ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಹೋಂಡಾ ಮೋಟಾರ್‍‍ಸೈಕಲ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾ ಹೊಸ ತಲೆಮಾರಿನ ಆಕ್ಟಿವಾ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಆಕ್ಟಿವಾ ಸ್ಕೂಟರಿನ 5ಜಿ ಮಾದರಿಯು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಹೊಸ ತಲೆಮಾರಿನ ಸ್ಕೂಟರ್ 6ಜಿ ಆಗಿರಲಿದ್ದು, ಭಾರತದಲ್ಲಿ ಜನವರಿ 15ರಿಂದ ಮಾರಾಟ ಮಾಡಲಾಗುವುದು. ಬಿಡುಗಡೆಯ ಹಿನ್ನೆಲೆಯಲ್ಲಿ ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿರುವ ಸ್ಪೇಸಿಫಿಕೇಶನ್‍‍ಗಳ ಬಗ್ಗೆ ಇಂಡಿಯನ್‍ಆಟೋ‍‍ಬ್ಲಾಗ್ ದಾಖಲೆಯೊಂದನ್ನು ಬಹಿರಂಗಪಡಿಸಿದೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಈ ದಾಖಲೆಯಲ್ಲಿ ಹೊಸ ಸ್ಕೂಟರಿನ ಗಾತ್ರ ಹಾಗೂ ಅದರಲ್ಲಿರುವ ಫೀಚರ್‍‍ಗಳ ಬಗೆಗಿನ ಮಾಹಿತಿಯನ್ನು ಕಾಣಬಹುದು. ಈ ದಾಖಲೆಯ ಪ್ರಕಾರ ಹೊಸ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109.51 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗುವುದು.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಈ ಎಂಜಿನ್ 8,000 ಆರ್‍‍ಪಿ‍ಎಂನಲ್ಲಿ 7.6 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿರುವ ಆಕ್ಟಿವಾ 5 ಜಿ ಸ್ಕೂಟರ್ 8 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹೊಸ ಸ್ಕೂಟರ್ ಹೋಂಡಾ ಕಂಪನಿಯ ಹೆಚ್‍ಇ‍ಟಿ ಅಂದರೆ ಹೋಂಡಾ ಇಕೋ ಟೆಕ್ನಾಲಜಿಯ ಜೊತೆಗೆ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಹೊಂದಿರಲಿದೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಬಿ‍ಎಸ್ 6 ಎಂಜಿನ್ ಹೊಂದಿರುವ ಕಾರಣಕ್ಕೆ ಹೋಂಡಾ ಈ ಸ್ಕೂಟರಿನಲ್ಲಿ ಇ‍ಎಸ್‍‍ಪಿ - ಎನ್‍‍ಹ್ಯಾನ್ಸ್ಡ್ ಸ್ಮಾರ್ಟ್ ಪವರ್ - ಟೆಕ್ನಾಲಜಿ ಹಾಗೂ ಸೈಲೆಂಟ್ ಸ್ಟಾರ್ಟ್ ಸಿಸ್ಟಂಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಈ ಫೀಚರ್‍‍ಗಳನ್ನು ಮೊದಲ ಬಾರಿಗೆ ಬಿ‍ಎಸ್ 6 ಎಂಜಿನ್‍‍ನ ಹೋಂಡಾ ಆಕ್ಟಿವಾ 125 ಸ್ಕೂಟರಿನಲ್ಲಿ ಅಳವಡಿಸಲಾಗಿತ್ತು.