ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ 2021 ಸಿಬಿ125ಆರ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಈ ಚಿಕ್ಕದಾದ ಸಿಬಿ ನೇಕೆಡ್ ಸಿಬಿ125ಆರ್ ಬೈಕಿನ ಎಂಜಿನ್ ಅನ್ನು ನವೀಕರಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಹೊಸ ಹೋಂಡಾ ಸಿಬಿ125ಆರ್ ಬೈಕನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಹೊಸ ಮಾದರಿಯು ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಸಸ್ಪೆಂಕ್ಷನ್, ಟ್ವೀಕ್ಡ್ ಕಾಸ್ಮೆಟಿಕ್ಸ್ ಮತ್ತು ಫೀಚರ್ ಗಳನ್ನು ಕೂಡ ಅಪ್ಡೇಟ್ ಮಾಡಲಾಗಿದೆ. ಈ ಹೊಸ ಹೋಂಡಾ ಸಿಬಿ125ಆರ್ ಬೈಕ್ ಆಕರ್ಷಕವಾಗಿದೆ. 2021ರ ಹೋಂಡಾ ಸಿಬಿ125ಆರ್ ಬೈಕಿನಲ್ಲಿ 125 ಸಿಸಿ ಡಿಒಹೆಚ್‌ಸಿ, 4 ವಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಈ ಎಂಜಿನ್ 14.7 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ 1.6 ಬಿಹೆಚ್‌ಪಿ ಪವರ್ ರಷ್ಟು ಹೆಚ್ಚಾಗಿದೆ. 2021ರ ಹೋಂಡಾ ಸಿಬಿ125ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಶೋವಾ ಬಿಗ್ ಪಿಸ್ಟನ್ ಅಪ್ ಸೈಡ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

2021ರ ಹೋಂಡಾ ಸಿಬಿ125ಆರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ನಿಸ್ಸಿನ್ ಕ್ಯಾಲಿಪರ್ ಅಪ್ 296 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಈ ಬೈಕ್ ಸುದೀರ್ಘವಾದ ಸ್ಟ್ರೋಕ್ ಒಳಗೊಂಡಂತೆ ಎಂಜಿನ್ ಅನ್ನು ಅಪ್ಡೇಟ್ ಮಾಡಲಾಗಿದೆ. ಬೋರ್ ಮತ್ತು ಸ್ಟ್ರೋಕ್ ಈಗ 57.3 x 48.4 ಎಂಎಂ ನಲ್ಲಿದೆ. ಇನ್ನು ಹಿಂದಿನ ಮಾದರಿ ಎಂಜಿಮ್ 58 x 47.2 ಎಂಎಂ ಅನ್ನು ಹೊಂದಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಇನ್ನು ಈ ಎಂಜಿನ್ ಏರ್ ಕ್ಲೀನರ್ ಕನೆಕ್ಟರ್ ಟ್ಯೂಬ್ ಅನ್ನು ಸಹ ಪಡೆದುಕೊಂಡಿದೆ. ಹಿಂದಿನ ಮಾದರಿಯು ಅಂಡರ್ ಸ್ಲಂಗ್ ಎಕ್ಸಾಸ್ಟ್ ಹೊಂದಿದ್ದರೆ, ಹೊಸ ಬೈಕ್ ಡ್ಯುಯಲ್-ಚೇಂಬರ್ ಮಫ್ಲರ್ ಅನ್ನು ಪಡೆಯುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಇನ್ನು ಹೋಂಡಾ ಕಂಪನಿಯು ಇತ್ತೀಚೆಗೆ 2021ರ ಸಿಬಿ1000ಆರ್ ಸ್ಟ್ರೀಟ್‌ಫೈಟರ್ ಬೈಕನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಹೊಂಡಾ ಕಂಪನಿಯು ಈ ಹೊಸ 2021ರ ಸಿಬಿ1000ಆರ್ ಬೈಕನ್ನು ವಿನ್ಯಾಸದಲ್ಲಿ ಕೆಲವು ನವೀಕರಣಗಳನ್ನು ನಡೆಸಿ ಅನಾವರಣಗೊಳಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಈ ಹೊಸ ಸಿಬಿ1000ಆರ್ ಬೈಕಿನಲ್ಲಿ ಲೀಟರ್-ಕ್ಲಾಸ್ 998ಸಿಸಿ ಇನ್ ಲೈನ್ 4-ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ, ಈ ಎಂಜಿನ್ 10,500 ಆರ್‌ಪಿಎಂನಲ್ಲಿ 143 ಬಿಹೆಚ್‍ಪಿ ಪವರ್ ಮತ್ತು 8,250 ಆರ್‌ಪಿಎಂನಲ್ಲಿ 104 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಸಿಬಿ125ಆರ್ ಬೈಕ್

ಹೋಂಡಾ ಕಂಪನಿಯು ಹೊಸ ಸಿಬಿ125ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ತೀರಾ ಕಡಿಮೆ. ಯಾಕೆಂದರೆ 125ಸಿಸಿ ವಿಭಾಗದ ಈ ಬೈಕ್ ಭಾರತದಲ್ಲಿ ದುಬಾರಿ ಬೆಲೆಯಲ್ಲಿ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿಲ್ಲ.

Article Published On: Friday, November 13, 2020, 18:27 [IST]
English summary
2021 Honda CB125R Breaks Cover. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+