Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನೆಕ್ಟಿವಿಟಿ ಫೀಚರ್ ಹೊಂದಲಿವೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ಹೊಸ ವಾಹನಗಳು
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ವಾಹನಗಳಲ್ಲಿ ಹೊಸ ಫೀಚರ್ ಗಳನ್ನು ಅಳವಡಿಸಲು ಮುಂದಾಗಿದೆ. ದ್ವಿಚಕ್ರ ವಾಹನಗಳ ಚಾಲನಾ ಅನುಭವವನ್ನು ಇನ್ನಷ್ಟು ಸುಧಾರಿಸಲು, ಕಂಪನಿಯು ತನ್ನ ವಾಹನಗಳಲ್ಲಿ ಕನೆಕ್ಟಿವಿಟಿ ಫೀಚರ್ ಅನ್ನು ನೀಡಲು ಮುಂದಾಗಿದೆ.

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಸ್ಕೂಟರ್ ಹಾಗೂ ಬೈಕ್ ಗಳಲ್ಲಿ ಕಂಪನಿಯ ಮೊಬೈಲ್ ಅಪ್ಲಿಕೇಶನ್ ಆಧಾರಿತ ಕನೆಕ್ಟೆಡ್ ಫೀಚರ್ ಅನ್ನು ನೀಡಲಿದೆ. ಕಂಪನಿಯ ರೋಡ್‌ಸಿಂಕ್ ಕನೆಕ್ಟಿವಿಟಿ ಟೆಕ್ನಾಲಜಿಯು ಬ್ಲೂಟೂತ್ ಮೂಲಕ ಬೈಕ್ ಅನ್ನು ಚಾಲಕರ ಮೊಬೈಲ್ ಫೋನ್‌ನೊಂದಿಗೆ ಕನೆಕ್ಟ್ ಮಾಡಲಿದೆ. ರೋಡ್ ಸಿಂಕ್ ಸಹಾಯದಿಂದ ಮೆಸೇಜಿಂಗ್, ನ್ಯಾವಿಗೇಷನ್, ಫೋನ್ಕಾಲ್ ಹಾಗೂ ಮ್ಯೂಸಿಕ್ ನಂತಹ ಫೀಚರ್ ಗಳನ್ನು ಕಂಟ್ರೋಲ್ ಮಾಡಬಹುದು.

ಇದರಲ್ಲಿ ವಾಯ್ಸ್ ಆಧಾರಿತ ರೆಸ್ಪಾನ್ಸ್ ಅನ್ನು ಸಹ ಸೇರಿಸಲಾಗಿದೆ. ರೋಡ್ ಸಿಂಕ್ ಫೀಚರ್ ಅನ್ನು ಸಿಬಿಆರ್ 1000 ಆರ್, ಹೋಂಡಾ ಫೋರ್ಜಾ 750 ಹಾಗೂ ಎಕ್ಸ್-ಎಡಿವಿ 2021 ವಾಹನಗಳಲ್ಲಿ ನೀಡಲಾಗುವುದು. ಭಾರತದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ದ್ವಿಚಕ್ರ ವಾಹನಗಳಲ್ಲಿಯೂ ಈ ಫೀಚರ್ ಅನ್ನು ನೀಡಲಾಗುವುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರತಕ್ಕಾಗಿ ಕಂಪನಿಯು ಮ್ಯಾಕ್ಸಿ ಪಿಸಿಎಕ್ಸ್ 160 ಸ್ಕೂಟರ್ ಅನ್ನು ನೋಂದಾಯಿಸಿದೆ. ಭಾರತದಲ್ಲಿ ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರಿಗೆ ಪೈಪೋಟಿ ನೀಡಲು ಈ ಪರ್ಫಾರ್ಮೆನ್ಸ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಹೋಂಡಾ ಪಿಸಿಎಕ್ಸ್ 160 ಸ್ಕೂಟರಿನಲ್ಲಿ 156 ಸಿಸಿಯ 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 16.31 ಬಿಹೆಚ್‌ಪಿ ಪವರ್ ಹಾಗೂ 15 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರಿನಲ್ಲಿ ಟಾರ್ಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಸಿಂಗಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಸ್ಕೂಟರ್ ಬೈಕ್‌ನಲ್ಲಿರುವಂತೆ ಡ್ಯುಯಲ್ ರೇರ್ ಶಾಕರ್ ಹೊಂದಿದೆ. ಮುಂಭಾಗದಲ್ಲಿ ಡ್ಯುಯಲ್ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆಂಷನ್ ನೀಡಲಾಗಿದೆ. ಈ ಮ್ಯಾಕ್ಸಿ ಸ್ಕೂಟರ್ 14/13 ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ.

ಬ್ರೇಕಿಂಗ್'ಗಾಗಿ ಸ್ಕೂಟರ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒದಗಿಸಲಾಗಿದೆ. ಸ್ಕೂಟರಿನ ವಿನ್ಯಾಸವನ್ನು ಹೆಚ್ಚು ಅಪ್'ಡೇಟ್ ಮಾಡಲಾಗಿದೆ. ನಯವಾಗಿ ಹಾಗೂ ಶಾರ್ಪ್ ಆಗಿರುವ ಈ ಸ್ಕೂಟರಿನ ವಿನ್ಯಾಸವು ಅಗ್ರೇಸಿವ್ ಆಗಿ ಕಾಣುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಸ್ಕೂಟರ್ ಎಲ್ಇಡಿ ಹೆಡ್'ಲೈಟ್, ಎಲ್ಇಡಿ ಇಂಡಿಕೇಟರ್, ಎಲ್ಇಡಿ ಟೇಲ್ ಲೈಟ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಕೀ ಲೆಸ್ ಇಗ್ನಿಷನ್, ಮೊಬೈಲ್ ಚಾರ್ಜಿಂಗ್'ಗಾಗಿ ಯುಎಸ್'ಬಿ ಟೈಪ್ ಸಿ ಪೋರ್ಟ್ ಗಳನ್ನು ಹೊಂದಿದೆ.

ಈ ಸ್ಕೂಟರಿನಲ್ಲಿ ಗಾತ್ರಕ್ಕೆ ಅನುಗುಣವಾಗಿ 30 ಲೀಟರಿನ ಅಂಡರ್ ಸೀಟ್ ಸ್ಟೋರೇಜ್ ನೀಡಲಾಗಿದೆ. ಈ ಸ್ಕೂಟರ್ 8 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಹೋಂಡಾ ಕಂಪನಿಯು ಈ ಸ್ಕೂಟರ್ ಅನ್ನು ಜಪಾನ್ ಮಾರುಕಟ್ಟೆಯಲ್ಲಿ 2021ರ ಜನವರಿಯಲ್ಲಿ ಬಿಡುಗಡೆಗೊಳಿಸಲಿದೆ.