ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 6 ತಿಂಗಳ ಹಿಂದೆ ತನ್ನ ಸ್ಕೂಟರ್‌ಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್​ಡೇಟ್ ಗೊಳಿಸಿತ್ತು. ಎಂಜಿನ್ ಜೊತೆಗೆ ಸ್ಕೂಟರ್‌ಗಳಲ್ಲಿಯೂ ಕೆಲವು ಸಣ್ಣ ಅಪ್​ಡೇಟ್ ಗಳನ್ನು ಮಾಡಿ ಬಿಡುಗಡೆಗೊಳಿಸಲಾಗಿತ್ತು.

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ಕಾರಣದಿಂದಾಗಿ ಆಟೋ ಮೊಬೈಲ್ ಉದ್ಯಮವು ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಹೀರೋ ಮೋಟೊಕಾರ್ಪ್ ತನ್ನ ಹೀರೋ ಪ್ಲೆಷರ್ ಪ್ಲಸ್ ಹಾಗೂ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಹೀರೋ ಮೋಟೊಕಾರ್ಪ್ ಮಾತ್ರವಲ್ಲದೇ ಬೇರೆ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಸಹ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಬೇರೆ ಕಂಪನಿಗಳ ಬೆಲೆ ಏರಿಕೆಗೆ ಹೊಲಿಸಿದರೆ, ಹೀರೋ ಮೋಟೊಕಾರ್ಪ್ ಸ್ಕೂಟರ್ ಗಳ ಬೆಲೆ ಏರಿಕೆ ಪ್ರಮಾಣವು ಕಡಿಮೆಯಾಗಿದೆ. ಹೀರೋ ಮೋಟೊಕಾರ್ಪ್ ತನ್ನ ಪ್ಲೆಷರ್ ಪ್ಲಸ್ ಸ್ಕೂಟರ್‌ನ ಬೆಲೆಯನ್ನು ರೂ.1,300ರಷ್ಟು ಹಾಗೂ ಡೆಸ್ಟಿನಿ 125 ಸ್ಕೂಟರ್‌ನ ಬೆಲೆಯನ್ನು ರೂ.500ರಷ್ಟು ಹೆಚ್ಚಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಡೆಸ್ಟಿನಿ 125 ಸ್ಕೂಟರ್ ಸರಳವಾದ ಹಾಗೂ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ಹಲವಾರು ಫೀಚರ್ ಗಳನ್ನು ಹೊಂದಿದೆ. ಈ ಫೀಚರ್ ಗಳಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸಹ ಸೇರಿದೆ. ಈ ಬಿಎಸ್ 6 ಸ್ಕೂಟರ್‌ನಲ್ಲಿ ಕಂಪನಿಯು ಎಲ್‌ಇಡಿ ಟೇಲ್‌ಲೈಟ್ ಅಳವಡಿಸಿದೆ.

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಲರ್, ಕಂಪನಿಯ ಐ 3 ಎಸ್ ಟೆಕ್ನಾಲಜಿ, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಅಲಾಯ್ ವ್ಹೀಲ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆಂಷನ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಬೂಟ್ ಲೈಟ್, ಇಂಟಿಗ್ರೇಟೆಡ್ ಬ್ರೇಕಿಂಗ್, ಟ್ಯೂಬ್‌ಲೆಸ್ ಟಯರ್ ಗಳನ್ನು ಅಳವಡಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಡೆಸ್ಟಿನಿ 125 ಸ್ಕೂಟರ್‌ನಲ್ಲಿ 124.6 ಸಿಸಿಯ ಏರ್-ಕೂಲ್ಡ್, 4-ಸ್ಟ್ರೋಕ್ ಎಸ್‌ಐ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಪ್ಲೆಷರ್ ಪ್ಲಸ್ ಸ್ಕೂಟರ್‌ನಲ್ಲಿ 110 ಸಿಸಿಯ ಎಕ್ಸ್ ಸೆನ್ಸ್ ಟೆಕ್ನಾಲಜಿಯನ್ನು ಹೊಂದಿರುವ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8.04 ಬಿಹೆಚ್‌ಪಿ ಪವರ್ ಹಾಗೂ 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪ್ಲೆಷರ್ ಪ್ಲಸ್, ಡೆಸ್ಟಿನಿ 125 ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಅನಲಾಗ್ ಸ್ಪೀಡೋಮೀಟರ್, ಡ್ಯುಯಲ್-ಎಕ್ಸಾಸ್ಟ್ ಸೀಟ್, ಎಲ್ಇಡಿ ಬೂಟ್ ಲ್ಯಾಂಪ್‌ ಹಾಗೂ ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊಂದಿದೆ.

Most Read Articles

Kannada
English summary
Hero Motocorp increases price of pleasure plus and destini 125 scooters. Read in Kannada.
Story first published: Thursday, August 20, 2020, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X