ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ವಿಷನ್ 110 ಸ್ಕೂಟರ್ ಅನ್ನು ಅಪ್​ಡೇಟ್ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಅಪ್​ಡೇಟ್ ಮೂಲಕ ಸ್ಕೂಟರಿನಲ್ಲಿ ಹಲವಾರು ಹೊಸ ಫೀಚರ್'ಗಳನ್ನು ಅಳವಡಿಸಲಾಗಿದೆ.

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಹೊಸ ಸ್ಕೂಟರಿನಲ್ಲಿ ಮೆಕಾನಿಕಲ್ ಹಾಗೂ ಟೆಕ್ನಿಕಲ್ ಫೀಚರ್ ಗಳನ್ನು ಅಪ್​ಡೇಟ್ ಮಾಡಲಾಗಿದೆ. ಇದರ ಜೊತೆಗೆ ಹೊಸ ಲುಕ್ ನೀಡುವ ಸಲುವಾಗಿ ಹೊಸ ಫ್ರೇಮ್‌ಗಳನ್ನು ಸೇರಿಸಲಾಗಿದೆ. ವಿಷನ್ 110 ಸ್ಕೂಟರ್ ಲಘು ಕ್ಲಾಸಿಕ್ ಶೈಲಿಯನ್ನು ಹೊಂದಿದ್ದು, ಆಧುನಿಕ ಯುಗದ ಸ್ಕೂಟರಿನಂತೆ ಕಾಣುತ್ತದೆ.

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ವಿಷನ್ 110 ಸ್ಕೂಟರ್‌ನಲ್ಲಿ ಹೊಸ ಸ್ಮಾರ್ಟ್ ಕೀ ಫೀಚರ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್ ಕೀ ಮೂಲಕ ಸ್ಕೂಟರ್ ಅನ್ನು ಸುಲಭವಾಗಿ ಆನ್ ಮಾಡಬಹುದು ಹಾಗೂ ಆಫ್ ಮಾಡಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಇದರ ಜೊತೆಗೆ ಹೊಸ ಎಲ್ ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಫೀಚರ್ ಅನ್ನು ಸಹ ಅಳವಡಿಸಲಾಗಿದೆ. ಈ ಫೀಚರ್ ಗಳ ಸೇರ್ಪಡೆಗಳೊಂದಿಗೆ ವಿಷನ್ 110 ಸ್ಕೂಟರ್ ರಿಫ್ರೆಶ್ ಶೈಲಿ ಹಾಗೂ ಲುಕ್ ಅನ್ನು ಪಡೆದುಕೊಂಡಿದೆ.

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ವಿಷನ್ 110 ಹೋಂಡಾ ಕಂಪನಿಯ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿರುವುದರಿಂದ ಈ ಸ್ಕೂಟರಿನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಹೆಚ್ಚುವರಿ ಆಕರ್ಷಕ ಫೀಚರ್'ಗಳನ್ನು ತನ್ನ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಹೋಂಡಾ ಕಂಪನಿಯು ಮೇಲೆ ತಿಳಿಸಲಾದ ಅಪ್​ಡೇಟ್ ಗಳನ್ನು ಮಾಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಸ್ಕೂಟರಿನಲ್ಲಿ ಯುರೋ 5 ಎಮಿಷನ್ ಸ್ಟ್ಯಾಂಡರ್ಡ್ ಎಂಜಿನ್ ಅಳವಡಿಸಲಾಗಿದೆ. ಇದು ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಆಗಿದ್ದು, 110 ಸಿಸಿ ಸಾಮರ್ಥ್ಯವನ್ನು ಹೊಂದಿದೆ.

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಎಂಜಿನ್ 7500 ಆರ್‌ಪಿಎಂನಲ್ಲಿ 8.6 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಹೊಸ ಅಪ್‌ಗ್ರೇಡ್‌ನೊಂದಿಗೆ 2021ರ ವಿಷನ್ 110 ಮಾದರಿಯು ಹಳೆಯ ಮಾದರಿಯ ವಿಷನ್ 110ಗಿಂತ ಐದು ಪಟ್ಟು ಕಡಿಮೆ ಇಂಧನವನ್ನು ಬಳಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಸ್ಕೂಟರ್ ಹೆಚ್ಚಿನ ಇಂಧನ ಆರ್ಥಿಕತೆಯನ್ನು ನೀಡುವುದರ ಮೂಲಕ ಸಾಕಷ್ಟು ಹಣವನ್ನು ಉಳಿಸುತ್ತದೆ. ಯುರೋಪಿಯನ್ ಮಾರುಕಟ್ಟೆಯ ಈ ಸ್ಕೂಟರ್ ಅನ್ನು ಶೀಘ್ರದಲ್ಲೇ ಯೂರೋಪಿಯನ್ ದೇಶಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಈ ಸ್ಕೂಟರಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದರೂ ವಿಷನ್ 110 ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಅಗ್ಗದ ಸ್ಕೂಟರ್‌ಗಳಲ್ಲಿ ಒಂದಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ದವಾಗಿರುವ ವಿಷನ್ 110 ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಹೊಸ ವಿಷನ್ 110 ಸ್ಕೂಟರ್ ಅನಾವರಣಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಭಾರತದಲ್ಲಿ ಆಕ್ಟಿವಾ 6 ಜಿ ಹಾಗೂ ಡಿಯೊ ಸೇರಿದಂತೆ ಹಲವು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸ್ಮಾರ್ಟ್ ಕೀ ಫೀಚರ್ ಅನ್ನು ಈ ಸ್ಕೂಟರ್‌ಗಳಲ್ಲಿ ಮುಂಬರುವ ದಿನಗಳಲ್ಲಿ ಅಳವಡಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Honda company unveils new Vision 110 scooter. Read in Kannada.
Story first published: Tuesday, December 15, 2020, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X