ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ಸದ್ಯಕ್ಕೆ ಭಾರತದಲ್ಲಿ ಪ್ರತ್ಯೇಕವಾಗಿ ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಆದರೆ ಈ ಎರಡೂ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ಅನೇಕ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಿ ಬಿಡುಗಡೆಗೊಳಿಸಿದ್ದವು.

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹಿಂದೆ ಈ ಎರಡೂ ಕಂಪನಿಗಳು ಹೀರೋ ಹೋಂಡಾ ಫ್ಯಾಶನ್ ಹಾಗೂ ಹೀರೋ ಹೋಂಡಾ ಸ್ಪ್ಲೆಂಡರ್ ಸೇರಿದಂತೆ ಅನೇಕ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಿದ್ದವು. ಎರಡೂ ಕಂಪನಿಗಳು ಕೆಲ ವರ್ಷಗಳ ಹಿಂದೆ ನಿರ್ದಿಷ್ಟ ಕಾರಣಗಳಿಗಾಗಿ ಬೇರೆ ಬೇರೆಯಾದವು.

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಇದಾದ ನಂತರ ಎರಡೂ ಕಂಪನಿಗಳು ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಈಗ ಹೋಂಡಾ ಕಂಪನಿಯು ಹೀರೋ ಎಲೆಕ್ಟ್ರಿಕ್ ಕಂಪನಿಯ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೀರೋ ಎಲೆಕ್ಟ್ರಿಕ್, ಹೋಂಡಾ ಕಂಪನಿಯ ಮೂವ್ ಸ್ಕೂಟರಿನ ವಿನ್ಯಾಸವನ್ನು ನಕಲು ಮಾಡಿ ಡ್ಯಾಶ್ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದೆ. ಈ ಕಾರಣಕ್ಕೆ ಡ್ಯಾಶ್ ಸ್ಕೂಟರ್‌ನ ಮಾರಾಟ ಹಾಗೂ ಜಾಹೀರಾತನ್ನು ನಿಷೇಧಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಈ ದೂರಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್, ಹೀರೋ ಎಲೆಕ್ಟ್ರಿಕ್ ಕಂಪನಿಗೆ ಮೇ 22ರಂದು ಆದೇಶಿಸಿದೆ. ಸಾಮಾನ್ಯವಾಗಿ ವಾಹನಗಳನ್ನು ನಕಲು ಮಾಡುವ ಆರೋಪಗಳು ಚೀನಾದ ಕಂಪನಿಗಳ ಮೇಲೆ ಕೇಳಿ ಬರುತ್ತವೆ. ಈಗ ಭಾರತದ ಕಂಪನಿಯ ಮೇಲೂ ಆರೋಪ ಕೇಳಿ ಬಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೀರೋ ಎಲೆಕ್ಟ್ರಿಕ್‌ನ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ರೂ. 62,000ಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಹಲವು ತಂತ್ರಜ್ಞಾನಗಳಿಂದಾಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಮೂವ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿಲ್ಲ. ಈ ಸ್ಕೂಟರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗುತ್ತಿದೆ. ಈ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಬಗ್ಗೆ ಹೋಂಡಾ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಅಂದ ಹಾಗೆ ಹೀರೋ ಎಲೆಕ್ಟ್ರಿಕ್, ಹೀರೋ ಮೋಟೊಕಾರ್ಪ್‌ನ ಅಂಗಸಂಸ್ಥೆಯಾಗಿದೆ. ನವೀನ್ ಮುಂಜಾಲ್ ಈ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಹೀರೋ ಮೊಟೊಕಾರ್ಪ್ ಶೋ ರೂಂಗಳಲ್ಲಿ ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವುದಿಲ್ಲ.

ಹಳೆ ಪಾಲುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಎರಡು ಕಂಪನಿಗಳು ನಿರಾಕರಿಸಿವೆ. ಹೋಂಡಾ ಕಂಪನಿಯು ಮಾಡಿರುವ ಆರೋಪದ ಪ್ರಕಾರ ಎರಡೂ ಸ್ಕೂಟರ್‌ಗಳು ಅವಳಿಗಳಂತೆ ಕಾಣುತ್ತವೆ. ಹೆಡ್‌ಲೈಟ್, ಬಾಡಿ ಲುಕ್ ಸೇರಿ ವಿನ್ಯಾಸವನ್ನು ನಕಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೆಹಲಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದೆ.

Article Published On: Friday, June 5, 2020, 10:48 [IST]
English summary
Honda takes Hero Electric to court for copying scooter design. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+