಾಕ್ಸಿಸ್‌ ನಾಬಿ ಟಯರ್‍‍ಗಳಿಂದ ಕೂಡಿವೆ. ರ‍್ಯಾಲಿ ಆಧಾರಿತ ಸೀಟ್ ಅನ್ನು ಹೊಂದಿದ್ದು, ಇದು ರೈಡರ್‍‍ಗೆ ಹೆಚ್ಚು ಸಹಾಯವಾಗಲಿದೆ. ಫುಟ್‍‍ರೆಸ್ಟ್ ಗಳು ಆಫ್-ರೋಡ್ ಮಾರ್ಗಗಳಿಗೆ ಅನುಗುಣವಾಗಿದೆ ಮತ್ತು ಆಫ್-ರೋಡ್‍ಗಳಲ್ಲಿ ಸುಲಭವಾಗಿ ಚಲಿಸಲು ಗೇರ್‍‍ಲಿವರ್ ಅನ್ನು ವಿಸ್ತರಿಸಲಾಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಈ ಬೈಕಿನಲ್ಲಿ ರ‍್ಯಾಲಿ ಹ್ಯಾಂಡಲ್ ಬಾರ್ ಮತ್ತು ಆಪ್‍-ರೋಡ್‍‍ಗಳಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಲು ರ‍್ಯಾಲಿ ಕಿಟ್ 12/40 ಟಿ ಫ್ರಂಟ್/ರೇರ್ ಸ್ಟ್ರಾಕೆಟ್ ಅನ್ನು ಹೊಂದಿದೆ. ಇದು ಹೆಚ್ಚು ವೇಗವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಇದು ರ‍್ಯಾಲಿ ಸ್ಪೆಕ್ ಡ್ರೈವ್ ಚೈನ್ ಟೆನ್ಷನರ್‍ ಹೊಂದಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಈ ಬೈಕಿನ ಹಿಂಭಾದಲ್ಲಿ ನವೀಕರಣವನ್ನು ನಡೆಸಲಾಗಿದ್ದು, ಸಣ್ಣ ಮಡ್‍‍ಗಾರ್ಡ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಇಂಡಿಕೇಟರ್‍‍ಗಳನ್ನು, ನಂಬರ್‍‍ಪ್ಲೇಟ್ ಮೌಂಟ್ಸ್ ಅನ್ನು ತೆಗೆದುಹಾಕಲಾಗಿದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಎಕ್ಸ್‌ಪಲ್ಸ್ 200 ಬೈಕಿನಲ್ಲಿ 199.6 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.3 ಬಿ‍ಹೆಚ್‍‍ಪಿ ಪವರ್ ಮತ್ತು 17.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೀರೋ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್

ಎಕ್ಸ್‌ಪಲ್ಸ್ 200 ಬೈಕ್‍ ರ‍್ಯಾಲಿ ಕಿಟ್‍ನಿಂದ ಅದರ ಸಾಮರ್ಥ್ಯವನ್ನು ಗಮನರ್ಹವಾಗಿ ಸುಧಾರಣೆ ಕಂಡಿದೆ. ಈ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ ಮತ್ತು ಕಡೆಮೆ ಬೆಲೆಯಾಗಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಹುದು.

Article Published On: Wednesday, February 19, 2020, 19:25 [IST]
English summary
Hero XPulse 200 Rally Kit Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+