ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾ ಕಂಪನಿಯು ಕಳೆದ ಫೆಬ್ರವರಿ 25ರಂದು ದೇಶೀಯ ಮಾರುಕಟ್ಟೆಯಲ್ಲಿ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ ಭಾರತದಲ್ಲಿ ಹಸ್ಕ್​ವರ್ನಾ ಕಂಪನಿಯು ಈ ಎರಡು ಮಾದರಿಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾ ತನ್ನ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳ ಬೆಲೆಯನ್ನು ರೂ.4,736 ಗಳವರೆಗೆ ಹೆಚ್ಚಿಸಲಾಗಿದೆ. ಇದೀಗ ಈ ಎರಡು ಬೈಕುಗಳ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.84 ಲಕ್ಷಗಳಾಗಿದೆ. ಈ ಎರಡೂ ಮಾದರಿಗಳನ್ನು ಭಾರತದಲ್ಲಿ ಮೊದಲ ಬಾರಿಗೆ ನವೆಂಬರ್‌ನಲ್ಲಿ ನಡೆದ 2019 ಇಂಡಿಯಾ ಬೈಕ್ ವೀಕ್ (ಐಬಿಡಬ್ಲ್ಯು) ನಲ್ಲಿ ಪ್ರದರ್ಶಿಸಲಾಗಿತ್ತು. ಹಸ್ಕ್​ವರ್ನಾ ಕಂಪನಿಯು ಈ ಬೈಕ್ ಗಳನ್ನು ಭಾರತದಲ್ಲಿ ಕೆಟಿಎಂ ಶೋರೂಂಗಳ ಮೂಲಕ ಮಾರಾಟ ಮಾಡುತ್ತದೆ.

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಬೈಕ್ ನಿಯೋ-ರೆಟ್ರೊ ಸ್ಕ್ರ್ಯಾಂಬ್ಲರ್ ವಿನ್ಯಾಸವನ್ನು ಹೊಂದಿದೆ. ವಿಟ್‌ಪಿಲೆನ್ 250 ಬೈಕ್ ಕೆಫೆ ರೇಸರ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಇದರ ಜೊತೆಗೆ ಎರಡು ಬೈಕ್‍‍ಗಳು ಕೆಟಿಎಂ ಬೈಕ್‍‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍‍ಗಳನ್ನು ಹೊಂದಿವೆ. ಸ್ವಾರ್ಟ್‍‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍‍ನಂತಿದ್ದರೆ, ವಿಟ್‍‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍‍ಪಿಲೆನ್ 250 ಬೈಕ್, ಹ್ಯಾಂಡಲ್‍‍ಬಾರ್ ಮೇಲೆ ಕ್ಲಿಪ್ ಹಾಗೂ ಮುಂಭಾಗಕ್ಕೆ ಬಾಗಿರುವ ಸೀಟಿಂಗ್ ಸಿಸ್ಟಂಗಳನ್ನು ಹೊಂದಿದೆ. ಈ ಬೈಕ್‍‍ಗಳಲ್ಲಿ ಕೆಟಿ‍ಎಂ ಡ್ಯೂಕ್ 250 ಬೈಕಿನಲ್ಲಿರುವಂತಹ 248.8 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಈ ಎಂಜಿನ್ 29.5 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‍‍ಗಳಲ್ಲಿ ಕೆಟಿಎಂ ಬೈಕ್‍‍ಗಳಲ್ಲಿರುವಂತಹ ಟ್ರೆಲ್ಲಿಸ್ ಫ್ರೇಂ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂನಿಂದಾಗಿ ಬೈಕಿನ ಲುಕ್ ಹೆಚ್ಚುವುದರ ಜೊತೆಗೆ ಹ್ಯಾಂಡ್ಲಿಂಗ್ ಸಹ ಸುಧಾರಿಸಲಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಸಸ್ಪೆಂಷನ್‍‍ಗಳಿಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯುಪಿ ಅಪೆಕ್ಸ್ ಅಪ್‍‍ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ ಶಾಕ್ ಅಬ್ಸರ್ವರ್‍‍ಗಳನ್ನು ನೀಡಲಾಗಿದೆ. ಈ ಬೈಕ್‍‍ಗಳಲ್ಲಿ 17 ಇಂಚಿನ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಹೊಸ ಹಸ್ಕ್​ವರ್ನಾ ಬೈಕುಗಳು

ಮುಂಭಾಗದಲ್ಲಿ 320 ಎಂಎಂನ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂನ ಡಿಸ್ಕ್ ಬ್ರೇಕ್‍‍ಗಳಿವೆ. ಬಾಷ್ ಕಂಪನಿಯ ಡ್ಯುಯಲ್ ಚಾನೆಲ್ ಎಬಿ‍ಎಸ್ ಬ್ರೇಕಿಂಗ್ ಟೆಕ್ನಾಲಜಿಯನ್ನು ಈ ಬೈಕ್‍‍ಗಳಲ್ಲಿ ಅಳವಡಿಸಲಾಗಿದೆ. ಈ ಬೈಕ್‍‍ಗಳು 9.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿವೆ. ಈ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಡೊಮಿನಾರ್ 250, ಯಮಹಾ ಎಫ್‌ಝಡ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, May 20, 2020, 10:14 [IST]
English summary
Husqvarna Bikes Prices Increased By Up To Rs 4,700. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+