Just In
Don't Miss!
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- News
ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣ: ನೋಟಿಸ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೀಲರ್ ಬಳಿ ತಲುಪಿದ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಬಿಎಸ್-6 ಗ್ರಾಜಿಯಾ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.73,336 ಗಳಾಗಿದೆ.

ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್‌ಗೆ ವಿಶೇಷ ವಾರಂಟಿ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಈ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬುಕ್ಕಿಂಗ್ ಅನ್ನು ಇತ್ತೀಚೆಗೆ ಪ್ರಾರಂಭಿಸಿತು. ಇನ್ನು ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಭಾರತದಾದ್ಯಂತ ಆಯ್ದ ಡೀಲರ್‌ಗಳನ್ನು ತಲುಪಲು ಪ್ರಾರಂಭವಾಗಿದೆ. ಈ ಹೊಸ ಸ್ಕೂಟರ್ ಡೀಲರ್ ತಲುಪಿರುವುದನ್ನು ಬೈಕ್ ದೇಖು ಬಹಿರಂಗಪಡಿಸಿದೆ. ಡೀಲರ್‌ಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಈ ಸ್ಕೂಟರ್ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮ್ಯಾಟ್ ಸೈಬರ್ ಯೆಲ್ಲೊ, ಪರ್ಲ್ ಸ್ಪಾರ್ಟನ್ ರೆಡ್, ಪರ್ಲ್ ಸೈರನ್ ಬ್ಲೂ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಬಿಎಸ್-6 ಗ್ರಾಜಿಯಾ 125 ಸ್ಕೂಟರ್‌ನಲ್ಲಿ 125 ಸಿಸಿ ಹೆಚ್‌ಇಟಿ(ಹೋಂಡಾ ಇಕೋ ಟೆಕ್ನಾಲಜಿ) ಬಿಎಸ್‌ವಿಐ ಪಿಜಿಎಂ-ಎಫ್‌ಐ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಪೇಟೆಂಟ್ ಪಡೆದ ಎಸಿಜಿ ಸ್ಟಾರ್ಟರ್ ಮೋಟರ್ ಇದೆ. ಇದು ಪ್ರತಿ ಬಾರಿಯೂ ತ್ವರಿತ, ಮತ್ತು ಜೋಲ್ಟ್-ಫ್ರೀ ಸ್ಟಾರ್ಟ್ ಆಗುತ್ತದೆ.

ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ ಪಾಸ್-ಸ್ವಿಚ್, ಹೊಸ ಎಂಜಿನ್ ಸ್ಟಾರ್ಟ್/ ಸ್ಟಾಪ್ ಸ್ವಿಚ್, ಸೀಟ್‌ಗಾಗಿ ಮಲ್ಟಿ-ಫಂಕ್ಷನಲ್ ಸ್ವಿಚ್ ಮತ್ತು ಫ್ಯೂಯಲ್ ಲಿಡ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‍ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5000 ಆರ್‍ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವಿ-ಟೈಪ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ ಸಸ್ಪೆಂಕ್ಷನ್ ಗಾಗಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಿದ್ದಾರೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಇನ್ನು ಈ ಸ್ಕೂಟರ್‌ನಲ್ಲಿ ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ 190 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬ್ರ್ಯಾಂಡ್‌ನ ಪ್ರೀಮಿಯಂ 125 ಸಿಸಿ ವಿಭಾಗದಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ.

ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಫ್ಯಾಸಿನೊ 125, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು.