ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ಈಗಾಗಲೇ ತನ್ನ ಸ್ಕೂಟರ್ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಇದೀಗ ಪರ್ಫಾಮೆನ್ಸ್ ಪ್ರಿಯರ ಡಿಯೋ ಆವೃತ್ತಿಯನ್ನು ಸಹ ಹೊಸ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ನಮ್ಮ ಬೆಂಗಳೂರಿನಲ್ಲಿ ಹೊಸ ಡಿಯೋ ಬಿಡುಗಡೆಗೊಳಿಸುವ ಮೂಲಕ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿರುವ ಹೋಂಡಾ ಸಂಸ್ಥೆಯು ಮೊದಲ ದಿನವೇ ಬೆಂಗಳೂರಿನಲ್ಲಿ 300 ಸ್ಕೂಟರ್‌ಗಳನ್ನು ವಿತರಣೆ ಮಾಡಿದ್ದು, ಹೊಸ ಸ್ಕೂಟರ್ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ.64,584 ಆರಂಭಿಕ ಬೆಲೆ ಪಡೆದುಕೊಂಡಿದೆ. ಹಳೆಯ ಆವೃತ್ತಿಗಿಂತಲೂ ಹೊಸ ಡಿಯೋ ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, 110 ಸಿಸಿ ವಿಭಾಗದ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

2002ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಡಿಯೋ ಸ್ಕೂಟರ್‍ ಮಾದರಿಯು ಇದುವರೆಗೆ 33 ಲಕ್ಷ ಗ್ರಾಹಕರನ್ನು ಹೊಂದಿದ್ದು, ಭಾರತದಿಂದ ಅತಿ ಹೆಚ್ಚು ರಫ್ತುಗೊಳ್ಳುವ ಸ್ಕೂಟರ್ ಮಾದರಿಗಳಲ್ಲೂ ಅಗ್ರಸ್ಥಾನದಲ್ಲಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ದೇಶದಲ್ಲಿ ಮಾರಾಟವಾಗುವ ಟಾಪ್ 10 ಸ್ಕೂಟರ್‍‍ಗಳಲ್ಲಿ ಒಂದಾಗಿರುವ ಹೋಂಡಾ ಡಿಯೋ ಸ್ಕೂಟರ್ ಮಾದರಿಯು ಇದೀಗ ಮತ್ತಷ್ಟು ಹೊಸ ವಿನ್ಯಾಸದೊಂದಿಗೆ ಸ್ಪೋರ್ಟಿ ಗ್ರಾಫಿಕ್ಸ್ ಡಿಸೈನ್ ಹೊಂದಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಬಿಎಸ್-6 ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಇದು ವೇಗ, ಸರಾಸರಿ ಇಂಧನ ದಕ್ಷತೆ ಮತ್ತು ರಿಯಲ್ ಟೈಮ್ ಇಂಧನ ದಕ್ಷತೆಯ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದಲ್ಲದೆ ಇದು ಟ್ರಿಪ್ ಮೀಟರ್, ಕ್ಲಾಕ್ ಮತ್ತು ಸರ್ವಿಸ್ ಇಂಡಿಕೇಟರ್ ಅನ್ನು ಪ್ರದರ್ಶಿಸಲಿದ್ದು, ಆಕ್ಟಿವಾ 6ಜಿ ಸ್ಕೂಟರ್‍‍ನಂತೆ ಫುಲ್ ಎಲ್‍ಇಡಿ ಹೆಡ್‍‍ಲ್ಯಾಂಪ್ ಮತ್ತು ಡಿ‍ಆರ್‍ಎಲ್ ಅನ್ನು ಅಳವಡಿಸಲಾಗಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಹೊಸ ಡಿಯೋ ಸ್ಕೂಟರ್‌ನಲ್ಲಿ ಟೆಲಿಸ್ಕೊಪಿಕ್ ಫೋರ್ಕ್ ಅನ್ನು ಅಳವಡಿಸಲಾಗಿದ್ದು, ಸ್ಪೋರ್ಟಿ ಗ್ರಾಫಿಕ್ಸ್ ಡಿಸೈನ್ ಮತ್ತು ವಿವಿಧ ಮಾದರಿಯ ಹೊಸ ಬಣ್ಣಗಳ ಆಯ್ಕೆ ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಮತ್ತೊಂದು ವಿಶೇಷ ಅಂದ್ರೆ, ಆಕ್ಟಿವಾ 6ಜಿಯಂತೆಯೇ ಹೋಂಡಾ ಡಿಯೋ ಕೂಡಾ ಒಂದೇ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ್ದು, 110 ಸಿಸಿ ಎಂಜಿನ್‌ನೊಂದಿಗೆ 7.79-ಬಿ‍‍ಹೆಚ್‍‍ಪಿ ಮತ್ತು 8.79-ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಹೊಸ ಎಮಿಷನ್ ನಿಯಮದಿಂದಾಗಿ ಹೊಸ ಸ್ಕೂಟರ್ ಪರ್ಫಾಮೆನ್ಸ್‌ನಲ್ಲಿ ತುಸು ಇಳಿಕೆ ಮಾಡಲಾಗಿದ್ದು, ಇದು ಮಾಲಿನ್ಯ ಪ್ರಮಾಣವನ್ನು ಶೇ.15ರಷ್ಟು ತಗ್ಗಿಸಿರುವುದಲ್ಲದೇ ಶೇ.10 ರಷ್ಟು ಹೆಚ್ಚು ಮೈಲೇಜ್ ಪ್ರಮಾಣವನ್ನು ಹೆಚ್ಚಿಸಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಇನ್ನು ಡಿಯೋ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಬಿಎಸ್-4 ಮಾದರಿಗೆ ಹೋಲಿಕೆ ಮಾಡಿದರೆ ಹೊಸ ಸ್ಕೂಟರ್ ಬೆಲೆಯಲ್ಲಿ ರೂ.6 ಸಾವಿರದಿಂದ ರೂ.9 ಸಾವಿರದಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲೂ ಬಿಡುಗಡೆಗೊಂಡ ಬಿಎಸ್-6 ಹೋಂಡಾ ಡಿಯೋ

ಲಭ್ಯವಿರುವ ಬಣ್ಣಗಳ ಆಯ್ಕೆ

ಹೊಸ ಡಿಯೋ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಕ್ಯಾಂಡಿ ಝಾಸಿ ಬ್ಲೂ, ಸ್ಪೋರ್ಟ್ ರೆಡ್ ಮತ್ತು ವೈಬ್ರಂಟ್ ಆರೆಂಜ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಿದ್ದು, ಡಿಲಕ್ಸ್ ಮಾದರಿಯಲ್ಲಿ ಮ್ಯಾಟೆ ಸಾಂಗ್ರಿಯಾ ರೆಡ್ ಮೆಟಾಲಿಕ್, ಡ್ಯಾಜ್ಲ್ ಎಲ್ಲೊ ಮೆಟಾಲಿಕ್ ಮತ್ತು ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಮೂರು ಬಣ್ಣಗಳ ಆಯ್ಕೆಯಿದೆ.

Article Published On: Tuesday, February 25, 2020, 19:10 [IST]
English summary
New Honda Dio BS6 Launched In Bangalore. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+