ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಹೆಚ್‌ಎಂಎಸ್‌ಐ) ಹಾಗೂ ಯಮಹಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ತೆರೆಯಲು ಸರ್ಕಾರದಿಂದ ಅನುಮತಿ ಕೋರಿವೆ. ಮಾರ್ಚ್ 24ರಿಂದ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಕಾರಣದಿಂದಾಗಿ ದೇಶದ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.

ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ಭಾರತದಲ್ಲಿರುವ ಈ ಎರಡು ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಕಾರಣ ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಹಾಗೂ ಯಮಹಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ತೆರೆಯಲು ಅನುಮತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ. ಕೆಲ ಷರತ್ತುಗಳೊಂದಿಗೆ ಮೇ 3ರ ನಂತರ ಉತ್ಪಾದನೆಯನ್ನು ಪುನರಾರಂಭಿಸಲು ಸರ್ಕಾರ ಅನುಮತಿ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ಅನುಮತಿ ಪಡೆದ ನಂತರವೂ ಉತ್ಪಾದನೆಯನ್ನು ಆರಂಭಿಸಲು ಹೆಚ್ಚು ಸಮಯ ಬೇಕಾಗಲಿದೆ. ಲಾಕ್‌ಡೌನ್ ಕಾರಣಕ್ಕೆ ಹೆಚ್ಚಿನ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದು, ರೈಲು, ಬಸ್ಸು ಹಾಗೂ ವಿಮಾನ ಸೇವೆಗಳು ಆರಂಭವಾಗುವವರೆಗೂ ಅವರು ವಾಪಸ್ಸಾಗುವ ಸಾಧ್ಯತೆಗಳಿಲ್ಲ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸುವ ನಿರೀಕ್ಷೆಗಳಿವೆ. ಆದರೆ ಲಾಕ್‌ಡೌನ್‌ನಿಂದ ಉತ್ಪಾದನಾ ವಲಯ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ವಿಶೇಷ ಮಾರ್ಗಸೂಚಿಗಳೊಂದಿಗೆ ವಿನಾಯಿತಿಗಳನ್ನು ನೀಡುವ ಸಾಧ್ಯತೆಗಳಿವೆ.

ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ಹೆಚ್‌ಎಂಎಸ್‌ಐ ಕಂಪನಿಯು ಭಾರತದಲ್ಲಿ ಹರಿಯಾಣ, ರಾಜಸ್ಥಾನ, ಕರ್ನಾಟಕ ಹಾಗೂ ಗುಜರಾತ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ. ಯಮಹಾ ಭಾರತದಲ್ಲಿ ಹರಿಯಾಣ, ಉತ್ತರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನ್ನ ಉತ್ಪಾದನಾ ಘಟಕಗಳನ್ನು ಹೊಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ಇತ್ತೀಚೆಗಷ್ಟೇ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕೇರಳದಲ್ಲಿರುವ ತನ್ನ ಸರ್ವೀಸ್ ಸೆಂಟರ್ ಅನ್ನು ತೆರೆಯುವುದಾಗಿ ಘೋಷಿಸಿತ್ತು. ಹೋಂಡಾದ ಈ ಸರ್ವೀಸ್ ಸೆಂಟರ್‌ಗಳನ್ನು ವಾರದಲ್ಲಿ ಎರಡು ದಿನ ಮಾತ್ರ ತೆರೆಯಲಾಗುವುದು. ಗುರುವಾರ ಹಾಗೂ ಭಾನುವಾರಗಳಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಈ ಸರ್ವೀಸ್ ಸೆಂಟರ್‌ಗಳನ್ನು ತೆರೆಯಲಾಗುತ್ತದೆ.

ಲಾಕ್‌ಡೌನ್ ಎಫೆಕ್ಟ್: ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲಿವೆ ಈ ದ್ವಿಚಕ್ರ ವಾಹನ ಕಂಪನಿಗಳು

ಲಾಕ್‌ಡೌನ್ ಕಾರಣ, ಕಂಪನಿಗಳು ವಾಹನಗಳ ಮೇಲೆ ನೀಡಲಾಗುವ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿವೆ. ಲಾಕ್‌ಡೌನ್ ಸಮಯದಲ್ಲಿ ಕೊನೆಗೊಳ್ಳುವ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ಯಮಹಾ ಕಂಪನಿಯು ಜೂನ್‌ವರೆಗೂ ವಿಸ್ತರಿಸಿದೆ.

Most Read Articles

Kannada
English summary
Honda Yamaha will resume operations soon in India. Read in Kannada.
Story first published: Tuesday, April 28, 2020, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X