ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಅಮೆರಿಕದ ಜನಪ್ರಿಯ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್ ಶೀಘ್ರದಲ್ಲೇ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್‌ಗಳನ್ನು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಭಾರತದಲ್ಲಿ ತನ್ನ ಹೊಸ ಯೋಜನೆಗಾಗಿ ಹೀರೋ ಮೋಟೊಕಾರ್ಪ್ ಜೊತೆ ಕೈಜೋಡಿಸಲು ಮುಂದಾಗಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಟಿವಿಎಸ್ ಜೊತೆ ಮತ್ತು ಬಜಾಜ್ ಜೊತೆ ಟ್ರಯಂಫ್ ಸಂಸ್ಥೆಯು ಕೈ ಜೋಡಿಸಿದ ಮಾದರಿಯಲ್ಲೇ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಇದೀಗ ಹೀರೋ ಜೊತೆಗೂಡಿ ಭಾರತದಲ್ಲಿ ಹೊಸ ಬೈಕ್ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ನಿರ್ಮಾಣದ ಬಹುತೇಕ ಕ್ರೂಸ್ ಬೈಕ್‌ಗಳು 550 ಸಿಸಿ ಮೇಲ್ಪಟ್ಟದ ಪ್ರೀಮೀಯಂ ಆವೃತ್ತಿಗಳಾಗಿದ್ದು,ಹೊಸ ಯೋಜನೆಯಡಿ 250ಸಿಸಿಯಿಂದ 500 ಸಿಸಿ ಬೈಕ್‌ಗಳನ್ನು ಅಭಿವೃದ್ದಿಪಡಿಸಲು ಮುಂದಾಗಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಸದ್ಯ ಸಿಕೆಡಿ ಆಮದು ನೀತಿ ಅಡಿಯಲ್ಲಿ ಬೈಕ್ ಮಾರಾಟ ಮಾಡುತ್ತಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮುಂಬರುವ ಹೊಸ ಬೈಕ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಭಾರತದಲ್ಲೇ ಸಿದ್ದಪಡಿಸುವ ಇರಾದೆಯಲ್ಲಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಇದಕ್ಕಾಗಿಯೇ ಸ್ಥಳೀಯವಾಗಿ ಬಲಿಷ್ಠವಾಗಿರುವ ಬೈಕ್ ಉತ್ಪಾದನಾ ಸಂಸ್ಥೆಯೊಂದನ್ನು ಆಯ್ಕೆ ಮಾಡುತ್ತಿರುವ ಹಾರ್ಲೆ ಸಂಸ್ಥೆಯು ಹೀರೋ ಜೊತೆಗೆ ಹೊಸ ಯೋಜನ ಬಗೆಗೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಹೊಸ ಒಪ್ಪಂದದ ಕುರಿತು ಸ್ಪಷ್ಟಪಡಿಸಲಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಈ ಕುರಿತಂತೆ ಹೀರೋ ಮೋಟೊಕಾರ್ಪ್ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಮುಂಜಾಲ್ ಅವರೇ ಮಾಹಿತಿ ನೀಡಿದ್ದು, ಸದ್ಯ ಹೊಸ ಒಪ್ಪಂದದ ಬಗೆಗೆ ಮಾತುಕತೆ ಮಾತ್ರವೇ ನಡೆದಿದೆ. ಆದರೆ ಅಂತಿಮ ಹಂತದ ತೀರ್ಮಾನ ಬಗೆಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಆದರೆ ಹೊಸ ಯೋಜನೆಗೆ ಹಾರ್ಲೆ ಒಪ್ಪಿಗೆ ನೀಡಿದ್ದಲ್ಲಿ ಹೀರೋ ಮೋಟೊಕಾರ್ಪ್ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದಾರೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಹೀಗಾಗಿ ಮುಂದಿನ ಏಪ್ರಿಲ್ ನಂತರವಷ್ಟೇ ಹೊಸ ಸಹಭಾಗಿತ್ವದ ಯೋಜನೆಯ ಬಗೆಗೆ ಅಂತಿಮ ತೀರ್ಮಾನ ಪ್ರಕಟವಾಗಲಿದ್ದು, ಬೈಕ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಹೀರೋ ಜೊತೆಯಲ್ಲೇ ಹಾರ್ಲೆ ಸಂಸ್ಥೆಯು ಹೊಸ ಯೋಜನೆಯು ಕೈಗೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಇನ್ನು ಹೀರೋ ಜೊತೆಯಲ್ಲೇ ಹಾರ್ಲೆ ಸಂಸ್ಥೆಯು ಸಹಭಾಗಿತ್ವ ಯೋಜನೆ ಆರಂಭಿಸಲು ಹಲವಾರು ಕಾರಣಗಳಿದ್ದು, ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಜನಪ್ರಿಯತೆಯೊಂದಿಗೆ ಹೀರೋ ಸಂಸ್ಥೆಯು ಅಗಾಧವಾದ ಮಾರಾಟ ಜಾಲವನ್ನು ಹೊಂದಿರುವುದು ಹಾರ್ಲೆ ಸಂಸ್ಥೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಹಾಗೆಯೇ ಭಾರತದಲ್ಲಿ ಮಾತ್ರವಲ್ಲ ಏಷ್ಯಾ ಪ್ರಮುಖ ರಾಷ್ಟ್ರಗಳಲ್ಲಿ ಹೀರೋ ಬೈಕ್ ಉತ್ಪನ್ನಗಳು ಭಾರೀ ಜನಪ್ರಿಯತೆಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಿಂದಲೇ ಹೊಸ ಬೈಕ್ ಉತ್ಪಾದನೆ ಮಾಡಿ ಏಷ್ಯಾದ ಪ್ರಮುಖ ಮಾರುಕಟ್ಟೆಗಳಿಗೆ ರಫ್ತು ಉದ್ದೇಶ ಹೊಂದಿರುವ ಹಾರ್ಲೇ ಸಂಸ್ಥೆಯು ಇದು ಕೂಡಾ ಪ್ರಮುಖ ವಿಚಾರವಾಗಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಇಂತಹ ಪ್ರಮುಖ ಅಂಶಗಳನ್ನು ಪರಿಗಣಿಸಿರುವ ಹಾರ್ಲೆ ಸಂಸ್ಥೆಯು ಹೀರೋ ಜೊತೆ ಸಹಭಾಗಿತ್ವ ಯೋಜನೆ ಆರಂಭಿಸುವ ಇರಾದೆಯಲ್ಲಿದ್ದು, ಬೈಕ್ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಮಾತ್ರವೇ ಹೀರೋ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಿದೆ.

