ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ ಅನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಹಿಂದಿನ ಮಾದರಿಗಿಂತ ಹೆಚ್ಚು ಪವರ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ 1048ಸಿಸಿ ಎಂಜಿನ್ 109 ಬಿ‍‍ಹೆಚ್‍‍ಪಿ ಪವರ್ ಮತ್ತು 105 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯ ಎಂಜಿನ್‍‍ಗಿಂತ 2.5 ಕಿ.ಗ್ರಾಂ ಹೆಚ್ಚು ತೂಕವನ್ನುಹೊಂದಿರಲಿದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಡಿಸಿ‍ಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ 999.11ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 102 ಬಿ‍‍ಹೆಚ್‍ಪಿ ಪವರ್ ಮತ್ತು 93 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.13.5 ಲಕ್ಷಗಳಾಗಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.15.5 ಲಕ್ಷಗಳಾಗಿರಬಹುದು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅನವಾರಣಗೊಂಡ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್‍‍ಗಿಂತ ಹೆಚ್ಚು ಬದಲಾವಣೆ ಮಾಡಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಪ್ರಸ್ತುತ ಮಾದರಿಗಿಂತ ಹೆಚ್ಚು 2020ರ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಹೆಚ್ಚು ಪವರ್ ಫುಲ್ ಬೈಕ್ ಆಗಿದೆ. ಹೊಸ 2020ರ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಮುಂಭಾಗದಲ್ಲಿ ಶೋವಾ 45 ಎಂಎಂ ಕಾರ್ಟ್ರಿಡ್ಜ್ ಮಾದರಿಯ ಇನ್ವರ್ಡಡ್ ಟಿಲಿಸ್ಕೋಪಿಕ್ ಫೋರ್ಕ್‍‍ಗಳು ಮತ್ತು ಪ್ರೊ-ಲಿಂಕ್‍‍ನೊಂದಿಗೆ ಮೊನೊಬ್ಲಾಕ್ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಹಿಂಭಾಗದಲ್ಲಿ ಶೋವಾ ಗ್ಯಾಸ್-ಚಾರ್ಜ್ಡ್ ಡ್ಯಾಂಪರ್ ಅನ್ನು ಒಳಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ ಫ್ರೆಮ್ ನವೀಕರಿಸಲಾಗಿದೆ. ಆಫ್ರಿಕಾ ಟ್ವಿನ್ ಕಾರ್ನರಿಂಗ್ ಎಬಿ‍ಎಸ್, ರೇರ್ ಲಿಫ್ಟ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ರೇರ್ ಲಿಫ್ಟ್ ಕಂಟ್ರೋಲ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಇದಲ್ಲದೆ ಅಡ್ವೆಂಚರ್ ಸ್ಪೋರ್ಟ್ ಇಎಸ್ ಮಾದರಿಯು ಎಲೆಕ್ಟ್ರಾನಿಕ್ ಸಸ್ಪೆಂಷನ್ ಅನ್ನು ಹೊಂದಿದೆ. ಹೊಸ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಪ್ರಮುಖ ಫೀಚರ್ಸ್ ಅಂದರೆ ಹೊಸ 6.5 ಇಂಚಿನ ಟಿ‍ಎಫ್‍‍ಟಿ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇ ಅನ್ನು ಹೊಂದಿದ್ದು, ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೇ ಅನ್ನು ಅಳವಡಿಸಲಾಗಿದೆ. ಹೊಸ ಬೈಕ್ ಆರು ಎಕ್ಸಸ್ ಐಎಂಯು ಮತ್ತು ಬ್ಲೂಟತ್ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಹೈಡ್ರಾಲಿಕ್ ಡಿಸ್ಕ್ ಗಳು ಮತ್ತು ಹಿಂಭಾಗದಲ್ಲಿ 256 ಎಂಎಂ ಹೈಡ್ರಾಲಿಕ್ ಡಿಸ್ಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಆನ್ ರೋಡ್ ಮತ್ತು ಆಫ್-ರೋಡ್ ಗಳಲ್ಲಿ ಎಬಿಎಸ್ ಮೋಡ್ ಅನ್ನು ಸಹ ಒಳಗೊಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್‍ಎಫ್ 1100ಎಲ್ ಬೈಕ್ ಅನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್ ಹಚ್ಚು ಪವರ್‍ ಅನ್ನು ಹೊಂದಿರುವುದರಿಂದ ಹೆಚ್ಚು ಯುವಜನತೆಯನ್ನು ಸೆಳೆಯಬಹುದು.

Article Published On: Saturday, January 11, 2020, 19:46 [IST]
English summary
Honda Africa Twin CRF 1100L Launch Confirmed For April: Details And Expected Price. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+