ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ 2020ರ ಅಕ್ಟೋಬರ್ ತಿಂಗಳಲ್ಲಿ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟು 7,91,137 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹೀರೋ 5,86,988 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯ ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.34.8 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು 2020ರ ಅಕ್ಟೋಬರ್‌ ತಿಂಗಳಲ್ಲಿ ಹೀರೋ ಗ್ಲ್ಯಾಮರ್ 78,439 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಹೀರೋ ಗ್ಲ್ಯಾಮರ್ 40,896 ಯುನಿಟ್‌ಗಳು ಮಾರಾಟವಾಗಿತ್ತು.

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಹೀರೋ ಗ್ಲ್ಯಾಮರ್ ಬೈಕಿನ ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.91 ರಷ್ಟು ಬೆಳವಣಿಗೆಯನ್ನು ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಗ್ಲ್ಯಾಮರ್ ಬೈಕ್ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಇನ್ನು ಹೀರೋ ಮೋಟೊಕಾರ್ಪ್ ಹಬ್ಬದ ಸೀಸನ್‌ನಲ್ಲಿ 14 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಹಬ್ಬದ ಸೀಸನ್ 32 ದಿನಗಳ ಅವಧಿಯಲ್ಲಿ ಹೀರೋ ಕಂಪನಿಯು 14 ಲಕ್ಷ ಯುನಿಟ್ ಮಾರಾಟಗೊಳಿಸಿವೆ.

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಹೀರೋ ಬೈಕುಗಳು ಹಬ್ಬದ ಸೀಸನ್‌ನಲ್ಲಿ ಭರ್ಜರಿಯಾಗಿ ಮಾರಾಟವಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಹಬ್ಬದ ಸೀಸನ್‌ನಲ್ಲಿ ಭರ್ಜರಿಯಾಗಿ ಮಾರಾಟವಾಗಿ ಸ್ಟಾಕ್ ಗಳು ಡೀಲರುಗಳಲ್ಲಿ ನಾಲ್ಕು ವಾರಗಳಿಗಿಂತಲೂ ಕಡಿಮೆಯಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಹಬ್ಬದ ಸೀಸನ್‌ನಲ್ಲಿ ಮಾರಾಟವನ್ನು ಹೆಚ್ಚಿಸಲು ಬಿಎಸ್-6 ಗ್ಲ್ಯಾಮರ್ ಬೈಕಿನ ಬ್ಲೇಜ್ ಎಂಬ ಹೊಸ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.72,200 ಗಳಾಗಿದೆ.

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಹೊಸ ಹೀರೋ ಗ್ಲ್ಯಾಮರ್ ಬ್ಲೇಜ್ ಬೈಕ್ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲಾಗಿತ್ತು. ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ ಹೊಸ ‘ಮ್ಯಾಟರ್ ವರ್ನಿಯರ್ ಗ್ರೇ ಬಣ್ಣದಿಂದ ಕೂಡಿದೆ. ಹೊಸ ಬಣ್ಣವನ್ನು ಹೊರತುಪಡಿಸಿ ಗ್ಲ್ಯಾಮರ್ ಬ್ಲೇಜ್ ಎಡಿಷನ್ ಹ್ಯಾಂಡಲ್‌ಬಾರ್‌ನಲ್ಲಿ ಯುಎಸ್‌ಬಿ ಚಾರ್ಜರ್ ಮತ್ತು ‘ಫಂಕ್-ಲೈಮ್ ಬಣ್ಣದಲ್ಲಿ ಹೊಸ ಬಾಡಿ ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್<

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಮೇಲಿನ ನವೀಕರಣಗಳನ್ನು ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ. ಬಿಎಸ್-6 ಹೀರೋ ಗ್ಲ್ಯಾಮರ್ ಬ್ಲೇಜ್ ಸ್ಪೆಷಲ್ ಎಡಿಷನ್ ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಹೀರೋ ಗ್ಲ್ಯಾಮರ್ ಬೈಕ್

ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಹೀರೋ ಗ್ಲ್ಯಾಮರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನಿಂದ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ.

Article Published On: Friday, November 20, 2020, 14:36 [IST]
English summary
Hero Glamour Posts 91% Sales Growth In October 2020. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+