ನಾಳೆ ಬಿಡುಗಡೆಯಾಗಲಿದೆ ಹೋಂಡಾ ಹೊಸ ಕ್ರೂಸರ್ ಬೈಕ್
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಇದೇ ತಿಂಗಳು 30ರಂದು ಪ್ರೀಮಿಯಂ ಕ್ರೂಸರ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಬೈಕ್ ಮಾದರಿಯನ್ನು ಹೈನೆಸ್ ಹೆಸರಿನೊಂದಿಗೆ ಬಿಡುಗಡೆ ಮಾಡಲಿದೆ.

ಪ್ರೀಮಿಯಂ ವಿಭಾಗದಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಯು ಹೋಂಡಾ ಬಿಗ್ ವಿಂಗ್ ಮಾರಾಟ ಮಳಿಗೆಗಳ ಮೂಲಕ ಮಾರಾಟಗೊಳ್ಳಲಿದ್ದು, ಹೊಸ ಬೈಕ್ ಮಾದರಿಯು 350ಸಿಸಿಯಿಂದ 500ಸಿಸಿ ಎಂಜಿನ್ ವೈಶಿಷ್ಟ್ಯತೆ ಹೊಂದಿರಲಿದೆ. ಹೊಸ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕ್‌ಗಳಿಗೆ ಪೈಪೋಟಿಯಾಗಿ ನೀಡಲಿದ್ದು, ಹೊಸ ಬೈಕ್ ಮಾದರಿಯು ಕ್ರೂಸರ್ ವೈಶಿಷ್ಟ್ಯತೆ ಹೊಂದಿರಲಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ರೆಬೆಲ್ 300 ಮಾದರಿಯನ್ನು ಆಧರಿಸಿ ಹೊಸ ಬೈಕ್ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ದೇಶಿಯ ಮಾರುಕಟ್ಟೆಯ ಬೇಡಿಕೆಯೆಂತೆ ಹೊಸ ಬೈಕ್ ಹಲವಾರು ಗಮನಾರ್ಹವಾದ ನವೀಕರಣಗಳು ಮತ್ತು ಬದಲಾವಣೆಗಳೊಂದಿಗೆ ರಸ್ತೆಗಿಳಿಯಲಿದೆ ಎನ್ನಲಾಗಿದೆ.

ಇದರಿಂದ ಹೊಸ ಬೈಕ್ ಕುರಿತಾದ ಅಧಿಕೃತ ಮಾಹಿತಿಗಳು ಬಿಡುಗಡೆ ವೇಳೆ ಲಭ್ಯವಾಗಲಿದ್ದು, ಹೊಸ ಬೈಕ್ ಮಾದರಿಯು ರೂ.2.50 ಲಕ್ಷದಿಂದ ರೂ.3 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದೆ.

ಇನ್ನು ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಪ್ರೀಮಿಯಂ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ವಿವಿಧ ಮಾದರಿಯ ನಾಲ್ಕು ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತರಲಾದ ಆಮದು ನೀತಿಯ ವಿನಾಯ್ತಿಯು ವಿದೇಶಿ ಆಟೋ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸಾಕಷ್ಟು ಅನುಕೂಲಕವಾಗಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೊಸ ನೀತಿ ಅಡಿ ವಿದೇಶಿ ಮಾರುಕಟ್ಟೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ 2,500 ವಾಹನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನಲೆ ಜಪಾನ್ ಮೂಲದ ಮೋಟಾರ್ ಸೈಕಲ್ ಕಂಪನಿ ಹೋಂಡಾ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ಕೆಲವು ಸೂಪರ್ ಬೈಕ್ ಮಾದರಿಗಳನ್ನು ಭಾರತದಲ್ಲೂ ಪರಿಚಯಿಸಲು ಮುಂದಾಗಿದೆ.

ಹೋಂಡಾ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಬಿಆರ್650ಆರ್, ಸಿಬಿಆರ್1000ಆರ್‌ಆರ್, ಸಿಬಿ1000ಆರ್, ಆಫ್ರಿಕನ್ ಟ್ವಿನ್ ಮತ್ತು ಗೋಲ್ಡ್‌ವಿಂಗ್ ಸೂಪರ್ ಬೈಕ್ ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ಬೈಕ್‌ಗಳು 300 ಸಿಸಿ ಯಿಂದ 500 ಸಿಸಿ ಮಧ್ಯದ ಎಂಜಿನ್ ಗಾತ್ರವನ್ನು ಹೊಂದಿರಲಿವೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಮಾಹಿತಿಗಳ ಪ್ರಕಾರ, ಹೋಂಡಾ ಸಂಸ್ಥೆಯು ಹೊಸದಾಗಿ ರೆಬೆಲ್ 500, ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಬೈಕ್‌ಗಳನ್ನು ಹೊಸ ಬದಲಾವಣೆಯೊಂದಿಗೆ ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳು ಸಂಪೂರ್ಣವಾಗಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿವೆ.


Click it and Unblock the Notifications