ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಖರೀದಿ ಮೇಲೆ 'ಸೂಪರ್ 6' ಆಫರ್

ಕರೋನಾ ವೈರಸ್‌ನಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಹಬ್ಬದ ವಿಶೇಷತೆಗಾಗಿ ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಲಾಕ್‌ಡೌನ್‌ನಿಂದಾಗಿ ಏಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿ ಭಾರೀ ಪ್ರಮಾಣದ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ಇದೀಗ ಕಳೆದ ಎರಡು ತಿಂಗಳಿನಿಂದ ಹೊಸ ವಾಹನ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಅಕ್ಟೋಬರ್ ಅವಧಿಯಲ್ಲಿ ಮಾರಾಟದಲ್ಲಿ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿಟ್ಟುಕೊಂಡಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಹೋಂಡಾ ಮೋಟಾರ್‌ಸೈಕಲ್ ಕೂಡಾ ದಸರಾ ಮತ್ತು ದೀಪಾವಳಿ ವಿಶೇಷತೆ ಅಂಗವಾಗಿ ಗರಿಷ್ಠ ಆಫರ್ ನೀಡುತ್ತಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಹೋಂಡಾ ಕಂಪನಿಯು ಸಿಬಿ ಶೈನ್‌ನಿಂದ ಬೆಸ್ಟ್ ಸೆಲ್ಲಿಂಗ್ ಸ್ಕೂಟರ್ ಮಾದರಿಯಾದ ಆಕ್ಟಿವಾ 6ಜಿ ಮಾದರಿಯ ಮೇಲೂ ಆಫರ್ ಘೋಷಣೆ ಮಾಡಿದ್ದು, ಗ್ರಾಹಕರು ವಿವಿಧ ದ್ವಿಚಕ್ರ ವಾಹನಗಳ ಮಾದರಿಗಳ ಮೇಲೆ ಗರಿಷ್ಠ 11 ಸಾವಿರ ಉಳಿತಾಯ ಮಾಡಬಹುದಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಘೋಷಣೆ ಮಾಡಿರುವ ಸೂಪರ್ 6 ಆಫರ್‌ನಲ್ಲಿ ವಿವಿಧ ಆಫರ್‌ಗಳೊಂದಿಗೆ ರೂ.11 ಸಾವಿರದಷ್ಟು ಉಳಿತಾಯ ಮಾಡಬಹುದಾಗಿದ್ದು, ಜೊತೆಗೆ ನಿಗದಿಪಡಿಸಿದ ಕ್ರೆಡಿಕ್ ಕಾರ್ಡ್ ಬಳಕೆಯ ಮೇಲೂ ರೂ.5 ಸಾವಿರದಷ್ಟು ಕ್ಯಾಶ್‌ಬ್ಯಾಕ್ ಆಫರ್ ಸಹ ಗಿಟ್ಟಿಸಿಕೊಳ್ಳಬಹುದಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಹೊಸ ಆಫರ್ ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರಲಿದ್ದು, ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಹೊಸ ವಾಹನ ಖರೀದಿ ಪ್ರಕ್ರಿಯೆ ಹೆಚ್ಚಿರುವ ಹಿನ್ನಲೆಯಲ್ಲಿ ಹೋಂಡಾ ಕಂಪನಿಯು ವಿವಿಧ ಆಫರ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಹೊಸ ಆಫರ್‌ ಅಡಿಯಲ್ಲಿ ದ್ವಿಚಕ್ರ ವಾಹನಗಳ ಖರೀದಿ ಮೇಲೆ ಶೇ.100ರಷ್ಟು ಆನ್ ರೋಡ್ ಬೆಲೆಯ ಮೇಲೆ ಶೇ. 7.99 ಬಡ್ಡಿದರದಲ್ಲಿ ಸಾಲ ಸೌಲಭ್ಯ ಮತ್ತು ವಾಹನ ಖರೀದಿ ಮಾಡಿ ಮೂರು ತಿಂಗಳ ಅವಧಿಗೆ ಇಎಂಐ ಪಾವತಿಸಲು ವಿನಾಯ್ತಿ ಸಹ ನೀಡಲಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಹೊಸ ದ್ವಿಚಕ್ರ ವಾಹನ ಖರೀದಿ ನಂತರ ಮೊದಲ ಮೂರು ತಿಂಗಳು ಶೇ.50 ರಷ್ಟು ಇಎಂಐ ಮಾತ್ರ ಪಾವತಿ ಮಾಡಬಹುದಾದ ಅವಕಾಶವಿದ್ದು, ಹಣಕಾಸು ಅಡಚಣೆಯಿಂದ ಹೊಸ ವಾಹನ ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಈ ಆಫರ್ ಸಾಕಷ್ಟು ಸಹಕಾರಿಯಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಘೋಷಣೆ ಮಾಡಿರುವ ಕ್ಯಾಶ್‌ಬ್ಯಾಕ್ ಆಫರ್ ಪಡೆಯಲು ಗ್ರಾಹಕರು ಕಡ್ಡಾಯವಾಗಿ ಬ್ಯಾಂಕ್ ಆಫ್ ಬರೋಡಾ ಅಥವಾ ಫೆಡರಲ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್‌ಗಳನ್ನೇ ಬಳಕೆ ಮಾಡಬೇಕಿದ್ದು, ಆಕ್ಟಿವಾ 6ಜಿ, ಗ್ರಾಜಿಯಾ 125, ಸಿಡಿ 110 ಡಿಲಕ್ಸ್ ಮತ್ತು ಶೈನ್ ಬೈಕ್ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಪಡೆದುಕೊಳ್ಳಬಹುದಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ರೆಟ್ರೋ ಮಾದರಿಯ ಪ್ರೀಮಿಯಂ ಕ್ಲಾಸಿಕ್ ಬೈಕ್ ಆವೃತ್ತಿಯಾದ ಹೈನೆಸ್ ಸಿಬಿ 350 ಬಿಡುಗಡೆ ಮಾಡಿದ್ದು, ಹೊಸ ಬೈಕ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರವಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ದೀಪಾವಳಿ ಸಂಭ್ರಮಕ್ಕಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್

ಹೈನೆಸ್ ಸಿಬಿ 350 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.90 ಲಕ್ಷ ಬೆಲೆ ಹೊಂದಿದ್ದು, ಹೈನೆಸ್ ಸಿಬಿ 350 ಮಾದರಿಯು ಏರ್ ಕೂಲ್ಡ್ 350ಸಿಸಿ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಸ್ಲಿಪ್ ಅಸಿಸ್ಟ್ ಕ್ಲಚ್ ವೈಶಿಷ್ಟ್ಯತೆ ಹೊಂದಿದೆ.

More from DriveSpark

Article Published On: Wednesday, October 14, 2020, 19:49 [IST]
English summary
Honda Announces ‘Super 6’ Offers Ahead Of Festive Season. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+