ಹೊಸ ಬೈಕ್ ಉತ್ಪಾದನೆಗಾಗಿ ಹೀರೋ ಜೊತೆ ಕೈಜೋಡಿಸಲು ಮುಂದಾದ ಹಾರ್ಲೆ ಡೇವಿಡ್ಸನ್

ಇನ್ನುಳಿದಂತೆ ತನ್ನದೇ ಆದ ವಿಶ್ವದರ್ಜೆ ಬೈಕ್ ಉತ್ಪಾದನಾ ತಂತ್ರಜ್ಞಾನವನ್ನು ಹೊಸ ಬೈಕ್‌ಗಳ ಉತ್ಪಾದನೆ ಮುಂದುವರಿಸಲಿರುವ ಹಾರ್ಲೆ ಸಂಸ್ಥೆಯು ಲಾಭಾಂಶದಲ್ಲಿ ಇಂತಿಷ್ಟು ಪ್ರಮಾಣವನ್ನು ಹೀರೋ ಜೊತೆ ಹಂಚಿಕೊಳ್ಳಲಿದ್ದು, ಬೈಕ್ ಉತ್ಪಾದನೆಗಾಗಿ ಹೊಸ ಘಟಕದ ಮೇಲೆ ಬಂಡವಾಳ ಹೂಡಿಕೆಯ ಹೊರೆಯನ್ನು ತಪ್ಪಿಸಲು ಇಂತಹ ಸಹಭಾಗಿತ್ವ ಯೋಜನೆಗಳು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸಾಕಷ್ಟು ಲಾಭ ತಂದುಕೊಡುತ್ತವೆ ಎನ್ನಬಹುದು.

More from DriveSpark

Article Published On: Thursday, February 20, 2020, 19:33 [IST]
English summary
Hero MotoCorp, the country's largest two-wheeler manufacturer, says it's ready to enter into a partnership with America's Harley-Davidson, which is currently looking at making smaller motorcycles for India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+