ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಹೋಂಡಾ ಡಿಯೋ
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಕ್ಟಿವಾ 6ಜಿ ಬಿಎಸ್-6 ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಕಂಪನಿಯು ಹೋಂಡಾ ಡಿಯೋ ಬಿಎಸ್-6 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಹೋಂಡಾ ಡಿಯೋ ಸ್ಕೂಟರ್ ಅನ್ನು 2002ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಡಿಯೋ ಸ್ಕೂಟರ್ ಇಲ್ಲಿಯವರೆಗೆ 33 ಲಕ್ಷ ಗ್ರಾಹಕರನ್ನು ಹೊಂದಿದೆ. ಹೋಂಡಾ ಡಿಯೋ ಭಾರತದಿಂದ ಅತಿ ಹೆಚ್ಚು ರಫ್ತು ಮಾಡುವ ಸ್ಕೂಟರ್ ಆಗಿದೆ. ದೇಶದಲ್ಲಿ ಮಾರಾಟವಾಗುವ ಟಾಪ್ 10 ಸ್ಕೂಟರ್‍ಗಳಲ್ಲಿ ಡಿಯೋ ಒಂದಾಗಿದೆ. ಹೋಂಡಾ ಡಿಯೋ ಸ್ಕೂಟರ್ ಡೀಲರ್‍ಗಳ ಬಳಿ ಮುಂದಿನ ವಾರ ತಲುಪಿದೆ. ಶೀಘ್ರದಲ್ಲೇ ಈ ಸ್ಕೂಟರ್‍ನ ವಿತರಣೆಯನ್ನು ಪ್ರಾರಂಭಿಸಲಿದೆ.

ಬಿಎಸ್-6 ಹೋಂಡಾ ಡಿಯೋ ಸ್ಕೂಟರ್‍ನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ರೇಂಜ್, ಸರಾಸರಿ ಇಂಧನ ದಕ್ಷತೆ ಮತ್ತು ರಿಯಲ್ ಟೈಮ್ ಇಂಧನ ದಕ್ಷತೆಯ ವಿವರದ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದಲ್ಲದೆ ಇದು ಟ್ರಿಪ್ ಮೀಟರ್, ಕ್ಲಾಕ್ ಮತ್ತು ಸರ್ವಿಸ್ ಇಂಡಿಕೇಟರ್ ಅನ್ನು ಪ್ರದರ್ಶಿಸುತ್ತದೆ.

2020ರ ಹೋಂಡಾ ಡಿಯೋ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಡಿಯೋ ಸ್ಕೂಟರ್ ಮುಂಭಾಗ ಆಕ್ಟಿವಾ 6ಜಿ ಸ್ಕೂಟರ್‍ನಂತೆ ಫುಲ್ ಎಲ್‍ಇಡಿ ಹೆಡ್‍ಲ್ಯಾಂಪ್ ಮತ್ತು ಡಿಆರ್‍ಎಲ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಹೊಸ ಡಿಯೋ ಅಗ್ರೆಸಿವ್ ವಿನ್ಯಾಸವನ್ನು ಹೊಂದಿದೆ.

ಒಟ್ಟಾರೆ ಇದರ ಥೀಮ್ ಮೂಲ ಮಾದರಿಯಂತಿದೆ. ಹೊಸ ಗ್ರಾಫಿಕ್ಸ್ ಮಾದರಿಗಳು ಮತ್ತು ಹೊಸ ಬಣ್ಣಗಳನ್ನು ಹೊಂದಿರಲಿದೆ. ಹೋಂಡಾ ಆಕ್ಟಿವಾ 6ಜಿಯಂತೆಯೇ ಹೋಂಡಾ ಡಿಯೊ ಕೂಡ ಅದೇ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ.

ಹೊಸ ಡಿಯೋ ಸ್ಕೂಟರ್‍ನಲ್ಲಿ ಸ್ಟ್ಯಾಂಡರ್ಡ್ ರೂಪಾಂತರವು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಕ್ಯಾಂಡಿ ಝಾಸಿ ಬ್ಲೂ, ಸ್ಪೋರ್ಟ್ ರೆಡ್ ಮತ್ತು ವೈಬ್ರಂಟ್ ಆರೆಂಜ್ ಎಂಬ ನಾಲ್ಕು ಬಣ್ಣಗಳಲ್ಲಿ ನೀಡಲಾಗುವುದು. ಡಿಲಕ್ಸ್ ರೂಪಾಂತರವು ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಡ್ಯಾಜ್ಲ್ ಎಲ್ಲೊ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ಡಿಯೋ ಸ್ಕೂಟರ್‍ನ 110 ಸಿಸಿ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಡಿಯೋ ಬಿಎಸ್-4 ಮಾದರಿಯು 8 ಬಿಹೆಚ್‍ಪಿ ಪವರ್ ಮತ್ತು 9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಾಗ ಎಂಜಿನ್‍ನ ದಕ್ಷತೆಯ ಅಂಕಿ ಅಂಶಗಳು ಕೂಡ ಕಡಿಮೆಯಾಗಿದೆ. ಹೊಸ ಹೋಂಡಾ ಡಿಯೋ ಸ್ಕೂಟರ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಡಿಯೋ ಸ್ಕೂಟರ್ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.59.990 ಗಳಾಗಿದೆ. ಇನ್ನು ಟಾಪ್ ವೆರಿಯೆಂಟ್ ಆದ ಡಿಲಕ್ಸ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.63,340ಗಳಾಗಿದೆ.

ಬಿಎಸ್-4 ಮಾದರಿಗೆ ಹೋಲಿಸಿದರೆ ಹೊಸ ಬಿಎಸ್-6 ಮಾದರಿಗೆ ರೂ.7,000 ಹೆಚ್ಚಾಗಿದೆ. ಹೋಂಡಾ ಡಿಯೋ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ರೇ-ಝಡ್ ಮತ್ತು ಹೀರೋ ಮೆಸ್ಟ್ರೋ ಎಡ್ಜ್ ಸ್ಖೂಟರ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications