Just In
Don't Miss!
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೋಂಡಾ ದ್ವಿಚಕ್ರ ವಾಹನಗಳ ಖರೀದಿ ಮೇಲೆ ಭರ್ಜರಿ ಫೈನಾನ್ಸ್ ಆಫರ್
ಕರೋನಾ ವೈರಸ್‌ನಿಂದಾಗಿ ಕುಸಿದಿರುವ ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿರುವುದಲ್ಲದೆ ಗ್ರಾಹಕರಿಗೆ ವಿವಿಧ ಮಾದರಿಯ ಹಲವು ಸುಲಭ ಸಾಲಸೌಲಭ್ಯಗಳನ್ನು ಒದಗಿಸುತ್ತಿವೆ.

ಲಾಕ್‌ಡೌನ್ ನಂತರವು ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಹೋಂಡಾ ಹಲವಾರು ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್‌ಗಳನ್ನು ಸೇರಿದಂತೆ ಸುಲಭ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಹೋಂಡಾ ಕಂಪನಿಯು ಹೊಸದಾಗಿ ಘೋಷಣೆ ಮಾಡಿರುವ ಹೊಸ ಸಾಲ ಸೌಲಭ್ಯವು ಲಾಕ್‌ಡೌನ್ ಸಂಕಷ್ಟದಿಂದಾಗಿ ವಾಹನ ಖರೀದಿ ಮುಂದೂಡಿರುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಮಾಹಿತಿ ಪ್ರಕಾರ, ವಿವಿಧ ಬ್ಯಾಂಕ್‌ಗಳ ಜೊತೆಗೂಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಶೇ.95 ರಷ್ಟು ಆನ್ ರೋಡ್ ಸಾಲಸೌಲಭ್ಯಗಳನ್ನು ಒದಗಿಸುತ್ತಿದ್ದು, ಎಬಿಐ ಕ್ರೆಡಿಕ್ ಕಾರ್ಡ್ ಮೂಲಕ ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ.

ಜೊತೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸೀಮಿತ ಅವಧಿಯೊಳಗೆ ಸ್ಕೂಟರ್ ಮತ್ತು ಬೈಕ್ ಖರೀದಿಸುವ ಗ್ರಾಹಕರಿಗೆ ಅತಿ ಸರಳ ಇಎಂಐ ಆಫರ್ ನೀಡುತ್ತಿದ್ದು, ಗ್ರಾಹಕರು ಹೊಸ ವಾಹನ ಖರೀದಿ ಮಾಡಿದ ಮೊದಲ 3 ತಿಂಗಳು ಕೇವಲ ಶೇ.50ರಷ್ಟು ಐಎಂಐ ಮಾತ್ರ ಮರುಪಾವತಿಗೆ ಅವಕಾಶ ನೀಡಲಾಗಿದೆ.

ಮೂರು ತಿಂಗಳ ನಂತರ ವಿನಾಯ್ತಿ ನೀಡಲಾದ ಸಾಲ ಮೊತ್ತವು ಕೂಡಾ ಸೇರ್ಪಡೆಯಾಗುವುದರೊಂದಿಗೆ ಇಎಂಐ ದರಗಳನ್ನು ವಿಧಿಸಲಿದ್ದು, ಲಾಕ್‌ಡೌನ್ ಸಮಯದಲ್ಲಿ ಹೊಸ ವಾಹನ ಖರೀದಿಸಿ ಇಎಂಐ ಮರುಪಾವತಿ ಸಾಧ್ಯವಿಲ್ಲ ಎನ್ನುವ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ.

ಇದಲ್ಲದೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕರೋನಾ ವೈರಸ್‌ನಿಂದಾಗಿ ಇಳಿಕೆಯಾಗಿರುವ ವಾಹನ ಮಾರಾಟ ಪ್ರಮಾಣವನ್ನು ಸುಧಾರಣೆಗೊಳಿಸಲು ಪ್ರಮುಖ ದ್ವಿಚಕ್ರ ವಾಹನ ಮಾದರಿಗಳ ಖರೀದಿ ಮೇಲೆ ಹೆಚ್ಚುವರಿ ವಾರಂಟಿ ಅವಧಿಯ ಆಫರ್ ನೀಡುತ್ತಿದೆ.

ಆಯ್ದ ದ್ವಿಚಕ್ರ ವಾಹನ ಖರೀದಿ ಮೇಲೆ ವಿಸ್ತರಿತ ವಾರಂಟಿ ಘೋಷಣೆ ಮಾಡಿದ್ದು, ಸೀಮಿತ ಅವಧಿಯಲ್ಲಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ 2 ವರ್ಷಗಳ ಜೊತೆಗೆ ಹೆಚ್ಚುವರಿಯಾಗಿ 1 ವರ್ಷದ ವಾರಂಟಿ ಅವಧಿಯ ಆಫರ್ ಲಭ್ಯವಾಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಬಿಎಸ್-6 ನಿಯಮ ಅನುಸಾರವಾಗಿ ಹೊಸ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಆಕ್ಟಿವಾ 6ಜಿ, ಆಕ್ಟಿವಾ 125 ಎಫ್ಐ, ಡಿಯೋ, ಗ್ರಾಜಿಯಾ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿವೆ.