ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಹೊಸ ವಿನ್ಯಾಸವುಳ್ಳ ರೋಡ್‌ಸ್ಟರ್ ಮೋಟಾರ್‌ಸೈಕಲ್ ಮಾದರಿಯೊಂದನ್ನು ಅನಾವರಣಗೊಳಿಸಿದ್ದು, ಹೊಚ್ಚ ಹೊಸ ಹೈನೆಸ್ ಸಿಬಿ 350 ಬೈಕ್ ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ರೋಡ್‌ಸ್ಟರ್ ಮೋಟಾರ್‌ಸೈಕಲ್ ಮಾದರಿಗಳನ್ನು ಆಧರಿಸಿ ಹೊಚ್ಚ ಹೊಸ ಹೈನೆಸ್ ಸಿಬಿ 350 ಮಾದರಿಯನ್ನು ಅನಾವರಣಗೊಳಿಸಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಬೈಕ್ ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಹೊಸ ಬೈಕ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಿರವಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಹೊಸ ಬೈಕ್ ಮಾದರಿಯನ್ನು ತನ್ನ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಯಾದ ಬಿಗ್‌ವಿಂಗ್ ಡೀಲರ್ಸ್ ಮೂಲಕ ಮಾರಾಟ ಮಾಡಲಿದ್ದು, ಆಸಕ್ತ ಗ್ರಾಹಕರು ಇಂದಿನಿಂದಲೇ ರೂ.5 ಸಾವಿರ ಮುಂಗಡದೊಂದಿಗೆ ಬೈಕ್ ಖರೀದಿಗಾಗಿ ಬುಕ್ಕಿಂಗ್ ಸಲ್ಲಿಸಬಹುದಾಗಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ರೆಟ್ರೋ ಕ್ಲಾಸಿಕ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ಹೈನೆಸ್ ಸಿಬಿ 350 ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಜಾವಾ 300 ಟ್ವಿನ್ಸ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಬೆಲೆ ಕೂಡಾ ಆಕರ್ಷಕವಾಗಿರಲಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳನ್ನು ಹೊಂದಿರುವ ಹೈನೆಸ್ ಸಿಬಿ 350 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.90 ಲಕ್ಷದಿಂದ ಆರಂಭವಾಗುವುದಾಗಿ ಹೋಂಡಾ ಮಾಹಿತಿ ನೀಡಿದ್ದು, ವಿವಿಧ ವೆರಿಯೆಂಟ್‌ಗಳ ಸಂಪೂರ್ಣ ಬೆಲೆ ಮಾಹಿತಿಯನ್ನು ಬಿಡುಗಡೆಯ ಸಂದರ್ಭದಲ್ಲಿ ಹಂಚಿಕೊಳ್ಳಲಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಹೈನೆಸ್ ಸಿಬಿ 350 ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೈನೆಸ್ ಸಿಬಿ 350 ಮಾದರಿಯು ಏರ್ ಕೂಲ್ಡ್ 350ಸಿಸಿ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸ್ಲಿಪ್ ಅಸಿಸ್ಟ್ ಕ್ಲಚ್ ವೈಶಿಷ್ಟ್ಯತೆ ಹೊಂದಿದೆ. ಎಂಜಿನ್ ಮಾಹಿತಿ ಹೊರತಾಗಿ ಹೊಸ ಬೈಕಿನ ಪರ್ಫಾಮೆನ್ಸ್ ಕುರಿತಾದ ಮಾಹಿತಿ ಬಿಡುಗಡೆ ವೇಳೆ ಬಹಿರಂಗವಾಗಲಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ರೆಟ್ರೊ ವಿನ್ಯಾಸದ ಹೈನೆಸ್ ಸಿಬಿ 350 ಬೈಕ್ ಮಾದರಿಯಲ್ಲಿ ಅತ್ಯುತ್ತಮ ಸಸ್ಷೆಂಷನ್ ಸೆಟಪ್ ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾರ್ಕ್ ನೀಡಲಾಗಿದೆ. ಹಾಗೆಯೇ ಹೊಸ ಬೈಕ್ ಮಾದರಿಯಲ್ಲಿ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಅಲಾಯ್ ವೀಲ್ಹ್ ಹೊಂದಿರಲಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಹೊಸ ಬೈಕಿನಲ್ಲಿ ರೆಟ್ರೋ ಶೈಲಿಯನ್ನು ಹೆಚ್ಚಿಸುವ ವೃತ್ತಾಕಾರವಾದ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ಸ್, ಟರ್ನ್ ಸಿಗ್ನಲ್ ಇಂಡಿಕೇಟರ್, ರೆಟ್ರೋ ಮಾದರಿಯ ರಿಯರ್ ವ್ಯೂ ಮಿರರ್, ಕ್ರೋಮ್ ಪ್ರೇರಿತ ಎಕ್ಸಾಸ್ಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಹೊಂದಿದೆ.

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಹೈನೆಸ್ ಸಿಬಿ 350 ಮಾದರಿಯಲ್ಲಿ ಹೋಂಡಾ ಕಂಪನಿಯು ಬ್ಲೂಥೂಟ್ ಮೂಲಕ ನಿಯಂತ್ರಣ ಮಾಡಬಹುದಾದ 'ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ' ಜೋಡಣೆ ಮಾಡಿದ್ದು, ಲಾಂಗ್ ರೈಡಿಂಗ್ ಅನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೈನೆಸ್ ಸಿಬಿ 350 ರೋಡ್‌ಸ್ಟರ್ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಹೋಂಡಾ

ಇನ್ನು ಹೋಂಡಾ ಕಂಪನಿಯು ಹೊಸ ಬೈಕ್ ಮಾದರಿಯನ್ನು ಭಾರತದಲ್ಲಿ ಸಂಪೂರ್ಣವಾಗಿ ಉತ್ಪಾದನೆ ಕೈಗೊಳ್ಳಲಿದ್ದು, ಭಾರತದಲ್ಲಿರುವ ಹಲವು ಕ್ಲಾಸಿಕ್ ಬೈಕ್ ಮಾದರಿಗಳಿಗೆ ಹೈನೆಸ್ ಸಿಬಿ 350 ಆವೃತ್ತಿಯು ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Honda H’Ness CB 350 Unveiled Globally In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X