ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಹೊಸ ಸಿಬಿ1300 ಸೀರಿಸ್ ಬೈಕನ್ನು ತಮ್ಮ ತವರುನಾಡು ಜಪಾನ್‌ನಲ್ಲಿ ಬೈಕನ್ನು ಬಿಡುಗಡೆಗೊಳಿಸಿದೆ. ಹೋಂಡಾ ಸರಣಿಯಲ್ಲಿ ಸಿಬಿ1300 ಸೀರಿಸ್ ಮಾದರಿ ಅತಿ ದುಬಾರಿ ಬೈಕುಗಳಲ್ಲಿ ಒಂದಾಗಿದೆ.

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕ್ ಸಿಬಿ1300 ಸೂಪರ್ ಫೋರ್, ಸಿಬಿ1300 ಸೂಪರ್ ಫೋರ್ ಎಸ್‌ಪಿ, ಸಿಬಿ1300 ಸೂಪರ್ ಬೋಲ್ಡ್ ಮತ್ತು ಸಿಬಿ1300 ಸೂಪರ್ ಬೋಲ್ಡ್ ಎಸ್ಪಿ ಎಂಬ ನಾಲ್ಕು ರೂಪಾಂತರಗಳನ್ನು ಒಳಗೊಂಡಿದೆ. ಇನ್ನು ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹೊಸ ಬೈಕಿನಲ್ಲಿ ಅದೇ 1284 ಸಿಸಿ ಇನ್-ಲೈನ್ 4-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಈ ಎಂಜಿನ್ 7750 ಆರ್‌ಪಿಎಂನಲ್ಲಿ 113 ಬಿಹೆಚ್‍ಪಿ ಪವರ್ ಮತ್ತು 112 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಇರುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕ್ ಹಲವಾರು ಆಕರ್ಷಕ ಫೀಚರ್ ಗಳನ್ನು ಹೊಂದಿವೆ. ಈ ಸಿಬಿ1300 ಸೀರಿಸ್ ಬೈಕ್ ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಪೂರ್ಣ-ಎಲ್ಇಡಿ ಹೆಡ್‌ಲೈಟ್ ಅನ್ನು ಹೊಂದಿದೆ,

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಇದರೊಂದಿಗೆ ಎಲ್ಇಡಿ ಬ್ಲಿಂಕರ್ ಗಳೊಂದಿಗೆ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ. ಇದು ಹೊಸ ಹೋಂಡಾ ಸಿಬಿ1300 ಬೈಕಿಗೆ ತುಂಬಾ ರೆಟ್ರೊ ಮತ್ತು ಮಾರ್ಡನ್ ಲುಕ್ ಅನ್ನು ನೀಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಇನ್ನು ಹೋಂಡಾ ಸರಣೆಯ ಓಲ್ಡ್ ಸ್ಕೂಲ್ ವಿನ್ಯಾಸದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದು ಎರಡು ಡಯಲ್‌ಗಳನ್ನು ಒಳಗೊಂಡಿದೆ, ಒಂದು ಸ್ಪೀಡ್ ಮತ್ತು ಇನ್ನೊಂದು ರೆವ್‌ಗಳಿಗೆ. ಅವುಗಳ ನಡುವೆ ಒಂದು ಸಣ್ಣ ಡಿಜಿಟಲ್ ಡಿಸ್ ಪ್ಲೇ ಇತರ ಮಾಹಿತಿಗಳನ್ನು ನೀಡುತ್ತದೆ.

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕಿನಲ್ಲಿ ರೈಡ್-ಬೈ-ವೈರ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಈ ಹೊಸ ಬೈಕಿನಲ್ಲಿ ಸ್ಪೋರ್ಟ್, ಸ್ಟ್ಯಾಂಡರ್ಡ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಇನ್ನು ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕಿನಲ್ಲಿ ಜಪಾನ್ ತಯಾರಕರು ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಫೀಚರ್ ಅನ್ನು ಕೂಡ ನೀಡಿದ್ದಾರೆ. ಅಗತ್ಯವಿದ್ದಾಗ ಅದನ್ನು ಸ್ವಿಚ್ ಆಫ್ ಮಾಡಬಹುದು. ಕ್ರೂಸ್ ಕಂಟ್ರೋಲ್ ಜೊತೆಗೆ ಹೋಂಡಾ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ಕೂಡ ಒಳಗೊಂಡಿದೆ.

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಇದರೊಂದಿಗೆ ಹೋಂಡಾ ತನ್ನ ಹೊಸ ಸಿಬಿಆರ್250ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಮಲೇಷ್ಯಾದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಹಲವಾರು ನವೀಕರಣಗಳನ್ನು ನಡೆಸಿ ಕೆಲವು ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಳಿಸಿದೆ.

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಈ ಹೋಂಡಾ ಸಿಬಿಆರ್250ಆರ್‌ಆರ್ ಮಾದರಿಯು ಯಮಹಾ ವೈಝೆಡ್-ಆರ್ 25 ಮತ್ತು ಕವಾಸಕಿ ನಿಂಜಾ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.ಹೊಸ ಸಿಬಿಆರ್250ಆರ್‌ಆರ್ ಬೈಕಿನಲ್ಲಿ ಪವರ್‌ಫುಲ್ ಎಂಜಿನ್ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿದೆ.

ಐಷಾರಾಮಿ ಹೋಂಡಾ ಸಿಬಿ1300 ಸೀರಿಸ್ ಬೈಕ್ ಬಿಡುಗಡೆ

ಇನ್ನು ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕಿನ ಬೆಲೆಯು ಭಾರತೀಯ ಕರೆನ್ಸಿ ಅನುವಾದಿಸಿದಾಗ ರೂ.11.16 ಲಕ್ಷಗಳಾಗಿದೆ. ಈ ಹೊಸ ಹೋಂಡಾ ಸಿಬಿ1300 ಸೀರಿಸ್ ಬೈಕನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಬ್ರ್ಯಾಂಡ್ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
New Honda CB1300 Series Launched In Japan. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X