ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಹೋಂಡಾ ಕಂಪನಿಯು ತನ್ನ ಹೈನೆಸ್ ಸಿಬಿ 350 ರೆಟ್ರೊ ಕ್ರೂಸರ್ ಬೈಕ್ ಅನ್ನು ಕೆಲವು ದಿನಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕ್ ಅನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡಲು ಬಿಡುಗಡೆಗೊಳಿಸಲಾಗಿದೆ.

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಅಕ್ಟೋಬರ್‌ ತಿಂಗಳ ಹೋಂಡಾ ಹೈನೆಸ್ ಸಿಬಿ 350 ಬೈಕಿನ ಮಾರಾಟ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಹೊಸ ಹೋಂಡಾ ಹೈನೆಸ್ ಸಿಬಿ 350 ಬೈಕ್ ತನ್ನ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡಿದೆಯೇ, ಅಕ್ಟೋಬರ್ ತಿಂಗಳಿನಲ್ಲಿ ಎಷ್ಟು ಹೈನೆಸ್ ಸಿಬಿ 350 ಬೈಕುಗಳು ಮಾರಾಟವಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ ಅಂದರೆ ಅಕ್ಟೋಬರ್‌ ತಿಂಗಳಿನಲ್ಲಿ ಹೋಂಡಾ ಹೈನೆಸ್ ಸಿಬಿ 350 ಬೈಕಿನ ಒಟ್ಟು 1,290 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಹೈನೆಸ್ ಸಿಬಿ 350 ಹೆಚ್ಚು ಮಾರಾಟವಾದ ಹೋಂಡಾ ಕಂಪನಿಯ ಬೈಕ್ ಆಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಮಾರಾಟಕ್ಕೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಅಕ್ಟೋಬರ್‌ ತಿಂಗಳಿನಲ್ಲಿ ಕ್ಲಾಸಿಕ್ 350 ಬೈಕಿನ ಸುಮಾರು 42,000 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ಮೆಟಿಯೊರ್ 350 ಬೈಕ್‌ ಅನ್ನು ಬಿಡುಗಡೆಗೊಳಿಸಿದೆ. ಈ ರೆಟ್ರೊ ಕ್ರೂಸರ್ ಬೈಕ್ ಹೋಂಡಾ ಹೈನೆಸ್ ಸಿಬಿ 350 ಬೈಕಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಹೋಂಡಾ ಹೈನೆಸ್ ಸಿಬಿ 350 ಬೈಕಿನಲ್ಲಿ 350 ಸಿಸಿಯ 4-ಸ್ಟ್ರೋಕ್, ಒಎಚ್‌ಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5,500 ಆರ್‌ಪಿಎಂನಲ್ಲಿ 21 ಬಿಹೆಚ್‌ಪಿ ಪವರ್ ಹಾಗೂ 3,000 ಆರ್‌ಪಿಎಂನಲ್ಲಿ 30 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಈ ಬೈಕಿನಲ್ಲಿ ಬೈಕ್ ಅಸಿಸ್ಟ್ ಹಾಗೂ ಸ್ಲಿಪ್ಪರ್ ಕ್ಲಚ್ ಫೀಚರ್ ಗಳನ್ನು ನೀಡಲಾಗಿದೆ. ಸಸ್ಪೆಂಷನ್ ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಶಾಕ್ ಗಳನ್ನು ನೀಡಲಾಗಿದೆ. ಬ್ರೇಕಿಂಗ್ ಗಳಿಗಾಗಿ ಮುಂಭಾಗದಲ್ಲಿ 310 ಎಂಎಂ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿರುವ ಹೋಂಡಾ ಹೈನೆಸ್ ಸಿಬಿ 350 ಬೈಕ್ ಅನ್ನು ಹೋಂಡಾದ ಪ್ರೀಮಿಯಂ ಬಿಗ್ ವಿಂಗ್ ಡೀಲರ್ ಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ. ಸದ್ಯಕ್ಕೆ ಈ ಬೈಕ್ ಅನ್ನು ಸಾಮಾನ್ಯ ಹೋಂಡಾ ಡೀಲರ್ ಗಳ ಬಳಿ ಖರೀದಿಸಲು ಸಾಧ್ಯವಿಲ್ಲ.

ಮಾರಾಟದಲ್ಲಿ ಹಿಂದೆ ಬಿದ್ದ ಕ್ಲಾಸಿಕ್ 350 ಬೈಕಿನ ಪ್ರತಿಸ್ಪರ್ಧಿ ಬೈಕ್

ಹೋಂಡಾ ಹೈನೆಸ್ ಸಿಬಿ 350 ಬೈಕ್, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ಮೆಟಿಯೊರ್ 350 ಬೈಕ್ ಗಳೊಂದಿಗೆ ಮಾತ್ರವಲ್ಲದೇ ಜಾವಾ 42 ಹಾಗೂ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಗಳಿಗೂ ಪೈಪೋಟಿ ನೀಡುತ್ತದೆ. ಹೋಂಡಾ ಹೈನೆಸ್ ಸಿಬಿ 350 ಬೈಕ್ ಮಾರಾಟವು ಮುಂಬರುವ ದಿನಗಳಲ್ಲಿ ಏರಿಕೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Hness CB 350 bike records less sales than Classic 350 bike. Read in Kannada.
Story first published: Thursday, November 19, 2020, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X