ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕೈಗೆಟುಕುವ ಬೆಲೆಯ 100 ಸಿಸಿ ಹೆಚ್‌ಎಫ್ ಡೀಲಕ್ಸ್ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ ಕಂಪನಿಯು ಹೆಚ್‌ಎಫ್ ಡೀಲಕ್ಸ್ ನ ಕಿಕ್ ಸ್ಟಾರ್ಟ್ ವಿತ್ ಸ್ಪೋಕ್ ವ್ಹೀಲ್ ಹಾಗೂ ಕಿಕ್ ಸ್ಟಾರ್ಟ್ ವಿಥ್ ಅಲಾಯ್ ವ್ಹೀಲ್ ಎಂಬ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಿದೆ.

ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಬೈಕುಗಳು ಈ ಹಿಂದೆ ಬಿಡುಗಡೆಯಾದ ಬಿಎಸ್ 6 ಬೈಕುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಸ್ಪೋಕ್ ವ್ಹೀಲ್ ಹೊಂದಿರುವ ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ರೂ.48,000ಗಳಾದರೆ, ಅಲಾಯ್ ವ್ಹೀಲ್ ಹೊಂದಿರುವ ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ರೂ.49,000ಗಳಾಗಿದೆ. ಈ ಎರಡೂ ಬೈಕ್‌ಗಳು ಹೆಚ್‌ಎಫ್ ಡೀಲಕ್ಸ್ ಸರಣಿಯಲ್ಲಿ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿವೆ. ಹೆಚ್‌ಎಫ್ ಡೀಲಕ್ಸ್ ಟಾಪ್ ಎಂಡ್ ಮಾದರಿಯ ಬೆಲೆ ರೂ.58,500ಗಳಾಗಿದೆ.

ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಕಂಪನಿಯು ಸೆಲ್ಫ್ ಸ್ಟಾರ್ಟ್ ಹಾಗೂ ಅಲಾಯ್ ವ್ಹೀಲ್ ನೊಂದಿಗೆ ಆಲ್ ಬ್ಲ್ಯಾಕ್ ಕಲರ್ ಮಾದರಿಯಲ್ಲಿ ಹೆಚ್‌ಎಫ್ ಡೀಲಕ್ಸ್ ನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.57,300ಗಳಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಹೆಚ್‌ಎಫ್ ಡೀಲಕ್ಸ್ ಬಿಎಸ್ 6 ಬೈಕಿನಲ್ಲಿ ಐ 3 ಎಸ್ ಟೆಕ್ನಾಲಜಿಯ ಫ್ಯೂಯಲ್ ಇಂಜೆಕ್ಷನ್ ಎಂಜಿನ್‌ ಅಳವಡಿಸಲಾಗಿದೆ. ಹೊಸ ಬೈಕುಗಳ ಬಿಡುಗಡೆಯೊಂದಿಗೆ ಹೀರೋ ಹೆಚ್‌ಎಫ್ ಡೀಲಕ್ಸ್ ದೇಶೀಯ ಮಾರುಕಟ್ಟೆಯ 100 ಸಿಸಿ ಸೆಗ್ ಮೆಂಟಿಗೆ ಸೇರ್ಪಡೆಯಾಗಿದೆ.

ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕಿನಲ್ಲಿ 97.2 ಸಿಸಿಯ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8000 ಆರ್‌ಪಿಎಂನಲ್ಲಿ 8.02 ಬಿಹೆಚ್‌ಪಿ ಪವರ್ ಹಾಗೂ 6000 ಆರ್‌ಪಿಎಂನಲ್ಲಿ 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4-ಸ್ಪೀಡಿನ ಸಾಮಾನ್ಯ ಗೇರ್‌ಬಾಕ್ಸ್ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಸಸ್ಪೆಂಷನ್ ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಅಡ್ಜಸ್ಟಬಲ್ ಟ್ವಿನ್ ಸ್ಪ್ರಿಂಗ್ ಗಳನ್ನು ನೀಡಲಾಗಿದೆ. ಈ ಬೈಕ್‌ನಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಿಲ್ಲ. ಹೆಚ್‌ಎಫ್ ಡೀಲಕ್ಸ್ ಬೈಕ್‌ಗಳ ಪೂರ್ತಿ ಸರಣಿಯು ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಕಡಿಮೆ ಬೆಲೆಯ ಹೆಚ್‌ಎಫ್ ಡೀಲಕ್ಸ್ ಬೈಕ್‌ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಹೆಚ್‌ಎಫ್ ಡೀಲಕ್ಸ್ ಎಂಟ್ರಿ ಲೆವೆಲ್ ನ ಕೈಗೆಟುಕುವ ಪ್ರಯಾಣಿಕರ ಬೈಕ್ ಆಗಿದೆ. ಈ ಬೈಕ್ ಬಜಾಜ್ ಪ್ಲಾಟಿನಾ, ಬಜಾಜ್ ಸಿಟಿ 100, ಟಿವಿಎಸ್ ಸ್ಟಾರ್ ಸಿಟಿ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, August 21, 2020, 10:51 [IST]
English summary
Hero motocorp launches cheaper variant HF deluxe bike. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+