ಹೊಸ ಹೋಂಡಾ ಎಸ್‌ಪಿ 125 ಬೈಕಿನ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಹೊಸ ಎಸ್‌ಪಿ 125 ಬೈಕಿನ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. ಹೊಸ ಎಸ್‌ಪಿ 125 ಬೈಕಿನ ಮೇಲೆ ರೂ.5,000 ಗಳವರೆಗಿನ ಕ್ಯಾಶ್‌ಬ್ಯಾಕ್ ಅನ್ನು ಹೋಂಡಾ ನೀಡುತ್ತಿದೆ.

ಆದರೆ ಹೋಂಡಾ ಕಂಪನಿಯ ಪಾಲುದಾರ ಬ್ಯಾಂಕುಗಳ ಮೂಲಕ ನೀವು ಹಣ ಪಾವತಿಸಿದರೆ ಮಾತ್ರ ಹೊಸ ಹೋಂಡಾ ಎಸ್‌ಪಿ 125 ಬೈಕಿನ ಮೇಲೆ ಕ್ಯಾಶ್‌ಬ್ಯಾಕ್ ನಿಮಗೆ ಲಭಿಸುತ್ತದೆ. ಅವುಗಳೆಂದರೆ ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಯೆಸ್ ಬ್ಯಾಂಕ್ ಗಳಾಗಿವೆ. ಇನ್ನು ಹೊಸ ಹೋಂಡಾ ಎಸ್ಪಿ 125 ಬೈಕ್ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಇದರಲ್ಲಿ ಹೋಂಡಾ ಎಸ್‌ಪಿ 125 ಬೈಕಿನ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು ರೂ.75,010 ಗಳಾದರೆ, ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ರೂ.79,210 ಗಳಾಗಿದೆ. ಈ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೋಂಡಾ ಎಸ್‌ಪಿ 125 ಬೈಕಿನಲ್ಲಿರುವ ಸ್ಟಾಂಡರ್ಡ್ ಫೀಚರ್‍ಗಳೆಂದರೆ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್. ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍ಗಳ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಹೋಂಡಾ ಎಸ್ಪಿ 125 ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಂಜಿನ್ ಸ್ಟಾರ್ಟ್ / ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍ಗಳನ್ನು ಸಹ ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೋಂಡಾ ಎಸ್‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸದೊಂದಿಗೆ ಬರುತ್ತದೆ. ಹೊಸ ಬೈಕ್ ಅನ್ನು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಸೇರಿವೆ.

ಇನ್ನು ಹೋಂಡಾ ಎಸ್‌ಪಿ 125 ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಎಂಜಿನ್‍ನಲ್ಲಿ ಐದು ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್‍ಗಳಿವೆ. ಹೋಂಡಾ ಎಸ್‌ಪಿ 125 ಬೈಕಿನಲ್ಲಿ ಬ್ರೇಕಿಂಗ್‍ಗಳಿಗಾಗಿ ಬೈಕಿನ ಎರಡೂ ತುದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳಿವೆ.

ಟಾಪ್ ಎಂಡ್ ಮಾದರಿಯ ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ. ಈ ಬೈಕಿನಲ್ಲಿ 18 ಇಂಚಿನ ವ್ಹೀಲ್‍ಗಳಿದ್ದು, ಎರಡೂ ಬದಿಯಲ್ಲಿ 80/100 ಟಯರ್ ಪ್ರೊಫೈಲ್‌ಗಳಿವೆ. ಇದರಲ್ಲಿ ಟೆಕ್ನಾಲಜಿ ಪೇಟೆಂಟ್‌ಗಳಿದ್ದು, ಇವುಗಳಲ್ಲಿ ಬೈಕಿನ ಶೈಲಿ, ಆರಾಮದಾಯಕ ಹಾಗೂ ಕಂಫರ್ಟ್‍ಗಳು ಸೇರಿವೆ. ಎಸ್‌ಪಿ 125 ಬೈಕ್ ಕಂಪನಿಯ ಹೆಚ್‌ಇಟಿ (ಹೋಂಡಾ ಇಕೋ ಟೆಕ್ನಾಲಜಿ) ಯನ್ನು ಹೊಂದಿದೆ.

ಇದನ್ನು ಇಎಸ್‌ಪಿ (ಎನ್‍ಹ್ಯಾನ್ಸ್ಡ್ ಸ್ಮಾರ್ಟ್ ಪವರ್) ನಿಂದ ನಿಯಂತ್ರಿಸಲಾಗುತ್ತದೆ. ಹೋಂಡಾ ಎಸ್‌ಪಿ 125 ಬೈಕಿನಲ್ಲಿರುವ ಈ ಹೊಸ ಫೀಚರ್ ಮೈಲೇಜ್, ಎಂಜಿನ್ ರಿಫೈನ್‍ಮೆಂಟ್ ಹಾಗೂ ಎಂಜಿನ್ ಅನ್ನು ಶಾಂತವಾಗಿ ಆರಂಭಿಸುತ್ತದೆ.


Click it and Unblock the Notifications








