Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎರಡು ಲಕ್ಷಕ್ಕೂ ಹೆಚ್ಚು ಯೂನಿಟ್ ಮಾರಾಟದೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದ ಹೀರೋ ಸ್ಪ್ಲೆಂಡರ್
ನವೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದ ಅಂಕಿ ಅಂಶಗಳನ್ನು ಪ್ರಕಟಿಸಲಾಗಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾಗಿದೆ.

ಹೋಂಡಾ ಆಕ್ಟಿವಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿ ಏಳು ಬೈಕ್‌ಗಳು ಹಾಗೂ ಮೂರು ಸ್ಕೂಟರ್‌ಗಳಿವೆ. ಈ ಪಟ್ಟಿಯ ಆರಂಭಿಕ ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಹೀರೋ ಸ್ಪ್ಲೆಂಡರ್ ಬೈಕಿನ 2,48,398 ಯುನಿಟ್'ಗಳು ನವೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ.

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ ಬೈಕುಗಳನ್ನು ಗ್ರಾಮೀಣ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದೆ. ಸ್ಪ್ಲೆಂಡರ್ ಬೈಕ್ ಕಳೆದ ಹಲವಾರು ತಿಂಗಳುಗಳಿಂದ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಬಾರಿಯೂ ಅಗ್ರ ಸ್ಥಾನದಲ್ಲಿ ಮುಂದುವರೆದಿರುವ ಸ್ಪ್ಲೆಂಡರ್, ಆಕ್ಟಿವಾವನ್ನು ಹಿಂದಿಕ್ಕಿದೆ. ಕಳೆದ ತಿಂಗಳು ಹೋಂಡಾ ಆಕ್ಟಿವಾ ಸ್ಕೂಟರಿನ 2,25,822 ಯುನಿಟ್'ಗಳನ್ನು ಮಾರಾಟ ಮಾಡಲಾಗಿದೆ.

ಆಕ್ಟಿವಾ, ಸ್ಪ್ಲೆಂಡರ್ ಬೈಕಿಗಿಂತ 23 ಸಾವಿರ ಯುನಿಟ್'ಗಳಷ್ಟು ಕಡಿಮೆ ಮಾರಾಟವಾಗಿದೆ. ಆಕ್ಟಿವಾ ಸ್ಕೂಟರ್ ಬಿಡುಗಡೆಯಾದ 20 ವರ್ಷಗಳ ಹಿನ್ನೆಲೆಯಲ್ಲಿ 20ನೇ ವಾರ್ಷಿಕೋತ್ಸವದ ಸೀಮಿತ ಆವೃತ್ತಿಯ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆಕ್ಟಿವಾ 6 ಜಿ, ವಾರ್ಷಿಕೋತ್ಸವ ಆವೃತ್ತಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.66,816ಗಳಾಗಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಹೀರೋ ಹೆಚ್‌ಎಫ್ ಡೀಲಕ್ಸ್ ಬೈಕಿನ 1,79,426 ಯುನಿಟ್‌ಗಳು ನವೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ.
ಸ್ಥಾನ | ಮಾದರಿಗಳು | ನವೆಂಬರ್ 20 |
1 | ಹೀರೋ ಸ್ಪ್ಲೆಂಡರ್ | 2,48,398 |
2 | ಹೋಂಡಾ ಆಕ್ಟಿವಾ | 2,25,822 |
3 | ಹೀರೋ ಹೆಚ್‌ಎಫ್ ಡೀಲಕ್ಸ್ | 1,79,426 |
4 | ಬಜಾಜ್ ಪಲ್ಸರ್ | 1,04,904 |
5 | ಹೋಂಡಾ ಸಿಬಿ ಶೈನ್ | 94,413 |
6 | ಟಿವಿಎಸ್ ಎಕ್ಸ್‌ಎಲ್ ಮೊಪೆಡ್ | 70,750 |
7 | ಟಿವಿಎಸ್ ಜೂಪಿಟರ್ | 62,626 |
8 | ಹೀರೋ ಪ್ಯಾಶನ್ | 53,768 |
9 | ಸುಜುಕಿ ಆಕ್ಸೆಸ್ | 45,582 |
10 | ಬಜಾಜ್ ಪ್ಲಾಟಿನಾ | 41,572 |

ಬಜಾಜ್ ಪಲ್ಸರ್ 1,04,904 ಯುನಿಟ್‌ಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಬಜಾಜ್ ಕಂಪನಿಯು ಪಲ್ಸರ್ ಬೈಕ್ ಅನ್ನು ಅನೇಕ ಮಾದರಿಗಳಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

125 ಸಿಸಿ ಮಾದರಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಐದನೇ ಸ್ಥಾನದಲ್ಲಿರುವ ಹೋಂಡಾ ಸಿಬಿ ಶೈನ್ ಬೈಕಿನ 94,413 ಯುನಿಟ್‌ಗಳು ನವೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ.

ಪಲ್ಸರ್ ಬೈಕ್ ಕಳೆದ ಎರಡು ತಿಂಗಳಿನಿಂದ ಹೋಂಡಾ ಸಿಬಿ ಶೈನ್ ಬೈಕ್ ಅನ್ನು ಮಾರಾಟದಲ್ಲಿ ಹಿಂದಿಕ್ಕಿದೆ. ಟಿವಿಎಸ್ ಎಕ್ಸ್‌ಎಲ್ ಮೊಪೆಡ್ 70,750 ಯುನಿಟ್‌ಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟಿವಿಎಸ್ ಕಂಪನಿಯ ಜೂಪಿಟರ್ 62,626 ಯುನಿಟ್‌ಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ. ಹೀರೋ ಮೋಟೊಕಾರ್ಪ್ ಕಂಪನಿಯ ಪ್ಯಾಶನ್ ಬೈಕ್ 53,768 ಯುನಿಟ್ ಮಾರಾಟದೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಸುಜುಕಿ ಕಂಪನಿಯ ಆಕ್ಸೆಸ್ ಸ್ಕೂಟರ್ 45,582 ಯುನಿಟ್ ಮಾರಾಟದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಹತ್ತನೇ ಸ್ಥಾನದಲ್ಲಿರುವ ಬಜಾಜ್ ಪ್ಲಾಟಿನಾ ಬೈಕಿನ 41,572 ಯುನಿಟ್‌ಗಳು ನವೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಚ್ಚರಿ ಎಂಬಂತೆ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಹೀರೋ ಮೋಟೊಕಾರ್ಪ್ ಸೇರಿದಂತೆ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಈ ಬೆಲೆ ಏರಿಕೆಯು 2021ರ ಜನವರಿ ತಿಂಗಳಿನಿಂದ ಜಾರಿಗೆ ಬರಲಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಮಾದರಿಗಳ ಅನುಸಾರ ಬೆಲೆಯನ್ನು ಹೆಚ್ಚಿಸಿದೆ. ವೆಚ್ಚ ಹೆಚ್ಚಳದ ಕಾರಣಕ್ಕೆ ಬೆಲೆ ಹೆಚ್ಚಿಸಲಾಗಿದೆ ಎಂದು ಹೀರೋ ಮೋಟೊಕಾರ್ಪ್ ಹೇಳಿದೆ. ಬಹುತೇಕ ಕಂಪನಿಗಳು ಬೆಲೆ ಏರಿಕೆಗೆ ಇದೇ ಕಾರಣವನ್ನು ನೀಡಿವೆ.