ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಈಗಾಗಲೇ ಹಲವಾರು ಪ್ರೀಮಿಯಂ ಮಾದರಿಗಳ ಮಾರಾಟವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಐಷಾರಾಮಿ ಸೌಲಭ್ಯವುಳ್ಳ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಯ ಯೋಜನೆಯಲ್ಲಿದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಆಮದು ನೀತಿಯಡಿ ವಿವಿಧ ಮಾದರಿಯ 5 ಹೊಸ ದ್ವಿಚಕ್ರ ವಾಹನಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲು ನಿರ್ಧರಿಸಿರುವ ಹೋಂಡಾ ಕಂಪನಿಯು ಯುರೋಪಿಯನ್ ಮಾರುಕಟ್ಟೆಯಲ್ಲಿರುವ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆಯ ಯೋಜನೆಯಲ್ಲಿದ್ದು, ಹೊಸ ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಕುರಿತಂತೆ ಮಾಧ್ಯಮ ಸಂಸ್ಥೆಯ ಸಂದರ್ಶನದಲ್ಲಿ ಖಚಿತಪಡಿಸಲಾಗಿದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಆಟೋಎಕನಾಮಿಕ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿರುವ ಹೋಂಡಾ ಇಂಡಿಯಾ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಯತ್ವಿಂದರ್ ಸಿಂಗ್ ಗುಲೇರಿಯಾ ಅವರು 2020-21ರ ಆರ್ಥಿಕ ವರ್ಷದಲ್ಲೇ ಫೋರ್ಜಾ 300 ಮಾದರಿಯು ಬಿಡುಗಡೆಯಾಗಲಿದೆ ಎಂದಿದ್ದಾರೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಜೊತೆಗೆ ಇನ್ನೂ ನಾಲ್ಕು ಹೊಸ ಮಧ್ಯಮ ಕ್ರಮಾಂಕದ ಸೂಪರ್ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ವಾಹನಗಳ ಬಿಡುಗಡೆಯ ಮೇಲೆ ಕರೋನಾ ವೈರಸ್‌ನಿಂದಾಗಿ ಯಾವುದೇ ಪರಿಣಾಮ ಬೀರದು ಎನ್ನುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಮಾಹಿತಿಗಳ ಪ್ರಕಾರ, ಹೋಂಡಾ ಕಂಪನಿಯು ಹೊಸದಾಗಿ ರೆಬೆಲ್ 500, ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಸೂಪರ್ ಬೈಕ್‌ ಮಾದರಿಗಳ ಜೊತೆಗೆ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿವೆ. ಫೋರ್ಜಾ 300 ಸ್ಕೂಟರ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದ್ದು, ಹೊಸ ಸ್ಕೂಟರ್ ಅನ್ನು ಈಗಾಗಲೇ ಕೆಲವು ಗ್ರಾಹಕರು ದುಬಾರಿ ಬೆಲೆಯೊಂದಿಗೆ ವಿದೇಶಿ ಮಾರುಕಟ್ಟೆಯಿಂದ ಆಮದು ನೀಡಿಯಡಿಯಲ್ಲಿ ಖರೀದಿಸಿದ್ದಾರೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ದೆಹಲಿ ಮತ್ತು ಮುಂಬೈನಲ್ಲಿ ಇದುವರೆಗೆ ಸುಮಾರು 10ಕ್ಕೂ ಹೆಚ್ಚು ಫೋರ್ಜಾ 300 ಸ್ಕೂಟರ್‌ಗಳು ಮಾರಾಟಗೊಂಡಿದ್ದು, ಮುಂಬರುವ ದಿನಗಳಲ್ಲಿ ಹೊಸ ಸ್ಕೂಟರ್ ಅನ್ನು ಭಾರತದಲ್ಲೇ ಅಧಿಕೃತವಾಗಿ ಬಿಡುಗಡೆಗೊಳಿಸಲಾಗುತ್ತಿದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಪರ್ಫಾಮೆನ್ಸ್ ಜೊತೆಗೆ ಲೈಫ್‌ಸ್ಟೈಲ್ ಆವೃತ್ತಿಯಾಗಿರುವ ಹೊಸ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಮಾದರಿಯು 1,510ಎಂಎಂ ಉದ್ದಳತೆ ಹೊಂದಿದ್ದು, ಇದು ಅರಾಮದಾಯಕ ರೈಡಿಂಗ್‌ಗೆ ಸಹಕಾರಿಯಾಗಿರುವುಲ್ಲದೇ ಹಿಂಬದಿ ಸವಾರರಿಗೂ ಅನೂಕಲಕರ ಸ್ಥಳಾವಕಾಶ ಒದಗಿಸುತ್ತದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್

ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಮಾದರಿಯು 279-ಸಿಸಿ, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷಡ್, SOHC ಫೋರ್ ವ್ಲಾವೆ ಎಂಜಿನ್ ಹೊಂದಿದ್ದು, 24.8-ಬಿಎಚ್‌ಪಿ ಮತ್ತು 27.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಹೊಸ ಸ್ಕೂಟರ್ ಅನ್ನು ಟ್ಯಾಬ್ಯೂಲರ್ ಸ್ಟೀಲ್ ಫ್ರೆಮ್ ಚಾರ್ಸಿ ಮೇಲೆ ನಿರ್ಮಾಣ ಮಾಡಲಾಗಿದ್ದು, ಅಲ್ಯುಮಿನಿಯಂ ಪ್ರೇರಿತ 15-ಇಂಚಿನ ಮುಂಭಾಗ ಚಕ್ರ ಮತ್ತು 14-ಇಂಚಿನ ಹಿಂಭಾಗದ ಚಕ್ರದ ಜೊತೆಗೆ 256-ಎಂಎಂ ಮುಂಭಾದ ಡಿಸ್ಕ್ ಬ್ರೇಕ್ ಮತ್ತು 240-ಎಂಎಂ ಹಿಂಭಾಗದ ಡಿಸ್ಕ್ ಜೋಡಿಸಲಾಗಿದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಇದರೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಾದ ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಎಲೆಕ್ಟ್ರಿಕ್ ವೀಂಡ್ ಸ್ಕೀನ್, ಎರಡು ಫುಲ್ ಫೇಸ್ ಹೆಲ್ಮೆಟ್ ಹಿಡಿಯುವಷ್ಟು ಅಂಡರ್ ಸೀಟ್ ಸ್ಟೋರೆಜ್, 12-ವಿ ಚಾರ್ಜಿಂಗ್ ಸಾಕೆಟ್, ಇಗ್ನಿಷನ್ ನಾಬ್ ಕಂಟ್ರೋಲ್ ಮಾಡಬಹುದಾದ ಸ್ಮಾರ್ಟ್ ಕೀ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್, ಸಿಂಗಲ್ ಪೀಸ್ ಅಲ್ಯುಮಿಯಂ ಸ್ವಿಂಗ್ ಆರ್ಮ್ ಪಡೆದುಕೊಂಡಿದೆ.

ಭಾರತದಲ್ಲಿ ಫೋರ್ಜಾ 300 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ ಮಾಡಲಿದೆ ಹೋಂಡಾ

ಫೋರ್ಜಾ 300 ಸ್ಕೂಟರ್ ಬೆಲೆ(ಅಂದಾಜು)

ಭಾರತದಲ್ಲಿ ಫೋರ್ಜಾ ಸ್ಕೂಟರ್ ಅಧಿಕೃತವಾಗಿ ಬಿಡುಗಡೆಗೊಂಡಲ್ಲಿ ಸ್ಕೂಟರ್ ಬೆಲೆಯು ಇಳಿಕೆಯಾಗುವ ಸಾಧ್ಯತೆಗಳಿದ್ದು, ಸದ್ಯ ಆಸಕ್ತ ಗ್ರಾಹಕರಿಗಾಗಿ ಮಾತ್ರವೇ ದುಬಾರಿ ಬೆಲೆಯೊಂದಿಗೆ ಆಮದು ಮಾಡಿಕೊಂಡು ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಆಮದು ಸುಂಕ ಮತ್ತು ಮೂಲಬೆಲೆಯೊಂದಿಗೆ ಸುಮಾರು ರೂ. 3 ಲಕ್ಷದಿಂದ ರೂ. 3.50 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲೇ ಅಧಿಕೃತ ಬಿಡುಗಡೆಯಾದ ನಂತರ ಹೊಸ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.2.30 ಲಕ್ಷದಿಂದ ರೂ.2.60 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
According to report, Honda is planning to launch Forza 300 scooter in India current financial year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X