ಸ್ಥಗಿತಗೊಳ್ಳಲಿವೆ ಹೋಂಡಾದ ಈ ಸ್ಕೂಟರ್‍ಗಳು
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾವು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವಿ, ಕ್ಲಿಕ್ ಹಾಗೂ ಆಕ್ಟಿವಾ ಐ ಸ್ಕೂಟರ್‍ಗಳನ್ನು ಅಪ್‌ಗ್ರೇಡ್ ಮಾಡುತ್ತಿಲ್ಲ. ಈ ಕಾರಣಕ್ಕೆ ಈ ಸ್ಕೂಟರ್‍ಗಳ ಉತ್ಪಾದನೆಯನ್ನು ಹೋಂಡಾ ಕಂಪನಿಯು 2020ರ ಏಪ್ರಿಲ್‌ನಿಂದ ಸ್ಥಗಿತಗೊಳಿಸಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್‍ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 31ರ ನಂತರ ನವಿ, ಕ್ಲಿಕ್ ಹಾಗೂ ಆಕ್ಟಿವಾ ಐ ಸ್ಕೂಟರ್‍ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಅಂದ ಹಾಗೆ ಬಿಎಸ್ 6 ಮಾಲಿನ್ಯ ನಿಯಮಗಳ ಅನುಷ್ಟಾನಕ್ಕೆ ಮಾರ್ಚ್ 31 ಕೊನೆಯ ದಿನವಾಗಿದೆ.

ಜಪಾನ್ ಮೂಲದ ಹೋಂಡಾ ಕಂಪನಿಯು ಹೊರದೇಶಗಳಿಗಾಗಿ ನವಿ ಸ್ಕೂಟರ್ ಅನ್ನು ತಯಾರಿಸಲಿದೆ. ಹೋಂಡಾ ಕಂಪನಿಯ ನವಿ ಲ್ಯಾಟಿನ್ ಅಮೇರಿಕಾದ ಕೆಲವು ದೇಶಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಹಾಗೂ ಸಿಇಒ ಆದ ಮಿನೊರು ಕಾಟೊರವರು ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಎಸ್6 ಅಪ್‌ಗ್ರೇಡ್ ನಂತರ ಎಲ್ಲಾ ಮಾದರಿಗಳನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದರು.

ಕ್ಲಿಕ್ ಸ್ಕೂಟರ್ ಅನ್ನು ಬಿಎಸ್ 6 ಎಂಜಿನ್‍ಗೆ ಅಪ್‍ಗ್ರೇಡ್ ಮಾಡುವುದಿಲ್ಲವೆಂದು ಕಾಟೊರವರು ತಿಳಿಸಿದ್ದರು. ಹೋಂಡಾ ನ್ಯಾವಿ ಬೈಕಿನಲ್ಲಿ ಹೋಂಡಾ ಆಕ್ಟಿವಾ ದಲ್ಲಿರುವಂತಹ ಎಂಜಿನ್ ಅಳವಡಿಸಲಾಗಿದೆ. 110 ಸಿಸಿಯ ಈ ಸಿಂಗಲ್ ಸಿಲಿಂಡರ್ ಎಂಜಿನ್ 7,000 ಆರ್‌ಪಿಎಂನಲ್ಲಿ 8 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 8.96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ನವಿ, ಕ್ಲಿಕ್ ಹಾಗೂ ಆಕ್ಟಿವಾ ಐ ಸ್ಕೂಟರ್‍ಗಳನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗುವುದು. ಇವುಗಳನ್ನು ಹೊರತುಪಡಿಸಿ ಹೋಂಡಾ ಕಂಪನಿಯು ಉಳಿದ ದ್ವಿಚಕ್ರ ವಾಹನಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸುತ್ತಿದೆ.

ಹೋಂಡಾ ಕಂಪನಿಯು ಬಿಎಸ್ 6 ಅಪ್‍ಗ್ರೇಡ್ ಅನ್ನು ಆಕ್ಟಿವಾ 125 ಸ್ಕೂಟರಿನ ಬಿಡುಗಡೆಯೊಂದಿಗೆ ಆರಂಭಿಸಿತು. ಆಕ್ಟಿವಾ 125 ಸ್ಕೂಟರ್ ಬಿಎಸ್ 6 ಎಂಜಿನ್ ಹೊಂದಿರುವ ಮೊದಲ ಸ್ಕೂಟರ್. ಹೋಂಡಾ ಕಂಪನಿಯು ಅದಾದ ನಂತರ ಎಸ್‍ಪಿ 125 ಬೈಕ್ ಅನ್ನು ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಗೊಳಿಸಿತು.

ಇತ್ತೀಚೆಗೆ, ಹೋಂಡಾ ಕಂಪನಿಯು ತನ್ನ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಕ್ಟಿವಾ 110 ಸ್ಕೂಟರ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸಿದೆ. ಬಿಎಸ್ 6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಈ ಸ್ಕೂಟರಿನ ಬೆಲೆಯು ಭಾರತದ ಎಕ್ಸ್‌ಶೋರೂಂ ದರದಂತೆ ರೂ.63,912ಗಳಾಗಿದೆ. ಬಿಎಸ್6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ ಪೂರ್ಣ ಪ್ರಮಾಣದ ಮೆಟಲ್ ಬಾಡಿ, ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಲರ್ ಕ್ಯಾಪ್, ಇಂಟಿಗ್ರೇಟೆಡ್ ಇಗ್ನಿಷನ್ ಫಂಕ್ಷನ್ ಹೊಂದಿರುವ ಎಂಜಿನ್ ಕಿಲ್ ಸ್ವಿಚ್, ಉದ್ದವಾದ ಫುಟ್‌ಬೋರ್ಡ್ ಹಾಗೂ ಸ್ಯಾಡಲ್‍ಗಳನ್ನು ಹೊಂದಿದೆ.

ಹಾರ್ಡ್‌ವೇರ್ ಸ್ಪೆಸಿಫಿಕೇಶನ್ ಬಗ್ಗೆ ಹೇಳುವುದಾದರೆ ಅಪ್‌ಗ್ರೇಡ್ ಆದ ಆಕ್ಟಿವಾ ಸ್ಕೂಟರ್‍ನಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ 12 ಇಂಚಿನ ಫ್ರಂಟ್ ವ್ಹೀಲ್‍ಗಳಿವೆ. ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ಅಲಾಯ್ ವ್ಹೀಲ್‍ಗಳನ್ನು ಈ ಸ್ಕೂಟರ್‍ನಲ್ಲಿ ಅಳವಡಿಸಲಾಗಿಲ್ಲ. ಬಿಎಸ್6 ಎಂಜಿನ್ ಕಡಿಮೆ ಪ್ರಮಾಣದ ಪವರ್ ಹಾಗೂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್ 6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್‍ನಲ್ಲಿರುವ 109.51 ಸಿಸಿ ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ 7.6 ಬಿಹೆಚ್‍ಪಿ ಪವರ್ ಹಾಗೂ 8.79 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಎನ್‍ಹ್ಯಾನ್ಸ್ಡ್ ಸ್ಮಾರ್ಟ್ ಪವರ್ (ಇಎಸ್‍ಪಿ) ಹಾಗೂ ಎಸಿಜಿ ಸೈಲೆಂಟ್ ಸ್ಟಾರ್ಟ್ ಸಿಸ್ಟಂಗಳಿಂದ ಪ್ರಯೋಜನ ಪಡೆಯುತ್ತದೆ.


Click it and Unblock the Notifications