ವೈರಸ್ ದಾಳಿಗೆ ತತ್ತರಿಸಿದ ಹೋಂಡಾ ಮೋಟರ್, ಉತ್ಪಾದನೆಯಲ್ಲಿ ಏರುಪೇರು
ಈಗ ಪ್ರಪಂಚದೆಲ್ಲೆಡೆ ವೈರಸ್‌ನದ್ದೇ ಮಾತು. ಕರೋನಾ ವೈರಸ್‌ನಿಂದಾಗಿ ಪ್ರಪಂಚದ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಆದರೆ ಸೈಬರ್ ವೈರಸ್‌ನಿಂದಾಗಿ ವಾಹನ ತಯಾರಕ ಕಂಪನಿಯೊಂದರ ಉತ್ಪಾದನೆಯಲ್ಲಿ ಏರುಪೇರಾಗಿದೆ.

ಕೆಲವು ವಾರಗಳ ಹಿಂದೆ ಜಪಾನ್ ಮೂಲದ ಹೋಂಡಾ ಮೋಟಾರ್ ಕಂಪನಿಯ ಮೇಲೆ ಸೈಬರ್ ದಾಳಿ ನಡೆಸಲಾಗಿತ್ತು. ಕಂಪನಿಯು ವೈರಸ್ ಸಮಸ್ಯೆಯಿಂದ ಬಳಲುತ್ತಿದೆ ಎಂದು ಕಂಪನಿಯು ಮಾಹಿತಿ ನೀಡಿತ್ತು. ಮೂಲಗಳ ಪ್ರಕಾರ, ಈ ಸೈಬರ್ ದಾಳಿಯು ಹೋಂಡಾದ 11 ಉತ್ಪಾದನಾ ಘಟಕಗಳ ಮೇಲೆ ಪರಿಣಾಮ ಬೀರಿದೆ.

ಈ ಎಲ್ಲಾ ಉತ್ಪಾದನಾ ಘಟಕಗಳು ವಿಶ್ವದ ವಿವಿಧ ದೇಶಗಳಲ್ಲಿವೆ. ಇದರ ಜೊತೆಗೆ ಅಮೆರಿಕಾದಲ್ಲಿರುವ ಐದು ಉತ್ಪಾದನಾ ಘಟಕಗಳ ಮೇಲೂ ಪರಿಣಾಮ ಬೀರಿದೆ. ಹೋಂಡಾದ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಉತ್ಪಾದನಾ ಘಟಕಗಳು ಜಾಗತಿಕ ನೆಟ್‌ವರ್ಕ್ ನಿಲುಗಡೆಯಿಂದ ತತ್ತರಿಸಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಸೈಬರ್ ದಾಳಿಯು ನಮ್ಮ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡಿಲ್ಲ ಎಂದು ಹೋಂಡಾ ಕಾರ್ಸ್ ಇಂಡಿಯಾ ಹೇಳಿದೆ. ಆದರೆ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ಸೈಬರ್ ದಾಳಿಯಿಂದಾಗಿ ತಮ್ಮ ಉತ್ಪಾದನಾ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಮರು ಹೊಂದಾಣಿಕೆ ಮಾಡಬೇಕಾಯಿತು ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವಕ್ತಾರರು, ಪ್ರಪಂಚದದ್ಯಾಂತವಿರುವ ಹೋಂಡಾ ಕಂಪನಿಯ ಉತ್ಪಾದನಾ ಘಟಕಗಳುತೊಂದರೆಗೀಡಾಗಿವೆ. ಈ ಸಮಸ್ಯೆಗೆ ಕಾರಣಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಲಾಕ್‌ಡೌನ್ ವಿನಾಯಿತಿಯ ನಂತರಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತದ ನಾಲ್ಕು ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಪುನರಾರಂಭಿಸಿದೆ.

ಇದರ ಜೊತೆಗೆ ಕಂಪನಿಯ 308 ಡೀಲರ್‌ಗಳೂ ಸಹ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದಾರೆ. ಹೋಂಡಾ ಕಂಪನಿಯು ಉತ್ಪಾದನೆಯನ್ನು ಹಂತಹಂತವಾಗಿ ಪುನರಾರಂಭಿಸಿದೆ. ಆದರೆ ಸೈಬರ್ ದಾಳಿಯಿಂದಾಗಿ ಉತ್ಪಾದನಾ ವೇಳಾಪಟ್ಟಿಯನ್ನು ಮರು ಹೊಂದಿಸಲಾಗಿದೆ. ಹೋಂಡಾ ಕಂಪನಿಯು ತನ್ನ ಮಾರಾಟ ಹಾಗೂ ಸೇವೆಯನ್ನು 70%ನಷ್ಟು ಪುನರಾರಂಭಿಸಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಹೋಂಡಾ ಕಾರ್ಸ್ ಇಂಡಿಯಾದ ಪ್ರಕಾರ, ಅದರ ಸರ್ವರ್‌ಗಳ ಮೇಲಿನ ಸೈಬರ್ ದಾಳಿಯಿಂದ ಕಂಪನಿಯ ಉತ್ಪಾದನೆಯಲ್ಲಿಯಾವುದೇ ಸಮಸ್ಯೆಯಾಗಿಲ್ಲ. ಕಂಪನಿಯು ತನ್ನ ಉತ್ಪಾದನಾ ಘಟಕಗಳನ್ನು ಕಾರ್ಯಾಚರಣೆಗಾಗಿ ಸಿದ್ಧಪಡಿಸುತ್ತಿದ್ದು, ಯಾವುದೇ ಪರಿಣಾಮವನ್ನು ಎದುರಿಸಿಲ್ಲ.


Click it and Unblock the Notifications