500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಪ್ರೀಮಿಯಂ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದ್ದು, ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಮಾದರಿಯ ನಾಲ್ಕು ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತರಲಾದ ಆಮದು ನೀತಿ ವಿನಾಯ್ತಿಯು ವಿದೇಶಿ ಆಟೋ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸಾಕಷ್ಟು ಅನುಕೂಲಕವಾಗಿದ್ದು, ವಿದೇಶಿ ಮಾರುಕಟ್ಟೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ 2500 ವಾಹನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನಲೆ ಜಪಾನ್ ಮೋಟಾರ್ ಸೈಕಲ್ ಸಂಸ್ಥೆಯಾಗಿರುವ ಹೋಂಡಾ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ಕೆಲವು ಸೂಪರ್ ಬೈಕ್ ಮಾದರಿಗಳನ್ನು ಭಾರತದಲ್ಲೂ ಪರಿಚಯಿಸಲು ಮುಂದಾಗಿದೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಹೋಂಡಾ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಬಿಆರ್650ಆರ್, ಸಿಬಿಆರ್1000ಆರ್‌ಆರ್, ಸಿಬಿ1000ಆರ್, ಆಫ್ರಿಕನ್ ಟ್ವಿನ್ ಮತ್ತು ಗೋಲ್ಡ್‌ವಿಂಗ್ ಸೂಪರ್ ಬೈಕ್ ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ಬೈಕ್‌ಗಳು 450 ಸಿಸಿ ಯಿಂದ 500 ಸಿಸಿ ಮಧ್ಯದ ಎಂಜಿನ್ ಗಾತ್ರವನ್ನು ಹೊಂದಿರಲಿವೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಮಾಹಿತಿಗಳ ಪ್ರಕಾರ ಹೋಂಡಾ ಸಂಸ್ಥೆಯು ಹೊಸದಾಗಿ ಸಿಎಂಎಕ್ಸ್500 ರೆಬೆಲ್, ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಬೈಕ್‌ಗಳನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳು ಸಂಪೂರ್ಣವಾಗಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿವೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಹೊಸ ಬೈಕ್‌ಗಳ ಬಿಡುಗಡೆ ಕುರಿತಂತೆ ಇತ್ತೀಚೆಗೆ ನಡೆದ ಆಫ್ರಿಕನ್ ಟ್ವಿನ್ ಅಡ್ವೆಂಚರ್ ಬೈಕಿನ ಬಿಎಸ್-6 ಆವೃತ್ತಿ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಹೊಸ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ಬಗ್ಗೆ ಹೋಂಡಾ ವಿಶ್ವಾಸ ವ್ಯಕ್ತಪಡಿಸಿದೆ. ಸಂಪೂರ್ಣವಾಗಿ ಆಮದು ಬೈಕ್ ಮಾದರಿಯಾಗಿರುವುದರಿಂದ ಬೈಕ್‌ಗಳ ಬೆಲೆಯೂ ತುಸು ದುಬಾರಿಯಾಗಿರಲಿದ್ದು, ಸಿಎಂಎಕ್ಸ್500 ರೆಬೆಲ್ ಮಾದರಿಯು ಹೋಂಡಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಬಿಡುಗಡೆಯಾಗಲಿರುವ ಸಿಎಂಎಕ್ಸ್500 ರೆಬೆಲ್ ಆವೃತ್ತಿಯು ಕ್ರೂಸ್ ಬೈಕ್ ಮಾದರಿಯಾಗಿದ್ದರೆ, ಸಿಬಿ500ಎಫ್ ಮಾದರಿಯು ಸ್ಟ್ರೀಟ್ ಫೈಟರ್, ಸಿಬಿಆರ್500ಆರ್ ಸೂಪರ್ ಸ್ಪೋರ್ಟ್ಸ್ ಮತ್ತು ಸಿಬಿ500ಎಕ್ಸ್ ಮಾದರಿಯ ಅಡ್ವೆಂಚರ್ ಟೂರರ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಬೈಕ್‌ಗಳು ಒಂದೇ ಮಾದರಿಯ ಎಂಜಿನ್ ಪಡೆದುಕೊಳ್ಳಲಿದ್ದು, 471-ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನೊಂದಿಗೆ 47.5-ಬಿಎಚ್‌ಪಿ ಮತ್ತು 43-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಇದರಲ್ಲಿ ಸಿಎಂಎಕ್ಸ್500 ರೆಬೆಲ್ ಮಾದರಿಯು 471-ಸಿಸಿ ಎಂಜಿನ್ ಹೊಂದಿದ್ದರೂ 46-ಬಿಎಚ್‌ಪಿ ಮತ್ತು 43-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಹಾರ್ಲೆ ಡೆವಿಡ್ಸನ್ ಬಿಡುಗಡೆಗಾಗಿ ನಿರ್ಧರಿಸಿರುವ ಹೊಸ 350 ಸಿಸಿ ಕ್ರೂಸರ್ ಬೈಕಿಗೆ ಇದು ಪೈಪೋಟಿ ನೀಡಲಿದೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಮೇಲೆ ಹೇಳಿದಂತೆ ಹೊಸ ಬೈಕ್‌ಗಳು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಂಡಿರುವ ಹಿನ್ನಲೆಯಲ್ಲಿ ಬೆಲೆ ತುಸು ದುಬಾರಿಯಾಗಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷದಿಂದ ರೂ. 4 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿವೆ.

500 ಸಿಸಿ ಸಾಮರ್ಥ್ಯದ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಹೋಂಡಾ

ಇನ್ನು ಹೊಸ ಆಮದು ನೀತಿಯಡಿ ವಿದೇಶಿ ಮಾರುಕಟ್ಟೆಯಿಂದ ಆಮದುಗೊಳ್ಳುವ ಹೊಸ ಬೈಕ್‌ಗಳು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೋಂಡಾ ಮಾತ್ರವಲ್ಲದೆ ಸುಜುಕಿ ಮತ್ತು ಹಾರ್ಲೆ ಡೆವಿಡ್ಸನ್ ಬೈಕ್ ಸಂಸ್ಥೆಗಳು ಸಹ ಹೊಸ ಬೈಕ್‌ಗಳನ್ನು ಭಾರತದಲ್ಲಿ ಮಾರಾಟಕ್ಕೆ ಸಿದ್ದಗೊಳ್ಳುತ್ತಿವೆ.

More from DriveSpark

Article Published On: Sunday, March 8, 2020, 8:59 [IST]
English summary
According to report, Honda is planning to launch 4 new 500cc bike models in India very soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+