ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹರನ್ನು ಸೆಳೆಯಲು ತನ್ನ ಸರಣಿಯಲ್ಲಿರುವ ಸ್ಕೂಟರ್‌ಗಳ ಬಗ್ಗೆ ಹೊಸ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಸ್ಕೂಟರ್‌ಗಳು ಈಗ ಫೈ ಜೊತೆಗೆ ಅತ್ಯಾಧುನಿಕ ಎಕ್ಸ್‌ಸೆನ್ಸ್ ತಂತ್ರಜ್ಞಾನ ಒಳಗೊಂಡಿದೆ.

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಹೊಸ ಹೀರೋ ಸ್ಕೂಟರ್ ಟಿವಿಸಿಯಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಪೊಲೀಸ್ ಅಧಿಕಾರಿಯಾಗಿ ಅವರು ತಮ್ಮ ಹಿರಿಯ ಅಧಿಕಾರಿ ಜೊತೆಗೆ ರಸ್ತೆಯಲ್ಲಿ ಬರುವ ಹೀರೋ ಸ್ಕೂಟರ್ ರೈಡರ್ ಗಳ ಜೊತೆ ಮಾತನಾಡುತ್ತಾರೆ. ಸ್ಕೂಟರ್ ರೈಡರ್ ಗಳು ಹೀರೋ ಸ್ಕೂಟರ್ ಬಗ್ಗೆ ಮೆಚ್ಚುಗೆಯ ವ್ಯಕ್ತಪಡಿಸುತ್ತಾರೆ. ನಂತರ ಪೊಲೀಸ್ ಅಧಿಕಾರಿಯು ಹೀರೋ ಸ್ಕೂಟರ್ ಖರೀದಿಸಿ ರೈಡ್ ಮಾಡುವುದನ್ನು ಟಿವಿಸಿಯಲ್ಲಿ ಪ್ರದರ್ಶಿಸಿದ್ದಾರೆ.

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಇನ್ನು ಟಿವಿಸಿಯಲ್ಲಿ ತಮ್ಮ ಸ್ಕೂಟರ್‌ಗಳಲ್ಲಿ ಹೀರೋ ಮೊಟೊಕಾರ್ಪ್ ಪರಿಚಯಿಸಿದ ತಾಂತ್ರಿಕ ನವೀಕರಣಗಳ ಬಗ್ಗೆಯು ವಿವರಿಸಿದ್ದಾರೆ. ಸ್ಕೂಟರ್ ಸ್ಟೈಲ್, ಮೈಲೇಜ್, ಪರ್ಫಾರ್ಮೆನ್ಸ್‌ನಂತಹ ಫೀಚರ್ ಗಳನ್ನು ಸಹ ಪ್ರದರ್ಶಿಸಿದ್ದಾರೆ. ವಿಶೇಷವಾಗಿ ಈಗ ಇತ್ತೀಚೆಗೆ ಪರಿಚಯಿಸಲಾದ ಹೀರೋ ಎಕ್ಸ್‌ಸೆನ್ಸ್ ಪ್ರೋಗ್ರಾಮ್ಡ್ ಪ್ಯೂಯಲ್ ಇಂಜೆಕ್ಷನ್ ಸಿಸ್ಟಂ ಬಗ್ಗೆ ಹೇಳಿದ್ದಾರೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೀರೋ ಮೊಟೊಕಾರ್ಪ್ ಇತ್ತೀಚಿನ ದಿನಗಳಲ್ಲಿ ವಿವಿಧ ಟಿವಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಆಕರ್ಷಕ ಜಾಹೀರಾತನ್ನು ನೀಡುತ್ತಿದೆ. ವಿಶೇಷವಾಗಿ ಅವರ ಸ್ಕೂಟರ್‌ಗಳಿಗಾಗಿ ಮುದ್ರಣ ಮತ್ತು ಟೆಲಿವಿಷನ್ ಜಾಹೀರಾತು ನೀಡುವ ವಿಷಯದಲ್ಲಿ ದ್ವಿಚಕ್ರ ವಾಹನ ತಯಾರಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಹೀರೋ ಮೊಟೊಕಾರ್ಪ್ ಇತ್ತೀಚೆಗೆ ಎರಡು ಹೊಸ ವಿಶೇಷ ಆವೃತ್ತಿ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಹೊಸ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.60,950 ಗಳಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಹೊಸ ಪ್ಲೆಷರ್ ಪ್ಲಸ್ ಪ್ಲಾಟಿನಂ ಎಡಿಷನ್ ಸ್ಕೂಟರ್ ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ. ಜೊತೆಗೆ ಕೆಲವು ಹೆಚ್ಚುವರಿ ಫೀಚರ್ ಗಳನ್ನು ಸಹ ಪಡೆದುಕೊಂಡಿದೆ. ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಹೊಸ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇದರ ಆಕರ್ಷಕ ವಿನ್ಯಾಸದಿಂದ ಮತ್ತಷ್ಟು ಐಷಾರಾಮಿ ಲುಕ್ ಅನ್ನು ನೀಡುತ್ತದೆ.

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲುತ್ತದೆ. ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ನಲ್ಲಿ 110ಸಿಸಿ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಹೊಸ ಹೀರೋ ಪ್ಲೆಷರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಇತ್ತೀಚೆಗೆ ಬಿಡುಗಡೆಯಾದ ಮೆಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎರಡು ಕೂಡ ವಿಶೇಷ ಆವೃತ್ತಿಗಳಾಗಿದೆ. ಎರಡೂ ಸ್ಕೂಟರ್ ಮಾದರಿಗಳು ಆಯಾ ವಿಭಾಗಗಳಲ್ಲಿ ಜನಪ್ರಿಯ ಮಾದರಿಗಳಾಗಿವೆ ಈ ಎರಡು ಸ್ಕೂಟರ್ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಜನಪ್ರಿಯ ಹೀರೋ ಸ್ಕೂಟರ್‌ಗಳ ಆಕರ್ಷಕ ಟಿವಿಸಿ ಬಿಡುಗಡೆ

ಇನ್ನು ಬಿಎಸ್-6 ಹೀರೋ ಮೆಸ್ಟ್ರೋ ಎಡ್ಜ್ 25 ಸ್ಟೆಲ್ತ್ ಸ್ಕೂಟರ್ ನಲ್ಲಿ 124.6 ಸಿಸಿ ಪ್ರೊಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ ಎಂಜಿನ್‌ನೊಂದಿಗೆ ಎಕ್ಸ್‌ಸೆನ್ಸ್ ಟೆಕ್ನಾಲಜಿ ಹೊಂದಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 9 ಬಿಹೆಚ್‍ಪಿ ಪವರ್ ಮತ್ತು 5500 ಆರ್‌ಪಿಎಂನಲ್ಲಿ 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

Most Read Articles

Kannada
English summary
Hero Destini, Maestro, Pleasure Scooters In New TVCs Ft. Ranbir Kapoor. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X