ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ 2020ರ ಆರ್ಥಿಕ ವರ್ಷದಲ್ಲಿ 62,31,458 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟವು 18.1%ನಷ್ಟು ಕುಸಿದಿದೆ. ಇದೇ ವೇಳೆ ಹೋಂಡಾ ಮೋಟಾರ್‌ಸೈಕಲ್‌ನ 47,06,589 ಯುನಿಟ್ ವಾಹನಗಳು ಮಾರಾಟವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 14.7%ನಷ್ಟು ಕುಸಿತ ಉಂಟಾಗಿದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಮೋಟಾರ್‌ಸೈಕಲ್‌ ಕಂಪನಿಗಳು ಮಾತ್ರವಲ್ಲದೇ ಬಹುತೇಕ ಎಲ್ಲಾ ವಾಹನ ಕಂಪನಿಗಳ ಮಾರಾಟವು ಕುಸಿದಿದೆ. ಕಳೆದ ಹಣಕಾಸು ವರ್ಷದಲ್ಲಿ ಬೈಕ್ ಸೆಗ್‌ಮೆಂಟಿನಲ್ಲಿ 18%ನಷ್ಟು ಕುಸಿತ ಉಂಟಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗಿಂತ ಬೈಕ್‌ಗಳು ಹೆಚ್ಚು ಮಾರಾಟವಾಗುತ್ತವೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಕಳೆದ ವರ್ಷ ದೇಶೀಯ ಮಾರುಕಟ್ಟೆಯಲ್ಲಿ 64%ನಷ್ಟು ಬೈಕ್‌ಗಳು ಮಾರಾಟವಾಗಿದ್ದವು. ಹೀರೋ ಸ್ಪ್ಲೆಂಡರ್ ಬೈಕ್ ಈ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಸ್ಪ್ಲೆಂಡರ್ ಬೈಕ್ ಹೀರೋ ಮೋಟೊಕಾರ್ಪ್ ಕಂಪನಿಯ ಮಾರಾಟಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. 2020ರ ಆರ್ಥಿಕ ವರ್ಷದಲ್ಲಿ ಹೀರೋ ಸ್ಪ್ಲೆಂಡರ್‌ನ 26,32,800 ಯುನಿಟ್‌ಗಳು ಮಾರಾಟವಾಗಿವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಇದೇ ವೇಳೆ ಭಾರತದ ಜನಪ್ರಿಯ ಸ್ಕೂಟರ್ ಆದ ಹೋಂಡಾ ಆಕ್ಟಿವಾದ ಮಾರಾಟವು ಹೀರೋ ಸ್ಪ್ಲೆಂಡರ್‌ ಮಾರಾಟಕ್ಕಿಂತ ಹಿಂದಿದೆ. ಕಳೆದ ವರ್ಷ ಹೋಂಡಾ ಆಕ್ಟಿವಾದ 25,91,059 ಯುನಿಟ್‌ಗಳು ಮಾರಾಟವಾಗಿವೆ. ಎಲ್ಲಾ ಸ್ಕೂಟರ್‌ಗಳ ಮಾರಾಟ ಪ್ರಮಾಣದಲ್ಲಿ ಈ ಸ್ಕೂಟರ್ 14%ನಷ್ಟು ಮಾರಾಟವಾಗಿದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್‌ನ ಹೆಚ್‌ಎಫ್ ಡೀಲಕ್ಸ್ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕಳೆದ ವರ್ಷ ಹೆಚ್‌ಎಫ್ ಡೀಲಕ್ಸ್‌ನ 20 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಹೋಂಡಾದ ಸಿಬಿ ಶೈನ್ ಬೈಕಿನ 9.5 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ. ಆಕ್ಟಿವಾ ಹೊರತುಪಡಿಸಿದರೆ ಬೇರೆ ಯಾವುದೇ ಸ್ಕೂಟರ್‌ನ ಮಾರಾಟವು 6 ಲಕ್ಷದ ಗಡಿ ದಾಟಿಲ್ಲ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಟಿವಿಎಸ್ ಕಂಪನಿಯ ಜೂಪಿಟರ್ ಸ್ಕೂಟರ್ 5,95,545 ಯೂನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಸ್ಕೂಟರಿನ ಮಾರಾಟದಲ್ಲಿ 24%ನಷ್ಟು ಕುಸಿತ ಉಂಟಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಸ್ಕೂಟರ್‌ನ 7,88,417 ಯುನಿಟ್‌ಗಳು ಮಾರಾಟವಾಗಿದ್ದವು.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಸುಜುಕಿ ಮೋಟರ್ ಸೈಕಲ್ಸ್ ಕಂಪನಿ ಮಾತ್ರ ಈ ವರ್ಷದ ಮಾರಾಟದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ. ಈ ವರ್ಷ ಸುಜುಕಿ ಮೋಟರ್‌ಸೈಕಲ್ಸ್ ಕಂಪನಿಯ 6,85,223 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ 6,68,787 ಯುನಿಟ್‌ಗಳು ಮಾರಾಟವಾಗಿದ್ದವು. ಇದರಿಂದಾಗಿ ಈ ವರ್ಷ 2.5%ನಷ್ಟು ಹೆಚ್ಚು ಮಾರಾಟವಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಹೀರೋ ಮೋಟೊಕಾರ್ಪ್

ಯಮಹಾ ಕಂಪನಿಯು ಮಾರಾಟದಲ್ಲಿ ಕಳಪೆ ಸಾಧನೆ ಮಾಡಿದೆ. ಈ ವರ್ಷ ಯಮಹಾ ಕಂಪನಿಯ ಮಾರಾಟವು 28%ನಷ್ಟು ಕುಸಿದಿದೆ. ಈ ಹಣಕಾಸು ವರ್ಷದಲ್ಲಿ ಬೈಕ್ ಮಾರುಕಟ್ಟೆಯು ದೊಡ್ಡ ಮಟ್ಟದ ಕುಸಿತ ಕಾಣಲಿದೆ ಎಂದು ಹೇಳಲಾಗಿದೆ.

Article Published On: Thursday, April 23, 2020, 18:45 [IST]
English summary
Hero Motocorp beats Honda Motorcycles in sales. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+