ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಹೋಂಡಾ ಕಂಪನಿಯ ಸಿಬಿಆರ್250ಆರ್‌ಆರ್ ಮಾದರಿಯು ದಕ್ಷಿಣ ಮತ್ತು ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿ ಜನಪ್ರಿಯ ಕ್ವಾರ್ಟರ್-ಲೀಟರ್ ಸ್ಪೋರ್ಟ್ಸ್ ಬೈಕ್ ಆಗಿದೆ. ಹೋಂಡಾ ಕಂಪನಿಯು ತನ್ನ ಸಿಬಿಆರ್250ಆರ್‌ಆರ್ ಬೈಕಿನ ಸೀಮಿತ ಆವೃತ್ತಿಯಾದ 'ಗರುಡ ಎಕ್ಸ್ ಸಮುರಾಯ್' ಎಂಬ ಮಾದರಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಈ ಹೊಸ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಮಾದರಿಯ ಬಾಡಿಯಲ್ಲಿ ಅದ್ಭುತವಾದ ಗ್ರಾಫಿಕ್ಸ್ ಅನ್ನು ಹೊಂದಿದೆ. ಈ ಬೈಕಿನ ಎಡಭಾಗದಲ್ಲಿ ಪೌರಾಣಿಕ ಗರುಡನ ವಿನ್ಯಾಸವು ಗೋಲ್ಡನ್ ಬಣ್ಣದಲ್ಲಿದೆ. ಇನ್ನು ಬಲಭಾಗದಲ್ಲಿ ಕೆಂಪು ಬಣ್ಣದ ಸಮುರಾಯ್ ವಿನ್ಯಾಸವಿದೆ. ಇನ್ನು ಈ ಬೈಕ್ ಹೆಚ್ಚಾಗಿ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಇದರೊಂದಿಗೆ ಗೋಲ್ಡನ್ ಬಣ್ಣದ ವ್ಹೀಲ್ ಗಳನ್ನು ಹೊಂದಿದೆ.

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಇನ್ನು ಈ ಬೈಕಿನ ಉಳಿದ ವಿನ್ಯಾಸವು ಸಾಮಾನ್ಯ ಮಾದರಿಯಂತಿದೆ. ಬೈಕಿನ ಮುಂಭಾಗದಲ್ಲಿ ಅಗ್ರೇಸಿವ್ ಸ್ಪ್ಲಿಟ್ ಹೆಡ್‌ಲೈಟ್ ವಿನ್ಯಾಸ ಮತ್ತು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ಹೊಂದಿದ್ದರೆ, ಹಿಂಭಾಗದಲ್ಲಿ ಎಲ್ಇಡಿ ಬ್ರೇಕ್ ಲೈಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕಿನಲ್ಲಿ ನವೀಕರಿಸಿದ ವಾಟರ್-ಕೂಲ್ಡ್ ಡಿಒಹೆಚ್ಸಿ ಇನ್ ಲೈನ್ ಎರಡು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 37 ಬಿಹೆಚ್‍ಪಿ ಮತ್ತು 11,000 ಆರ್‌ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಸಿಬಿಆರ್250ಆರ್‌ಆರ್ ಬೈಕ್ ಸಣ್ಣ ಎಂಜಿನ್ ಪಡೆದರೂ 2.75 ಸೆಕೆಂಡುಗಳಲ್ಲಿ ಗಂಟೆಗೆ 0 ದಿಂದ 60 ಕಿ.ಮೀ ಅಥವಾ 6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಇನ್ನು ಈ ಸ್ಪೋರ್ಟ್ಸ್ ಬೈಕ್ 180 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಸ್ಲಿಪ್ಪರ್ ಕ್ಲಚ್, ಥ್ರೊಟಲ್-ಬೈ-ವೈರ್ ಫಂಕ್ಷನ್, ಪರಿಷ್ಕೃತ ಸಸ್ಪೆಂಕ್ಷನ್ ಸೆಟಪ್ ಮತ್ತು ಕ್ವಿಕ್‌ಶಿಫ್ಟರ್ ಅನ್ನು ಒಳಗೊಂಡಿದೆ.

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಈ ಹೊಸ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ 5-ಹಂತದ ಪೂರ್ವ ಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಇನ್ನು ಈ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರ ಜೊತೆಯಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಹೋಂಡಾ ಸಿಬಿಆರ್250ಆರ್‌ಆರ್ ಗರುಡ ಎಕ್ಸ್ ಸಮುರಾಯ್ ಬೈಕ್ ಬಿಡುಗಡೆ

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ 500 ಸಿಸಿ ಟ್ವಿನ್-ಸಿಲಿಂಡರ್ ಮಿಡಲ್ ವೇಟ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಸಿಂಗಲ್-ಸಿಲಿಂಡರ್ ಹೋಂಡಾ ಸಿಬಿಆರ್250ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲ.

Most Read Articles

Kannada
English summary
2021 CBR250RR Garuda X Samurai Edition launched in Indonesia. Read In Kannada.
Story first published: Thursday, August 27, 2020, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X