ಹೋಂಡಾ ವೆಬ್‌ಸೈಟ್‌ನಿಂದ ಮರೆಯಾಯ್ತು ಸಿಬಿ300ಆರ್ ಬೈಕಿನ ಹೆಸರು
ಹೋಂಡಾ ಕಂಪನಿಯು ಎಂಟ್ರಿ ಲೆವೆಲ್ ಪ್ರೀಮಿಯಂ ಸಿಬಿ300ಆರ್ ಬೈಕಿನ ಹೆಸರನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಸಿಬಿ300ಆರ್ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ನಿಯೊ-ರೆಟ್ರೊ ಸ್ಟ್ರೀಟ್‌ಫೈಟರ್ ಬೈಕ್ ಆಗಿದೆ.

ಸಿಬಿ300ಆರ್ ಹಿಂದಿನ ಮಾದರಿಯನ್ನು ಸಿಕೆಡಿ ಮೂಲಕ ಭಾರತಕ್ಕೆ ತರಲಾಗಿತ್ತು. ಇದರಿಂದಾಗಿ ಸಿಬಿ300ಆರ್ ಬೈಕಿನ ಪ್ರತಿಸ್ಪರ್ಧಿ ಮಾದರಿಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ. ಈ ಹೋಂಡಾ ಸಿಬಿ300ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಎರಡೇ ತಿಂಗಳುಗಳಲ್ಲಿ ಇದರ 500 ಯುನಿಟ್ ಗಳು ಮಾರಾಟವಾಗಿತ್ತು. ಆದರೆ ಇಲ್ಲಿಯವರೆಗೆ ಈ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ.

ಅಲ್ಲದೇ ಇದೀಗ ಈ ಸಿಬಿ300ಆರ್ ಬೈಕಿನ ಹೆಸರನ್ನು ವೆಬ್‌ಸೈಟ್ ನಿಂದ ತೆಗೆದುಹಾಕಲಾಗಿದೆ. ಆದರೆ ಕಂಪನಿಯು ಶೀಘ್ರದಲ್ಲೇ ಈ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಬಹುದು.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಪ್ರಸ್ತುತ ತಲೆಮಾರಿನ ಸಿಬಿ300ಆರ್ ಬೈಕಿನಲ್ಲಿ ಆಧುನಿಕ ಎಲ್‌ಇಡಿ ತಂತ್ರಜ್ಞಾನದೊಂದಿಗೆ ವೈವಿಧ್ಯಮಯ ಜೆಡ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಸಿಬಿ300ಆರ್ ಬೈಕ್ ಸಿಂಗಲ್-ಸಿಲಿಂಡರ್, 286 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 31.4 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೋಂಡಾ ಕಂಪನಿಯು ಸಿಬಿ300ಆರ್ ಬೈಕನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ಯೋಜನೆ ರೂಪಿಸಬಹುದು. ಸ್ಥಳೀಯವಾಗಿ ಈ ಬೈಕನ್ನು ಅಭಿವೃದ್ದಿಪಡಿಸಿದರೆ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದು.

ಈ ಸಿಬಿ300ಆರ್ ಬೈಕನ್ನು ಶೀಘ್ರದಲ್ಲೇ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಹೋಂಡಾ ಸಿಬಿ300ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಮೊಜೊ, ಬಿಎಂಡಬ್ಲ್ಯು ಜಿ 310 ಆರ್ ಮತ್ತು ಟಿವಿಎಸ್ ಅಪಾಚೆ 310 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications