ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ಹಸ್ಕ್​ವರ್ನಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2021ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಸಾಕಷ್ಟು ಆಧುನಿಕವಾಗಿರುವ ಈ ಎಲೆಕ್ಟ್ರಿಕ್ ಸ್ಕೂಟರಿನ ವಿನ್ಯಾಸವು ಕಾನ್ಸೆಪ್ಟ್ ಸ್ಕೂಟರ್‌ ಅನ್ನು ಹೋಲುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ಹಸ್ಕ್​ವರ್ನಾ ಕಂಪನಿಯು ಈ ಸ್ಕೂಟರ್ ಅನ್ನು ಬಜಾಜ್‌ ಕಂಪನಿಯ ಚಕನ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಿದೆ. ಹಸ್ಕ್​ವರ್ನಾ ಕಂಪನಿಯು ಎಲೆಕ್ಟ್ರಿಕ್ ಬೈಕ್‌ಗಳನ್ನು ಸಹ ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಲಾಗಿದೆ. ಆದರೆ ಕಂಪನಿಯು ಬೈಕ್ ಬಿಡುಗಡೆಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಭಾರತದಲ್ಲಿ ಹಸ್ಕ್​ವರ್ನಾ ಬೈಕುಗಳನ್ನು ಬಜಾಜ್‌ನ ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ಹಸ್ಕ್​ವರ್ನಾ ಕಂಪನಿಯು ಭಾರತದಲ್ಲಿ ಹೊಸ 200 ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ. ಈ ಬೈಕ್ ಅನ್ನು ಪುಣೆ ಬಳಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಭಾರತದ ಯುವ ಗ್ರಾಹಕರಿಗಾಗಿ 200 ಸಿಸಿಯ ಸ್ವಾರ್ಟ್‌ಪಿಲೆನ್ ಬಿಡುಗಡೆಗೊಳಿಸಬಹುದೆಂದು ಹೇಳಲಾಗಿದೆ. ಈ ಬೈಕಿನ ಬೆಲೆ ಬೇರೆ ಬೈಕುಗಳಿಗಿಂತ ಕಡಿಮೆಯಾಗುವ ಸಾಧ್ಯತೆಗಳಿವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಹಸ್ಕ್​ವರ್ನಾ ಕಂಪನಿಯು ವಿಟ್‌ಪಿಲೆನ್ 250 ಹಾಗೂ ಸ್ವಾರ್ಟ್‌ಪಿಲೆನ್ 250 ಬೈಕುಗಳನ್ನು ಬಿಡುಗಡೆಗೊಳಿಸಿತ್ತು. ಹಸ್ಕ್​ವರ್ನಾ ಬೈಕುಗಳಾದ ವಿಟ್‌ಪಿಲೆನ್ 250 ಹಾಗೂ ಸ್ವಾರ್ಟ್‌ಪಿಲೆನ್ 250 ಬೈಕುಗಳ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.1.80 ಲಕ್ಷಗಳಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ಸ್ವೀಡಿಷ್ ಬೈಕ್ ತಯಾರಕ ಕಂಪನಿಯಾದ ಹಸ್ಕ್​ವರ್ನಾ ಕೆಟಿಎಂ ಸಮೂಹದ ಭಾಗವಾಗಿದೆ. ಭಾರತದಲ್ಲಿ ಕೆಟಿಎಂ ಕಂಪನಿಯು ಬಜಾಜ್ ಆಟೋ ಜೊತೆ ವ್ಯಾಪಾರ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಎರಡೂ ಬೈಕ್‌ಗಳು ಕೆಟಿಎಂ ಡ್ಯೂಕ್ 250 ಎಂಜಿನ್ ಬಳಸುತ್ತವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ಕೆಟಿಎಂ ಡ್ಯೂಕ್ 200 ಬೈಕಿನಲ್ಲಿರುವ ಎಂಜಿನ್ ಅನ್ನು ಹೊಸ 200 ಸಿಸಿ ಬೈಕಿನಲ್ಲಿಯೂ ಬಳಸುವ ಸಾಧ್ಯತೆಗಳಿವೆ. ಈ ಎಂಜಿನ್ 25 ಬಿಹೆಚ್‌ಪಿ ಪವರ್ ಹಾಗೂ 19.3 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಹಸ್ಕ್​ವರ್ನಾ

ದೇಶದ 45 ನಗರಗಳಲ್ಲಿರುವ 100 ಕೆಟಿಎಂ ಶೋರೂಂಗಳಲ್ಲಿ ಹಸ್ಕ್​ವರ್ನಾ ಬೈಕುಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಪುಣೆಯಲ್ಲಿರುವ ಬಜಾಜ್‌ ಕಂಪನಿಯ ಚಕನ್ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ವಿಟ್‌ಪಿಲೆನ್ 250 ಹಾಗೂ ಸ್ವಾರ್ಟ್‌ಪಿಲೆನ್ 250 ಬೈಕಿನಲ್ಲಿರುವ ಹಲವಾರು ಭಾಗಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನಿಂದ ಪಡೆಯಲಾಗಿದೆ.

Article Published On: Monday, September 7, 2020, 16:28 [IST]
English summary
Husqvarna to launch electric scooter in Indian market. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+