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಆಕ್ಟಿವಾ 5ಜಿ ಸ್ಕೂಟರಿಗಿಂತ ಹೆಚ್ಚಿನ ಗಾತ್ರ ಹಾಗೂ ವ್ಹೀಲ್‍‍ಬೇಸ್ ಹೊಂದಿರಲಿದೆ. ಈ ದಾಖಲೆಯ ಪ್ರಕಾರ ಆಕ್ಟಿವಾ 6ಜಿ 1833 ಎಂಎಂ ಉದ್ದ, 697 ಎಂಎಂ ಅಗಲ, 1156 ಎಂಎಂ ಎತ್ತರ ಹಾಗೂ 1260 ಎಂಎಂ ವ್ಹೀಲ್‍‍ಬೇಸ್ ಹೊಂದಿರಲಿದೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಇದರಿಂದಾಗಿ ಆಕ್ಟಿವಾ 5ಜಿ ಸ್ಕೂಟರಿಗಿಂತ 72 ಎಂಎಂ ಹೆಚ್ಚು ಉದ್ದ, 13 ಎಂಎಂ ಹೆಚ್ಚು ಅಗಲ ಹಾಗೂ 2 ಎಂಎಂ ಕಡಿಮೆ ಎತ್ತರವನ್ನು ಹೊಂದಿರಲಿದೆ. ಆಕ್ಟಿವಾ 6ಜಿ ಸ್ಕೂಟರ್, 5 ಜಿ ಸ್ಕೂಟರಿಗಿಂತ 22 ಎಂಎಂ ಹೆಚ್ಚು ವ್ಹೀಲ್‍‍ಬೇಸ್ ಹೊಂದಿರಲಿದೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ 5ಜಿ ಸ್ಕೂಟರಿಗಿಂತ ಹೆಚ್ಚಿನ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿರಲಿದೆ. ಇವುಗಳಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲ್‍ಇ‍‍ಡಿ ಲೈಟಿಂಗ್, ಪಾಸ್ ಲೈಟ್ ಬಟನ್, ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಟರ್ ಕ್ಯಾಪ್ ಸೇರಿದಂತೆ ಹಲವು ಫೀಚರ್‍‍ಗಳಿರಲಿವೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಹೋಂಡಾ ಕಂಪನಿಯು ಹೊಸ ಸ್ಕೂಟರ್‍‍ನಲ್ಲಿರುವ ಫೀಚರ್‍‍ಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈಗ ಮಾರಾಟ ಮಾಡಲಾಗುತ್ತಿರುವ ಆಕ್ಟಿವಾ 5ಜಿ ಸ್ಕೂಟರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.57,094ಗಳಾಗಿದೆ. ಹೊಸ ಆಕ್ಟಿವಾ 6ಜಿ ಸ್ಕೂಟರಿನ ಬೆಲೆಯು ಈ ಸ್ಕೂಟರಿನ ಬೆಲೆಗಿಂತ ಹೆಚ್ಚಾಗಿರಲಿದ್ದು ಭಾರತದ ಎಕ್ಸ್ ಶೋರೂಂ ದರದಂತೆ ರೂ.60,000ಗಳಾಗುವ ಸಾಧ್ಯತೆಗಳಿವೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಆಕ್ಟಿವಾ ಸ್ಕೂಟರ್ ಭಾರತದ ದ್ವಿ ಚಕ್ರ ವಾಹನಗಳ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರ್ ಸುಮಾರು ಒಂದು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿದೆ.

ಹೀಗಿರಲಿದೆ ನೋಡಿ ಹೋಂಡಾ ಆಕ್ಟಿವಾ 6ಜಿ ಸ್ಪೇಸಿಫಿಕೇಶನ್

ಈ ಸ್ಕೂಟರ್ ಅನ್ನು ಹಲವಾರು ಬಾರಿ ಅಪ್‍‍ಡೇಟ್‍‍ಗೊಳಿಸಲಾಗಿದೆ. ಆಕ್ಟಿವಾ 6 ಜಿ ಸ್ಕೂಟರ್ ಬಿಡುಗಡೆಯಾದ ನಂತರ ಟಿವಿ‍ಎಸ್ ಜೂಪಿಟರ್ ಹಾಗೂ ಹೀರೋ ಪ್ಲೆಷರ್ 110 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Saturday, January 4, 2020, 15:00 [IST]
English summary
Honda Activa 6G Specs Leaked Ahead Of Launch: Here Are All The Details! - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+