ಎವಿಯೆಟರ್ ಬದಲಾಗಿ ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ದೇಶ್ಯಾದ್ಯಂತ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ತರಲಾಗಿದ್ದು, ಹೊಸ ನಿಯಮ ಪಾಲನೆ ಮಾಡಲು ಸಾಧ್ಯವಿಲ್ಲದ ಹಲವಾರು ವಾಹನ ಮಾದರಿಗಳನ್ನು ಮಾರಾಟದಿಂದ ಸ್ಥಗಿತಗೊಳಿಸಲಾಗಿದೆ.

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಬಿಎಸ್-4 ವಾಹನಗಳ ಮಾರಾಟವನ್ನು ಏಪ್ರಿಲ್ 1ರಿಂದಲೇ ನಿಷೇಧಗೊಳಿಸಿರುವ ಸುಪ್ರೀಂಕೋರ್ಟ್, ಬಿಎಸ್-6 ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಕಡ್ಡಾಯಗೊಳಿಸಿದೆ. ಹೊಸ ನಿಯಮದಂತೆ ಹೋಂಡಾ ಸೇರಿದಂತೆ ಹಲವಾರು ಕಂಪನಿಗಳು ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಲು ಸಾಧ್ಯವಿಲ್ಲದ ಹಲವಾರು ಜನಪ್ರಿಯ ವಾಹನ ಮಾದರಿಗಳನ್ನು ಮಾರಾಟದಿಂದ ಕೈಬಿಟ್ಟಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿವೆ.

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಸಹ ಈಗಾಗಲೇ ತನ್ನ ಪ್ರಮುಖ ದ್ವಿಚಕ್ರ ವಾಹನಗಳನ್ನು ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಿ ಮಾರಾಟಕ್ಕೆ ಚಾಲನೆ ನೀಡಿದ್ದರೂ ಎವಿಯೆಟರ್ ಮತ್ತು ಗ್ರಾಜಿಯಾ ಸ್ಕೂಟರ್‌ಗಳಲ್ಲಿ ಹೊಸ ಎಂಜಿನ್ ಅನ್ನು ಇದುವರೆಗೂ ಪರಿಚಯಿಸಿಲ್ಲ.

MOST READ: ಅತಿ ಕಡಿಮೆ ಬೆಲೆಯ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಸದ್ಯಕ್ಕೆ ದೇಶಾದ್ಯಂತ ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಲಾಕ್ ಡೌನ್ ತೆರವುಗೊಳಿಸಿದ ನಂತರವಷ್ಟೇ ಎವಿಯೆಟರ್ ಮತ್ತು ಗ್ರಾಜಿಯಾ ಸ್ಕೂಟರ್ ಮಾರಾಟ ಮುಂದುವರಿಯುತ್ತಾ? ಇಲ್ಲವೇ ಸ್ಥಗಿತಗೊಳ್ಳಲಿವೆಯಾ ಎನ್ನುವ ಬಗ್ಗೆ ಸ್ಪಷ್ಟನೆ ದೊರೆಯಿದೆ. ಎಟಿಯೆಟರ್ ಮಾದರಿಯು 109 ಸಿಸಿ ಎಂಜಿನ್ ಹೊಂದಿದ್ದರೆ ಗ್ರಾಜಿಯಾ ಸ್ಕೂಟರ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ 124.9 ಸಿಸಿ ಎಂಜಿನ್ ಹೊಂದಿತ್ತು.

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಆದರೆ ಕೆಲವು ಸ್ಕೂಟರ್ ಮಾದರಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿರುವ ಹೋಂಡಾ ಕಂಪನಿಯು ಗ್ರಾಹಕರ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸಿರುವ ಸ್ಕೂಟರ್ಗಳನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಹೊಸ ಮಾದರಿಯ ಸ್ಕೂಟರ್‌ಗಳನ್ನು ಬಿಡುಗಡೆಗೆ ಮುಂದಾಗಿದೆ.

MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಇನ್ನು ಭಾರತದಲ್ಲಿ ಸದ್ಯಕ್ಕೆ ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮುಂದುವರಿಸಿರುವ ಕೇಂದ್ರ ಸರ್ಕಾರವು ಬಿಎಸ್-4 ವಾಹನಗಳ ಸ್ಟಾಕ್ ಮಾರಾಟಕ್ಕೆ ಕೆಲವು ಷರತ್ತುಬದ್ದ ಅವಕಾಶ ನೀಡುವ ಸೂಚನೆ ನೀಡಿದೆ.

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

2018ರಲ್ಲೇ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

MOST READ: ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು..

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಬಿಎಸ್-6 ಜಾರಿಗೂ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಲು ಮುಂದಾಗಿರುವ ಸುಪ್ರೀಂಕೋರ್ಟ್, ಮೇ ಅವಧಿಯಲ್ಲಿ ಇಂತಿಷ್ಟ ದಿನಗಳ ಕಾಲ ವಿನಾಯ್ತಿ ನೀಡಲಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಎವಿಯೆಟರ್ ಮಾರಾಟಕ್ಕೆ ಗುಡ್‌ಬೈ- ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳಲು ಮುಂದಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.

Article Published On: Wednesday, April 15, 2020, 21:03 [IST]
English summary
Honda Aviator To Be Replaced With New Premium 110cc Scooter In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+