ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸ 200ಸಿಸಿಯ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಬೈಕ್ ಹೋಂಡಾ ಸಿಬಿಎಫ್ 190ಆರ್ ಮಾದರಿಯನ್ನು ಆಧರಿಸಿರಬಹುದು.

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಇದರರ್ಥ ಜಪಾನಿನ ಕಂಪನಿಯು ಅದನ್ನು ಹೊಸ 200ಸಿಸಿ ಮಾದರಿಯೊಂದಿಗೆ ಬದಲಾಯಿಸಲು ಗಮನಹರಿಸಿದೆ ಎಂದು. ಈ ಹೊಸ ಬೈಕನ್ನು ಸಿಬಿ ಹಾರ್ನೆಟ್ 200 ಆರ್ ಎಂದು ಕರೆಯಬಹುದು ಎಂದು ನಿರೀಕ್ಷಿಸುತ್ತೇವೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಸಿಬಿ ಹಾರ್ನೆಟ್ 200ಆರ್ ಬೈಕಿನ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಬಹಿರಂಗವಾಗಿಲ್ಲ.

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು ಇದೇ ತಿಂಗಳ 27 ರಂದು ಹೊಸ ಕಾರ್ಯಕ್ರಮಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದೆ. ಇದೇ ಕಾರ್ಯಕ್ರಮದಲ್ಲಿ ಹೊಸ 200ಸಿಸಿಯ ಬೈಕನ್ನು ಹೋಂಡಾ ಕಂಪನಿಯು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು ಈಗಾಗಲೇ ಸಿಬಿಎಫ್ 190ಆರ್ ಬೈಕಿನ ಪೇಟೆಂಟ್ ಪಡೆದಿದೆ. ಈ ಹೊಸ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಈ ಎಂಜಿನ್ 16.86 ಬಿಹೆಚ್‍ಪಿ ಪವರ್ ಮತ್ತು 16.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದೇ ಎಂಜಿನ್ ಅನ್ನು ಹೊಸ ಬೈಕ್ಕಿನಲ್ಲಿ ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಸಿಬಿ ಹಾರ್ನೆಟ್ 200ಆರ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ವಿನ್ಯಾಸವನ್ನು ಸಿಬಿಎಫ್ 190ಆರ್ ಮಾದರಿಯಿಂದ ಎರವಲು ಪಡೆಯಬಹುದು. ಸಿಬಿ ಹಾರ್ನೆಟ್ 200ಆರ್ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗಧಿಪಡಿಸಬಹುದು.

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಇನ್ನು ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್ ಸಿಂಗಲ್-ಡಿಸ್ಕ್ ಮತ್ತು ಡಬಲ್-ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಈ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ ಬೈಕಿನ ಬೆಲೆಯನ್ನು ರೂ.576 ಗಳವರೆಗೆ ಹೆಚ್ಚಿಸಿದೆ. ಇದೀಗ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ ಬೈಕಿನ ಸಿಂಗಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.1,06,687 ಗಳಾದರೆ, ಡ್ಯುಯಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.1,10,968ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು ಈ ಹೊಸ ಸಿಬಿ ಹಾರ್ನೆಟ್ 200ಆರ್ ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ 200 ಡ್ಯೂಕ್, ಬಜಾಜ್ ಪಲ್ಸರ್ ಎನ್ಎಸ್ 200, ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್‌ 200 4ವಿ ಬೈಕುಗಳನ್ನು ಪೈಪೋಟಿಯನ್ನು ನೀಡುತ್ತದೆ

Article Published On: Friday, August 21, 2020, 15:43 [IST]
English summary
Honda To Launch A New Two-wheeler In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+