ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನ ಮಾದರಿಗಳಿಗಾಗಿ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಅತ್ಯುತ್ತಮ ಗ್ರೇಡ್ ಎಂಜಿನ್ ಆಯಿಲ್ ಬಿಡುಗಡೆ ಮಾಡಿದೆ.

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಸ್ಪೇನ್ ಮೂಲದ ಅತಿ ದೊಡ್ಡ ಪೆಟ್ರೋಲಿಯಂ ಉತ್ಪನ್ನ ಕಂಪನಿಯಾಗಿರುವ ರೆಪ್ಸೊಲ್ ಲೂಬ್ರಿಕಂಟ್ ಜೊತೆಗೂಡಿ ಹೊಸ ವಾಹನ ಮಾದರಿಗಳಿಗೆ ಎಂಜಿನ್ ಆಯಿಲ್ ಬಿಡುಗಡೆ ಮಾಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಮೋಟಾರ್‌ಸೈಕಲ್ ಮಾದರಿಗಳಿಗೆ ಮತ್ತು ಸ್ಕೂಟರ್ ಮಾದರಿಗಳಿಗೆ ಪ್ರತ್ಯೇಕ ಎಂಜಿನ್ ಆಯಿಲ್ ಅಭಿವೃದ್ದಿಗೊಳಿಸಿದೆ. ಹೋಂಡಾ ರೆಪ್ಸೊಲ್ ಎಂಜಿನ್ ಆಯಿಲ್ ಮಾದರಿಯನ್ನು 'ಹೋಂಡಾ ರೆಪ್ಸೊಲ್ ಮೊಟೊ ಬೈಕ್‌ರ್' ಮತ್ತು 'ಹೋಂಡಾ ರೆಪ್ಸೊಲ್ ಮೊಟೊ ಸ್ಕೂಟರ್' ಎಂಬ ಎರಡು ಮಾದರಿಯ ಆಯಿಲ್ ಗ್ರೇಡ್ ನೀಡಲಾಗಿದೆ.

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೋಂಡಾ ರೆಪ್ಸೊಲ್ ಎಂಜಿನ್ ಆಯಿಲ್ ಮಾದರಿಯು ದ್ವಿಚಕ್ರ ವಾಹನಗಳ ಎಂಜಿನ್ ಕಾರ್ಯಕ್ಷಮತೆಯನ್ನು ಸುಧಾರಿಸುವುದರ ಜೊತೆಗೆ ಇಂಧನ ದಕ್ಷತೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಜೊತೆಗೆ ಹೊಸ ಎಂಜಿನ್ ಆಯಿಲ್ ಮಾದರಿಯಿಂದಾಗಿ ದ್ವಿಚಕ್ರ ವಾಹನಗಳ ಆಕ್ಸಿರೆಷನ್ ಪ್ರಮಾಣದಲ್ಲೂ ಸುಧಾರಣೆಗೊಂಡಿದ್ದು, ಜೊಸೊ(ಜಪನಿಸ್ಸ್ ಆಟೋಮೊಟಿವ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಮಾನದಂಡಗಳಿಗೆ ಅನುಗುಣವಾಗಿ ಹೊಸ ಎಂಜಿನ್ ಆಯಿಲ್ ಸಿದ್ದಪಡಿಸಲಾಗಿದೆ.

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಹೋಂಡಾ ರೆಪ್ಸೊಲ್ ಮೊಟೊ ಬೈಕ‌್ರ್ ಎಂಜಿನ್ ಆಯಿಲ್ ಮಾದರಿಯು 10ವಿ30 ಎಂಎ ಗ್ರೇಡ್ ಹೊಂದಿದ್ದರೆ, ಹೋಂಡಾ ರೆಪ್ಸೊಲ್ ಮೊಟೊ ಸ್ಕೂಟರ್ ಎಂಜಿನ್ ಆಯಿಲ್ ಮಾದರಿಯು 10ವಿ30 ಎಂಬಿ ಗ್ರೇಡ್ ಪಡೆದುಕೊಂಡಿದೆ. ಇದರಲ್ಲಿ 10 ಮತ್ತು 30 ಸಂಕೇತ ನಾಮವು ಎಂಜಿನ್ ಆಯಿಲ್ ಮಾದರಿಯು ಆಂತರಿಕ ಘರ್ಷಣೆಯಲ್ಲಿ ದ್ರವ ಅಥವಾ ಅನಿಲದ ಆಕಾರ ಬದಲಾವಣೆಯನ್ನು ಸೂಚಿಸಲಿದ್ದು, ಇದು ತಂಪಾಗಿರುವಾಗ 10 ಮತ್ತು ಸೂಕ್ತವಾದ ಕಾರ್ಯಾಚರಣೆಯಲ್ಲಿನ ತಾಪಮಾನದಲ್ಲಿ 30 ಆಗಿರುತ್ತದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

10ವಿ30 ಎಂಎ ಗ್ರೇಡ್ ಆಯಿಲ್ ವಿಶೇಷವಾಗಿ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಾಗಿ ಮತ್ತು 10ವಿ30 ಎಂಬಿ ಗ್ರೇಡ್ ಆಯಿಲ್ ಅನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಾಗಿ ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಎಂಜಿನ್ ಆಯಿಲ್ ಉತ್ಪನ್ನವು ಈಗಾಗಲೇ ಖರೀದಿಗೆ ಲಭ್ಯವಿದೆ.

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಂಜಿನ್ ಆಯಿಲ್ ಪ್ರಮಾಣವನ್ನು 800ಎಂಎಲ್, 900ಎಂಎಲ್ ಮತ್ತು 1000ಎಂಎಲ್ ಪ್ರಮಾಣದ ಪ್ಯಾಕ್‌ಗಳಲ್ಲಿ ಖರೀದಿಸಬಹುದಾಗಿದ್ದು, ಹೊಸ ಆಯಿಲ್ ಉತ್ಪನ್ನವನ್ನು ಗಾಲ್ಪ್ ಆಯಿಲ್ ಔಟ್‌ಲೆಟ್‌ಗಳಲ್ಲಿ ಖರೀದಿಸಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೋಂಡಾ ದ್ವಿಚಕ್ರ ವಾಹನಗಳಿಗೆ ಹೊಸ ಎಂಜಿನ್ ಆಯಿಲ್ ಬಿಡುಗಡೆ

ಇನ್ನು ವಿವಿಧ ದ್ವಿಚಕ್ರ ವಾಹನ ಮಾದರಿಗಳ ಎಂಜಿನ್ ಆಯಿಲ್ ಉತ್ಪನ್ನಗಳಿಗಾಗಿ ಸುಮಾರು 26 ವರ್ಷಗಳಿಂದ ಹೋಂಡಾ ಜೊತೆಗೆ ಸಹಭಾಗೀತ್ವ ಹೊಂದಿರುವ ರೆಪ್ಸೊಲ್ ಲೂಬ್ರಿಕಂಟ್ ಕಂಪನಿಯು ಕಾಲ ಕಾಲಕ್ಕೆ ತಕ್ಕಂತೆ ಅಪ್‌ಗ್ರೆಡ್ ಎಂಜಿನ್ ಆಯಿಲ್ ಉತ್ಪನ್ನಗಳನ್ನು ಸಿದ್ದಪಡಿಸುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದೆ.

Most Read Articles

Kannada
English summary
Honda Repsol Motorcycle & Scooter Engine Oil Launched In India. Read in Kannada.
Story first published: Sunday, November 15, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X