ತಡವಾಗಲಿದೆ ಹೊಸ ಹಸ್ಕ್ವರ್ನಾ ಬೈಕುಗಳ ಬಿಡುಗಡೆ
ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್ವರ್ನಾ ತನ್ನ ಹೊಸ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಸ್ಕ್ವರ್ನಾ ತನ್ನ ಸ್ವಾರ್ಟ್‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍ಗಳನ್ನು ಇದೇ ವರ್ಷದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ವರದಿಗಳು ಪ್ರಕಟವಾಗಿತ್ತು. ಅದರೆ ಹೊಸ ವರದಿಗಳ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್ಪಿಲೆನ್ 401 ಬೈಕ್‍ಗಳ ಬಿಡುಗಡೆಯು ತಡವಾಗಲಿದೆ.

ಭಾರತದಲ್ಲಿ 250ಸಿಸಿಯ ಸ್ವಾರ್ಟ್‍ಪಿಲೆನ್ ಮತ್ತು ವಿಟ್ಪಿಲೆನ್ ಬೈಕ್‍ಗಳ ಜೊತೆ ತನ್ನ 401ಸಿಸಿಯ ಹಿರಿಯ ಸಹೋದರರು ಸೇರಿಕೊಳ್ಳಲಿದೆ, ಆದರೆ ಅದಕ್ಕೆ ಸ್ವಲ್ಪ ತಿಂಗಳುಗಳು ಕಾಯಬೇಕಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಸ್ವಾರ್ಟ್ಪಿಲೆನ್ 250 ಮತ್ತು ವಿಟ್‌ಪಿಲೆನ್ 250 ಬೈಕುಗಳು ಕೆಟಿಎಂ 250 ಡ್ಯೂಕ್ ಅನ್ನು ಆಧರಿಸಿದಂತೆಯೇ, ಮುಂಬರುವ ಸ್ವಾರ್ಟ್‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍ಗಳು 390 ಡ್ಯೂಕ್ ಮಾದರಿಯನ್ನು ಆಧರಿಸಿರಲಿದೆ.

ಕೆಟಿಎಂ 390 ಮಾದರಿಯ ಎಂಜಿನ್ ಅನ್ನು ಈ ಬೈಕ್‍ಗಳು ಹೊಂದಿರಲಿದೆ. ಹಸ್ಕ್ವರ್ನಾ 401 ಬೈಕ್ 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೂಂದಿರಲಿದೆ. ಈ ಎಂಜಿನ್ 44 ಬಿಹೆಚ್‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ವಾರ್ಟ್ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍ಗಳು ಡಬ್ಲ್ಯೂಪಿ ಯುಎಸ್ಡಿ ಫ್ರಂಟ್ ಫೋರ್ಕ್ಸ್, ರಿಯರ್ ಮೊನೊಶಾಕ್, ಬ್ರೇಕಿಂಗ್ ಸಿಸ್ಟಮ್, ಟ್ರೆಲ್ಲಿಸ್ ಫ್ರೇಮ್ ಮತ್ತು ಹಲವಾರು ಭಾಗಗಳು ಕೆಟಿಎಂ ಬೈಕಿನಿಂದ ಎರವಲು ಪಡೆಯಲಿದೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 250 ಬೈಕ್ ನಿಯೋ-ರೆಟ್ರೊ ಸ್ಕ್ರ್ಯಾಂಬ್ಲರ್ ವಿನ್ಯಾಸವನ್ನು ಹೊಂದಿದೆ. ವಿಟ್‌ಪಿಲೆನ್ 250 ಬೈಕ್ ಕೆಫೆ ರೇಸರ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ವಿಶೇಷವೆಂದರೆ ಹಸ್ಕ್ವರ್ನಾದ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍ಗಳನ್ನು ಅಳವಡಿಸಲಾಗಿದೆ.

ಇದರ ಜೊತೆಗೆ ಎರಡು ಬೈಕ್‍ಗಳು ಕೆಟಿಎಂ ಬೈಕ್‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍ಗಳನ್ನು ಹೊಂದಿವೆ. ಸ್ವಾರ್ಟ್‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍ನಂತಿದ್ದರೆ, ವಿಟ್‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍ಗಳನ್ನು ಅಳವಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಇತ್ತೀಚೆಗೆ ಕೆಟಿಎಂ ಮತ್ತು ಹಸ್ಕ್ವರ್ನಾ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಸರಣಿಯಲ್ಲಿರುವ ಆಯ್ದ ಬೈಕುಗಳ ಬೆಲೆಯನ್ನು ಏರಿಕೆ ಮಾಡಿದೆ. ಎರಡು ಬ್ರ್ಯಾಂಡ್‌ಗಳ ಬೈಕುಗಳ ಮಾದರಿಯನ್ನು ಅವಲಂಬಿಸಿ ರೂ.1,200 ರಿಂದ ರೂ.8,500 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು ಒಂದೇ ರೀತಿಯ ಬೆಲೆಗಳನ್ನು ಹೊಂದಿದೆ. ಅಲ್ಲದೇ ಈ ಎರಡು ಬೈಕುಗಳ ಬೆಲೆಯನ್ನು ರೂ.1,790 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ ಈ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.86 ಲಕ್ಷಗಳಾಗಿದೆ.

ಹಸ್ಕ್ವರ್ನಾ ಕಂಪನಿಯು ಸ್ವಾರ್ಟ್‌ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕುಗಳನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಜಾಜ ಡೋಮಿನಾರ್ 400 ಮತ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








